ಒಂದಕ್ಕಿಂತ ಹೆಚ್ಚು ಸಂಪರ್ಕ : ಜೂನ್ ನಿಂದ ಸಿಲಿಂಡರ್ ಇಲ್ಲ

LPG
ನವದೆಹಲಿ, ಮೇ 17 : ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ಕಹಿ ಸುದ್ದಿಯೊಂದು ಕಾದಿದೆ. ಜೂನ್ ಒಂದರಿಂದ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿದ ಗ್ರಾಹಕರ ವಿಳಾಸ ಧೃಡೀಕರಣಗೊಳ್ಳದಿದ್ದರೆ, ಸಿಲಿಂಡರ್ ಸರಬರಾಜು ಸ್ಥಗಿತಗೊಳಿಸಲು ಸರ್ಕಾರಿ ಸ್ವಾಮ್ಯದ ಅನಿಲ ಕಂಪೆನಿಗಳು ನಿರ್ಧರಿಸಿವೆ.

'ನಿಮ್ಮ ಗ್ರಾಹಕರನ್ನು ತಿಳಿಯಿರಿ' (Know Your Customer) ಮೂಲಕ ವಿಳಾಸ ಸರಿಯಾಗಿ ದೃಢಪಡದ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಜೂನ್ 1ರಿಂದ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಲು ಮೂರು ಕಂಪನಿಗಳು ಜಂಟಿಯಾಗಿ ನಿರ್ಧಾರ ಕೈಗೊಂಡಿವೆ.

ಇವುಗಳ ಜೊತೆಗೆ ಸಬ್ಸಿಡಿರಹಿತ ಸಿಲಿಂಡರ್ ನೀಡಿಕೆ ಮತ್ತು ಯಾವುದೇ ರೀತಿಯ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗುವುದಿಲ್ಲ ಎಂದು ಭಾರತೀಯ ತೈಲ ನಿಗಮ (ಐಒಸಿ) ಸ್ಪಷ್ಟಪಡಿಸಿದೆ. ಒಂದಕ್ಕಿಂತ ಹೆಚ್ಚು ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕನ್ನು ಈಗಾಗಲೇ ಗುರುತಿಸಲಾಗಿದೆ. ಅವರಿಗೆ ಸಿಲಿಂಡರ್ ಪೂರೈಕೆ ಮಾಡುವುದಿಲ್ಲ ಎಂದು ಕಂಪನಿಗಳು ಹೇಳಿವೆ.

ಭಾರತೀಯ ತೈಲ ನಿಗಮ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮೂರು ಕಂಪೆನಿಗಳು ಜಂಟಿಯಾಗಿ ಈ ನಿರ್ಧಾರ ಕೈಗೊಂಡಿವೆ. ಗ್ರಾಹಕರರಿಗೆ ಜೂನ್ ನಿಂದ ಸಿಲಿಂಡರ್ ಪೂರೈಸಬೇಕಾದರೆ, ವಿಳಾಸ ಧೃಡೀಕರಿಸಿ ಎಂದು ಕಂಪನಿಗಳು ಮನವಿ ಮಾಡಿವೆ.

ಕಾರಣವೇನು : ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಹೆಸರನ್ನು ಕೆವೈಸಿಗೆ ದಾಖಲಾತಿ ಸಹಿತ ತಮ್ಮ ಸಮೀಪದ ಎಲ್‌ಪಿಜಿ ವಿತರಕರಿಗೆ ನೀಡಬೇಕಾಗಿದೆ. ಹೀಗೆ ದಾಖಲಾತಿ ನೀಡಿದ ಗ್ರಾಹಕರು ಮಾತ್ರ ಸಿಲಿಂಡರ್ ಪಡೆಯಬಹುದು.

ಒಂದಕ್ಕಿಂತ ಅಧಿಕ ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಎಲ್‌ಪಿಜಿ ವಿತರಕರ ಗಮನಕ್ಕೆ ತರುವಂತೆ ಐಒಸಿ ಹಿಂದೆಯೂ ಮನವಿ ಮಾಡಿದ್ದು. 2012 ಡಿಸೆಂಬರ್ 31ರೊಳಗೆ ಮಾಹಿತಿ ನೀಡುವಂತೆ ಗ್ರಾಹಕರಿಗೆ ಸೂಚಿಸಿತ್ತು.

ಆದರೆ, ಕೆಲವು ಗ್ರಾಹಕರು ಇನ್ನೂ ಈ ಬಗ್ಗೆ ವಿತರಿಕರಿಗೆ ಮಾಹಿತಿ ನೀಡಿಲ್ಲ. ಆದ್ದರಿಂದ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರವನ್ನು ಕಂಪನಿಗಳು ಕೈಗೊಂಡಿವೆ. ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಒಂದಕ್ಕಿಂತ ಹೆಚ್ಚು ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ವಿತರಕರಿಗೆ ಮಾಹಿತಿ ನೀಡುವಂತೆ ಕಂಪನಿಗಳು ಮನವಿ ಮಾಡಿವೆ. (ಎಲ್‌ಪಿಜಿ ಸಬ್ಸಿಡಿ: ಜೂನ್ ನಿಂದ ಬ್ಯಾಂಕ್ ಖಾತೆಗೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+