ಚಿತ್ರದಲ್ಲಿ: ಗೋಲ್ಡನ್ ಸ್ಟಾರ್ ಲಕ್ಕಿ ಸ್ಟಾರ್ ಗೋ ಗ್ರೀನ್
ಬೆಂಗಳೂರು, ಮೇ.14: ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಇಬ್ಬರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಗೋ ಗ್ರೀನ್' ಮಂತ್ರ ಜಪಿಸುತ್ತಿದ್ದರು. ರಮ್ಯಾ ಹಾಗೂ ಗಣೇಶ್ ಅವರು ಸ್ಥಳೀಯ ತಂಡ ರಾಯಲ ಚಾಲೆಂಜರ್ಸ್ ಬೆಂಗಳೂರು ತಂಡದ ಹಸಿರು ಟೀ ಶರ್ಟ್ ಧರಿಸಿದ್ದರು.
ಇಬ್ಬರು ತಾರೆಯರ ಕೈಲಿ ದೊಡ್ಡ ಕ್ರಿಕೆಟ್ ಚೆಂಡು ಅದರಲ್ಲಿ ಸಸಿ ಚಿಗುರೊಡೆದಿತ್ತು. ಆಟೋರಾಜ ಚಿತ್ರದ ಪ್ರೊಮೋಷನ್ ಬ್ಯುಸಿಯಲ್ಲಿರುವ ಗಣೇಶ್ ಅವರು ಬಹುದಿನಗಳ ನಂತರ ರಮ್ಯಾ ಅವರನ್ನು ಭೇಟಿ ಮಾಡಿದ ಸಂತಸದಲ್ಲಿದ್ದರು. ಚುನಾವಣೆ ಪ್ರಚಾರ ಕಾರ್ಯದ ನಂತರ ಕ್ರಿಕೆಟ್ ಪ್ರಚಾರಕ್ಕೆ ಹೊರಳಿರುವ ರಮ್ಯಾ ಅವರ ಉಪಸ್ಥಿತಿ ಆರ್ ಸಿಬಿಗೆ ಲಕ್ಕಿಯಾಗುವುದೇ? ಯಾವನಿಗೊತ್ತು.
ಅಂದ ಹಾಗೆ ಕಿಂಗ್ಸ್ XI ಪಂಜಾಬ್ ವಿರುದ್ಧ ಗೆದ್ದರಷ್ಟೇ ವಿರಾಕ್ ಕೊಹ್ಲಿ ಪಡೆಗೆ ಮರ್ಯಾದೆ. ಸ್ಕೋರ್ ಕಾರ್ಡ್ ನೋಡಿ
ಉಳಿದ ಸುದ್ದಿಗಳಲ್ಲಿ ಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಚಿಟ್ ಫಂಡ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ, ನಾಸಾ ಹೊರ ಹಾಕಿರುವ ಸೂರ್ಯನ ವಿಕಿರಣ ಚಿತ್ರ, ಅಜ್ಮೇರ್ ದರ್ಗಾದಲ್ಲಿ ಕಂಡ ಕಾಂಗ್ರೆಸ್ ನಾಯಕರ ದಂಡು ಎಲ್ಲವೂ ಇಂದಿನ ಪ್ಯಾಕೇಜ್ ನಲ್ಲಿದೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ನಮೋ ನಾರಾಯಣ್ ಮೀನಾ, ಸಚಿನ್ ಪೈಲಟ್ ಸೇರಿದಂತೆ ಕೇಂದ್ರ ಸಚಿವರ ದಂಡು ಪ್ರಧಾನಿ ಮನ ಮೋಹನ್ ಸಿಂಗ್ ಪರವಾಗಿ ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿ ಚಾದರ ಹೊದೆಸಿದರು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಇಬ್ಬರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಗೋ ಗ್ರೀನ್' ಮಂತ್ರ ಜಪಿಸುತ್ತಿದ್ದರು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ಸೂರ್ಯನಿಂದ ಹೊರಹೊಮ್ಮುತ್ತಿರುವ ಜ್ವಾಲೆಯ ದರ್ಶನ ನಾಸಾದ ಟೆಲಿಸ್ಕೋಪ್ ಕೆಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ಗುವಾಹಟಿ: ಬ್ರಹ್ಮಪುತ್ರಾ ನದಿ ತಟದಲ್ಲಿ ಕ್ರಿಕೆಟ್ ಆಡುತ್ತಿರುವ ಚಿಣ್ಣರು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ಕೋಲ್ಕತ್ತಾ:ಚಿಟ್ ಫಂಡ್ ಅವ್ಯವಹಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ವೈಟ್ ಹೌಸ್ ನಲ್ಲಿ ಕಂಡಿದ್ದು ಹೀಗೆ












Click it and Unblock the Notifications