ಬಾಗಲಕೋಟೆ ಕಾಂಗ್ರೆಸ್ ಭದ್ರ ಕೋಟೆ

 Bagalkot
ಬಾಗಲಕೋಟೆ, ಮೇ 13 : ಕಳೆದ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಬಾಗಲಕೋಟೆ ಜಿಲ್ಲೆ ಈ ಬಾರಿಯ ಚುನಾವಣೆಯಲ್ಲಿ ಛಿದ್ರವಾಗಿದೆ. ಜಿಲ್ಲೆಯಲ್ಲಿ ಆರು ಸ್ಥಾನಗಳು ಕೈವಶವಾಗಿವೆ. ಮಾಜಿ ಸಚಿವ ಗೋವಿಂದ ಎಂ.ಕಾರಜೋಳ ಮುಧೋಳ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಬಿಜೆಪಿಗೆ ಕೊಂಚ ರಿಲೀಫ್ ನೀಡಿದ್ದಾರೆ.

ಕೆಜೆಪಿ ಸೇರುತ್ತೇನೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿದ್ದ, ಮುರುಗೇಶ್ ನಿರಾಣಿ ಬೀಳಗಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ.ಪಾಟೀಲ್ ಅವರ ವಿರುದ್ಧ ನಿರಾಣಿ 11 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಭವಗೊಂಡಿದ್ದಾರೆ.

ಜಿಲ್ಲೆಯ ರಾಜಕಾರಣಕ್ಕೆ ಈ ಬಾರಿ ತಾರಾ ಮೆರಗು ಲಭಿಸಿದ್ದು, ನಟಿ ಉಮಾಶ್ರೀ ತೆರೆದಾಳ ಕ್ಷೇತ್ರದಲ್ಲಿ ವಿಜಯದ ನಗೆ ಬೀರಿದ್ದಾರೆ. ಜಿಲ್ಲೆಯ ಮುಧೋಳ ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದ್ದು, ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ.

2008ರ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು. ಈ ಚುನಾವಣೆಯಲ್ಲಿ ಅದರ ಸೇಡು ತೀರಿಸಿಕೊಂಡಿರುವ ಕಾಂಗ್ರೆಸ್ ಬಿಜೆಪಿಗೆ ಒಂದು ಸ್ಥಾನವನ್ನು ಮಾತ್ರ ನೀಡಿದೆ.

ಬಾಗಲಕೋಟೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಮುಧೋಳ
ಗೋವಿಂದ ಕಾರಜೋಳ
ಬಿಜೆಪಿ
64,727 ಆರ್.ಬಿ.ತಿಮ್ಮಾಪೂರ
ಕಾಂಗ್ರೆಸ್
59,549
ತೆರದಾಳ
ಉಮಾಶ್ರೀ
ಕಾಂಗ್ರೆಸ್
70,189 ಸಿದ್ದು ಸವದಿ
ಬಿಜೆಪಿ
67,590
ಜಮಖಂಡಿ
ಸಿದ್ದು ನ್ಯಾಮಗೌಡ
ಕಾಂಗ್ರೆಸ್
49,145
ಜಗದೀಶ್ ಗುಡಗುಂಟಿ
ಪಕ್ಷೇತರ
27,993
ಬೀಳಗಿ
ಜೆ.ಟಿ.ಪಾಟೀಲ್
ಕಾಂಗ್ರೆಸ್
66,655
ಮುರುಗೇಶ್ ನಿರಾಣಿ
ಬಿಜೆಪಿ
55,417
ಬದಾಮಿ
ಬಿ.ಬಿ.ಚಿಮ್ಮನಕಟ್ಟಿ
ಕಾಂಗ್ರೆಸ್
57,103
ಮಹಾಂತೇಶ್ ಮಮದಾಪುರ
ಜೆಡಿಎಸ್
41,957
ಬಾಗಲಕೋಟೆ ಎಚ್.ವೈ.ಮೇಟಿ ಕಾಂಗ್ರೆಸ್ 67,749 ವೀರಣ್ಣ ಚಿರಂತಿಮಠ ಬಿಜೆಪಿ 64,819
ಹುನಗುಂದ ವಿಜಯಾನಂದ ಕಾಶಪ್ಪನವರ್ ಕಾಂಗ್ರೆಸ್ 72,720 ದೊಡ್ಡನಗೌಡ ಪಾಟೀಲ್ ಬಿಜೆಪಿ 56,923
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+