Get Updates
Get notified of breaking news, exclusive insights, and must-see stories!

ವಂದೇ ಮಾತರಂಗೆ ವಂದಿಸುವುದಿಲ್ಲ: ಸಂಸದ ರಹ್ಮಾನ್

BSP MP Shafiqur Rahman Barq
ನವದೆಹಲಿ, ಮೇ.10: ಲೋಕಸಭೆಯಲ್ಲಿ ರಾಷ್ಟ್ರಗೀತೆ ವಂದೇಮಾತರಂ ನುಡಿಸಿದಾಗ ಸದನದಿಂದ ಹೊರ ನಡೆದಿದ್ದ ಬಿಎಸ್ ಪಿ ಸಂಸದ ಶಾಫಿಖುರ್ ರಹ್ಮಾನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬುಧವಾರ ಲೋಕಸಭೆಯಲ್ಲಿ ನಡೆದ ಘಟನೆಗೆ ಕ್ಷಮೆಯಾಚಿಸಲಾರೆ ಎಂದು ರಹ್ಮಾನ್ ಬರ್ಖ್ ಹೇಳಿದ್ದಾರೆ.

ರಾಷ್ಟ್ರಗೀತೆಯನ್ನು ನಾನು ಗೌರವಿಸುತ್ತೇನೆ. ಅದರೆ, ವಂದೇಮಾತರಂ ರಾಷ್ಟ್ರಗೀತೆಯಲ್ಲ. ಅದು ಮಾತೃಭೂಮಿ ವಂದಿಸುವ ಹಾಡು. ಮುಸ್ಲಿಮನಾಗಿ ನಾನು ಅಲ್ಲಾನಿಗೆ ಮಾತ್ರ ತಲೆ ಬಾಗುತ್ತೇನೆ. ಅಲ್ಲಾನಿಗೆ ಮಾತ್ರ ವಂದಿಸುತ್ತೇನೆ ಎಂದು ರಹ್ಮಾನ್ ಹೇಳಿದ್ದಾರೆ.

ನಾನು ಮಾತೃ ಭೂಮಿಗಾಗಲಿ, ಬೇರೆ ದೇವರಿಗಾಗಲಿ ತಲೆ ಬಾಗುವ ಅವಶ್ಯಕತೆ ಇಲ್ಲ. ಈ ಹಿಂದೆ ಕೂಡಾ ವಂದೇಮಾತರಂ ನುಡಿಸಿದಾಗ ಸಭೆಯಿಂದ ಹೊರಕ್ಕೆ ನಡೆದಿದ್ದೆ. ನಾನು ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಬರ್ಖ್ ಹೇಳಿದ್ದಾರೆ.

ಆದರೆ, ಬರ್ಖ್ ನಡೆಯನ್ನು ಅನೇಕ ಮುಸ್ಲಿಂ ಸಂಸದರು ಖಂಡಿಸಿದ್ದಾರೆ. ಲೋಕಸಭೆ ಸ್ಪೀಕರ್ ಮೀರಾಕುಮಾರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬರ್ಖ್ ಅವರಿಂದ ವಿವರಣೆ ಕೇಳಲಾಗಿದೆ. ಈ ಬಗ್ಗೆ ಅವರು ಸ್ಪಷ್ಟವಾಗಿ ವಿವರಿಸಬೇಕು ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಸಂಭಾಳ್ ನಿಂದ ಆಯ್ಕೆಯಾಗಿರುವ ಬಹುಜನಸಮಾಜವಾದಿ ಪಕ್ಷದ ಸಂಸತ್ ಸದಸ್ಯ ಬರ್ಖ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ಬಿಜೆಪಿ, 'ಇದೊಂದು ತಾಲಿಬಾನಿ ನಡೆಯಾಗಿದೆ ಎಂದಿದೆ. ಇಂಥ ವ್ಯಕ್ತಿಗಳು ಜನಪ್ರತಿನಿಧಿಯಾಗಲು ಸೂಕ್ತರಲ್ಲ. ಸರ್ವಧರ್ಮೀಯ ಶಾಂತಿಯ ತೋಟದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗಳು ಇವರು' ಎಂದು ಟೀಕಿಸಿದೆ.

ಸಂಸತ್ತಿನಲ್ಲಿ ರಾಷ್ತ್ರಗೀತೆ ಜನಗಣ ಮನ ಹಾಗೂ ವಂದೇ ಮಾತರಂ ಹಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಸ್ವಾತಂತ್ರ್ಯ ಬಂದ ಕಾಲದಿಂದಲೂ ಇದು ಜಾರಿಯಲ್ಲಿದೆ ಆದರೆ, ಬಿಎಸ್ ಪಿ ಸಂಸದನ ನಡೆ ಖಂಡನೀಯ, ಸಂವಿಧಾನಕ್ಕೆ ಅಪಮಾನ ಎಸಗಿದ್ದಾರೆ ಎಂದು ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ವಂದೇಮಾತರಂ ಗೆ ತಲೆಬಾಗದ ಸಂಸದ ಬರ್ಖ್ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲೂ ಭಾರಿ ಚರ್ಚೆ ನಡೆದಿದೆ. ಅಲ್ಲಿ ನಡೆದಿರುವ ಚರ್ಚೆ ಕೆಲವು ಟ್ವೀಟ್ಸ್ ಇಲ್ಲಿದೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+