ಬಿಜೆಪಿಗೆ 12 ಜೆಡಿಎಸ್ಸಿಗೆ 13 ಜಿಲ್ಲೆಗಳಲ್ಲಿ No Entry

ಬಿಜೆಪಿ 12: ಒಟ್ಟು 12 ಜಿಲ್ಲೆಗಳಲ್ಲಿ ಮತದಾರ ಬಿಜೆಪಿಗೆ ಒಂದೂ ಸ್ಥಾನವನ್ನು ನೀಡಿಲ್ಲ. ಅವು ಯಾವುವೆಂದರೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ಯಾದಗಿರಿ.
ಜೆಡಿಎಸ್ 13: ಇದು ಬಿಜೆಪಿಗಷ್ಟೇ ಸೀಮಿತವಲ್ಲ. 13 ಜಿಲ್ಲೆಗಳಲ್ಲಿ ಮತದಾರ ಜೆಡಿಎಸ್ ಪಕ್ಷಕ್ಕೂ ನೋ ಎಂಟ್ರಿ ಅಂದಿದ್ದಾನೆ. ಅವು ಚಾಮರಾಜನಗರ, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ಗದಗ, ಗುಲ್ಬರ್ಗ, ಹಾವೇರಿ, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ಯಾದಗಿರಿ
ಕೆಜೆಪಿ 23: ಇನ್ನು ಹೊಸ ಕೂಸಾದ ಕೆಜೆಪಿ ಪಕ್ಷಕ್ಕೂ ಅಷ್ಟೆ. ಬಹಳಷ್ಟು ಜಿಲ್ಲೆಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾಸನ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಜೆಪಿ ಸಾಧನೆ ಸೊನ್ನೆಯಾಗಿದೆ.












Click it and Unblock the Notifications