ಶಿವಮೊಗ್ಗ : ಅರಳದ ಕಮಲ, ಸೋತ ಈಶ್ವರಪ್ಪ

ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಪ್ರಾಬಲ್ಯವಿದ್ದರೂ ಏಳು ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಯಡಿಯೂರಪ್ಪ ಕೆಜೆಪಿ ಕಟ್ಟಿ ಅವರು ಗೆದ್ದರು, ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ರುದ್ರೇಗೌಡ ಎಂಬ ಪ್ರಭಾವಿ ಅಭ್ಯರ್ಥಿ ನಿಲ್ಲಿಸಿ ಈಶ್ವರಪ್ಪಗೆ ಸೋಲಿನ ರುಚಿ ತೋರಿಸಿದರು.
ಮೊದಲ ಕೆಲವು ಸುತ್ತುಗಳಲ್ಲಿ ಈಶ್ವರಪ್ಪ ಮುನ್ನಡೆ ಸಾಧಿಸಿದ್ದರು. ನಂತರ ಬಿರುಗಾಳಿಯಂತೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಮತ್ತು ಕೆಜೆಪಿ ಅಭ್ಯರ್ಥಿ ರುದ್ರೇಗೌಡ ಈಶ್ವರಪ್ಪ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ಕೊನೆಯ ಸುತ್ತಿನ ಎಣಿಕೆ ಮುಗಿಯುವ ವರೆಗೆ ಈಶ್ವರಪ್ಪ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶಿವಮೊಗ್ಗ ನಗರ ಕಾಂಗ್ರೆಸ್ ಕೈ ಸೇರಿತು.
ಯಡಿಯೂರಪ್ಪ ಅವರ ಪ್ರಮುಖ ಅಜೆಂಡಾಗಳು ಎರಡಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರಬಾರದು ಮತ್ತು ಈಶ್ವರಪ್ಪ ಗೆಲುವು ಸಾಧಿಸಬಾರದು ಎಂಬದು ಎರಡು ಕಸಸುಗಳು ಈಡೇರಿವೆ. ಆದರೆ, ಕೆಜೆಪಿ ಕಿಂಗ್ ಮೇಕರ್ ಆಗಲಿಗೆ ಎಂಬ ಅವರ ವಿಶ್ವಾಸ ಹುಸಿಯಾಗಿದ್ದು, ಕೇವಲ 6 ಸ್ಥಾನಗಳು ಮಾತ್ರ ಕೆಜೆಪಿ ಮಡಿಲು ಸೇರಿವೆ.
ಶಿವಮೊಗ್ಗ ಜಿಲ್ಲೆಯಲ್ಲಿಯೂ ಬಿಜೆಪಿ ಒಂದು ಸ್ಥಾನ ಗಳಿಸುವಲ್ಲಿ ಬಿಜೆಪಿ ವಿಫಲವಾಗಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ ಎರಡನೇ ಬಾರಿ ಗೆಲುವು ಸಾಧಿಸಿದ್ದರೆ, ಸಾಗರ ಕ್ಷೇತ್ರದಲ್ಲಿ ಅಳಿಯನಿಗೆ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಸೋಲುಣಿಸಿದ್ದಾರೆ.
ಜೆಡಿಎಸ್ ಸೊರಬ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಮೂರು ಸ್ಥಾನಗಳನ್ನು ಪಡೆದು ಬಲ ಹೆಚ್ಚಿಸಿಕೊಂಡಿದೆ.
ಶಿವಮೊಗ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
| ಶಿವಮೊಗ್ಗ ನಗರ | ಕೆ.ಬಿ.ಪ್ರಸನ್ನ ಕುಮಾರ್ | ಕಾಂಗ್ರೆಸ್ | 39355 | ರುದ್ರೇಗೌಡ | ಕೆಜೆಪಿ | 39077 |
| ಶಿವಮೊಗ್ಗ ಗ್ರಾಮಾಂತರ | ಶಾರದಾ ಪೂರಾನಾಯ್ಕ್ | ಜೆಡಿಎಸ್ | 48639 | ಜಿ.ಬಸವಣ್ಯಪ್ಪ | ಕೆಜೆಪಿ | 38530 |
| ತೀರ್ಥಹಳ್ಳಿ | ಕಿಮ್ಮನೆ ರತ್ನಾಕರ | ಕಾಂಗ್ರೆಸ್ | 37160 | ಆರ್.ಎಂ.ಮಂಜುನಾಥ ಗೌಡ | ಕೆಜೆಪಿ | 35817 |
| ಸಾಗರ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | 71960 | ಬಿ.ಜಯಂತ್ | ಕೆಜೆಪಿ | 30712 |
| ಶಿಕಾರಿಪುರ | ಬಿ.ಎಸ್.ಯಡಿಯೂರಪ್ಪ | ಕೆಜೆಪಿ | 69126 | ಶಾಂತವೀರಪ್ಪ ಗೌಡ | ಕಾಂಗ್ರೆಸ್ | 44701 |
| ಸೊರಬ | ಮಧು ಬಂಗಾರಪ್ಪ | ಜೆಡಿಎಸ್ | 58541 | ಹಾಲಪ್ಪ | ಕೆಜೆಪಿ | 37316 |
| ಭದ್ರಾವತಿ | ಅಪ್ಪಾಜಿ ಗೌಡ | ಜೆಡಿಎಸ್ | 78370 | ಬಿ.ಕೆ.ಸಂಗಮೇಶ್ | ಪಕ್ಷೇತರ | 34271 |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications