Get Updates
Get notified of breaking news, exclusive insights, and must-see stories!

ಬಿಸಿಬಿಸಿ ದೃಶ್ಯ: ಗೂಗಲ್ ಗೆ ಕೋರ್ಟ್ ನೋಟಿಸ್

court-notice-to-google-youtube-over-hot-content
ಕೊಯಮತ್ತೂರು, ಮೇ 6: ಏನನ್ನೋ ಹುಡುಕುತ್ತಿರುವಾಗ ಮತ್ತಿನ್ನೇನೋ ಅಷಡ್ಡಾಳದ್ದು ಕಿಂಡಿಯಲ್ಲಿ ಕಾಣಿಸಿಕೊಂಡರೆ ಹೇಗಾಗಬೇಡ. ಹೀಗೆ, ಅಶ್ಲೀಲ ದೃಶ್ಯಗಳು ಮತ್ತು ಲೈಂಗಿಕತೆಗೆಂದೇ ಮೀಸಲಾದ ವೆಬ್ ಸೈಟುಗಳು ಕಂಪ್ಯೂಟರ್ ಪರದೆಯ ಮೇಲೆ ಮೂಡಿಬರುತ್ತಿರುವುದನ್ನು ಆಕ್ಷೇಪಿಸಿ, ದೂರು ಬಂದಿರುವ ಹಿನ್ನೆಲೆಯಲ್ಲಿ ವಿಶ್ವದ ಅಂತರ್ಜಾಲ ದಿಗ್ಗಜ ಗೂಗಲ್ ಸಂಸ್ಥೆಗೆ ಇಲ್ಲಿನ ನ್ಯಾಯಾಲಯವೊಂದು ನೋಟಿಸ್ ಜಾರಿ ಮಾಡಿದೆ.

ವಿಶ್ವ ಗೂಗಲ್ ಸಂಸ್ಥೆಯ ಭಾರತೀಯ ಅಂಗವಾದ Google India Pvt Ltd ಸಂಸ್ಥೆಯ ಯುಟ್ಯೂಬ್ ನಲ್ಲಿ ಇಂತಹ ಅವಘಡ ಆಗಿಂದಾಗ್ಗೆ ನಡೆಯುತ್ತಿದೆ ಎಂದು ಗೂಗಲ್ ಸಂಸ್ಥೆ ಮತ್ತು ಅದರ ಮೇಲೆ ಹಿಡಿತ ಹೊಂದಿರುವ ಕೇಂದ್ರ ಸರಕಾರದ Indian Computer Emergency Response Teamಗೆ ನೋಟಿಸ್ ಜಾರಿ ಮಾಡಲಾಗಿದೆ.

Google search engineನಲ್ಲಿ Hotmailಗಾಗಿ ಜಾಲಾಡುತ್ತಿದ್ದಾಗ ಬೆಚ್ಚಿಬೀಳಿಸುವ ಹಾಟ್ ಹಾಟ್ ದೃಶ್ಯಗಳು ತೂರಿ ಬಂದವು ಎಂದು ಕೊಯಮತ್ತೂರಿನ ಟೆಕ್ಕಿ ಅಶೋಕ್ ಕುಮಾರ್ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.

ಕಚೇರಿಯಲ್ಲಷ್ಟೇ ಅಲ್ಲ. ಮನೆಯಲ್ಲೂ ಇದೇ ಅವಾಂತರ ಶುರುವಾಗಿದೆ. ಮನೆ ಅಂದಮೇಲೆ ಚಿಕ್ಕಮಕ್ಕಳೂ ಇಂರ್ಟನೆಟ್ ನೋಡುತ್ತಿರುತ್ತಾರೆ. ಆಗಲೂ ಇಂತಹ ಅಭಾಸ ನಡೆದಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ.

ವೈದ್ಯಕೀಯ ಅಥವಾ ಲಿಂಗ ಸಂಬಂಧಿ ಮಾಹಿತಿಯ ಶೋಧನೆಯಲ್ಲಿ ತೊಡಗಿದಾಗ ಸೆಕ್ಸ್ ಅಂತ ಕೀ ಮಾಡಿದರೆ ಆಗಲೂ ಅಷ್ಟೇ. ಇವೇ ಪುಂಖಾನುಪುಂಖವಾಗಿ ತೂರಿಬರುತ್ತವೆ. ಇದು ಮಕ್ಕಳ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಇಂತಹ ಅಸಂಬದ್ಧ ದೃಶ್ಯಗಳಿರುವ ವೆಬ್ ಸೈಟುಗಳಿಗೆ ಕಡಿವಾಣ ಹಾಕಬೇಕಾದ ಮಾಹಿತಿ ತಂತ್ರಜ್ಞಾನ ಇಲಾಖೆಯ Indian Computer Emergency Response Team ಕಣ್ಮುಚ್ಚಿ ಕುಳಿತಿದೆ. ಹಾಗಾಗಿ ಅನಿವಾರ್ಯವಾಗಿ ಕೋರ್ಟ್ ಮೊರೆಹೋಗಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ಸಂಸ್ಕೃತಿಯನ್ನು ಕಾಪಾಡುವ ಸಲುವಾಗಿ ಇಂತದಹುದ್ದನ್ನೆಲ್ಲ ಬ್ಯಾನ್ ಮಾಡಬೇಕಾಗಿದೆ. ಚೀನಾದಲ್ಲಿ ಈಗಾಗಲೇ ಅಶ್ಲೀಲ/ಲೈಂಗಿಕ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗಿದೆ. ಅದೇ ರೀತಿ ಇಲ್ಲೂ ನಿಷೇಧ ಹೇರಬೇಕು ಎಂದು ಅವರು ಕೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+