ಮೇ 6ರಂದು ದ್ವಿತೀಯ ಪಿಯುಸಿ ಫಲಿತಾಂಶ ಖಚಿತ

ಈ ಮೊದಲು ಮೇ 3ರೊಳಗೆ ಫಲಿತಾಂಶ ಹೊರಬೀಳಲಿದೆ ಎಂಬ ವರದಿ ಪ್ರಕಟವಾಗಿತ್ತು. ನಂತರ ಮೇ 9ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ಊಹಾಪೋಹವೂ ಹಬ್ಬಿತ್ತು. ಆದರೆ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ಪಿಯು ಬೋರ್ಡಿನ ಹಿರಿಯ ಅಧಿಕಾರಿಯೊಬ್ಬರು ಮೇ 6ರಂದು ಫಲಿತಾಂಶ ಪ್ರಕಟವಾಗುವುದು ಖಚಿತ ಎಂದು ಒನ್ಇಂಡಿಯಾಗೆ ತಿಳಿಸಿದ್ದಾರೆ.
ಈ ವರ್ಷ ಮಾರ್ಚ್ 13ರಿಂದ ಪರೀಕ್ಷೆಗಳು ಪ್ರಾರಂಭವಾಗಿ ಮಾರ್ಚ್ 28ರಂದು ಮುಕ್ತಾಯಗೊಂಡಿದ್ದವು. ಈ ಬಾರಿ ಒಟ್ಟು 6.13 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತಿದ್ದರು. ರಾಜ್ಯದ ರಾಜಕಾರಣಿಗಳ ರಾಜಕೀಯ ಭವಿಷ್ಯ ಪ್ರಕಟವಾಗುವ (ಮೇ 5 ಚುನಾವಣೆ, ಮೇ 8 ಫಲಿತಾಂಶ) ಮುನ್ನವೇ ರಾಜ್ಯದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯ ನಿರ್ಧಾರವಾಗಲಿದೆ.
ಮೇ 6ರಂದು ಫಲಿತಾಂಶ ಪ್ರಕಟವಾಗುವ ಸಮಯವನ್ನು ಒನ್ಇಂಡಿಯಾ ಕನ್ನಡ ತಾಣದಲ್ಲಿ ನೋಡುತ್ತಿರಿ. ಮೇ 6ರಂದು ಅಂತರ್ಜಾಲದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಮರುದಿನ ಮೇ 7ರಂದು ಎಲ್ಲ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು. [ಫಲಿತಾಂಶಕ್ಕಾಗಿ ಈ ಪುಟ ನೋಡುತ್ತಿರಿ]












Click it and Unblock the Notifications