ಮೂಗು ತೆಗೆದು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!

ಮಗು ಮೂಗು ತಿನ್ನೋದು: ಆದರೆ ಹೀಗೆ ಮೂಗಿಂದ ತೆಗೆದು ತಿಂದರೆ ನಿರೋಧ ಶಕ್ತಿ ಹೆಚ್ಚುತ್ತೆ ಎನ್ನುತ್ತಿದೆ ಅಧ್ಯಯನ ಸಮೀಕ್ಷೆಯೊಂದು. ಆದರೆ ಅದೇನೋ ಮೂಗಿನಿಂದ ಗೊಣ್ಣೆ/ ಪೊಕ್ಕನ್ನು ತೆಗೆದು ತಿನ್ನುವ (Nose Picking) ಮಕ್ಕಳನ್ನು ಕಂಡರೆ ಜನ ಅಸ್ಯಹಿಸಿಕೊಳ್ಳುತ್ತಾರೆ. ಅದಕ್ಕೇ ಅದಕ್ಕೆ Bad Habit ಪಟ್ಟವನ್ನೂ ಕಟ್ಟಿದ್ದಾರೆ.
ಸಾಮಾನ್ಯವಾಗಿ ಬೋರ್ ಹೊಡೀತಿದ್ದರೆ, ಒತ್ತಡದಲ್ಲಿದ್ದರೆ ಮಕ್ಕಳು ಹೀಗೆ ಮಾಡಿಕೊಳ್ಳುತ್ತವೆ ಎಂಬ ಸಬೂಬೂ ಇದೆ. ಆದನ್ನು ಅಶುಚಿತ್ವದ ಸಂಕೇತ ಎಂದೂ ಜರಿಯಲಾಗುತ್ತದೆ. ಆದರೆ ಮೂಗಿನ ಹೊಳ್ಳೆಗಳನ್ನು ಶುಚಿಯಾಗಿಡಲು ಆಗಾಗ ಅಲ್ಲಿಗೆ ಕೈಹಾಕುವ ಅಭ್ಯಾಸವೂ ಇರುತ್ತದೆ.
ಅದೆಲ್ಲ ಇರಲಿ, ಹೊಸ ವಿಷಯ ಏನಪಾ ಅಂದರೆ ಹೀಗೆ ಮೂಗು ತೆಗೆದುಕೊಳ್ಳುವುದು ಮತ್ತು ಅದನ್ನು ಆಸ್ವಾದಿಸುತ್ತಾ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ University of Saskatchewan ಸಂಶೋಧಕರು ತಿಳಿಸಿದ್ದಾರೆ.
ಆರೋಗ್ಯದ ಗುಟ್ಟು ಮೂಗಿನಲ್ಲೇ ಇದೆ!: ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಕಾಟ್ ನೇಪರ್ ನಿಮ್ಮ ಆರೋಗ್ಯದ ಗುಟ್ಟು ನಿಮ್ಮ ಮೂಗಿನಲ್ಲೇ ಇದೆ ಎಂದಿದ್ದಾರೆ.
ಮೂಗಿನಲ್ಲಿರುವುದನ್ನು ಉಂಡೆ ಮಾಡುತ್ತಾ ಅದನ್ನು ತಿನ್ನುವ ಮಕ್ಕಳನ್ನು ಕಂಡರೆ, ಗೊಣ್ಣೆ ಅಂದರೇನೇ ಕೆಲವರಿಗೆ ನಿಜಕ್ಕೂ ವಾಕರಿಕೆಯೇ ಬಂದುಬಿಡುತ್ತದೆ. ಆದರೆ ಹಾಗೆ ಅಸಹ್ಯಿಸಿಕೊಳ್ಳಬೇಡಿ. ಬೇಕಾದರೆ ನೀವೂ ತಿನ್ನಿ, ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬುದು ಪ್ರೊಫೆಸರ್ ಸ್ಕಾಟ್ ಅವರ ಉಚಿತ ಸಲಹೆ.
ಇಷ್ಟಕ್ಕೂ ಇವರು ಯಾಕಪ್ಪಾ ಹೋಗೆ ಹೇಳುತ್ತಿದ್ದಾರೆ ಅಂದರೆ ಮೂಗಿನ ಹೊಳ್ಳೆಯಲ್ಲಿರುವ ಗೊಣ್ಣೆಯಲ್ಲಿ ಕೀಟಾಣುಗಳು ಸಿಕ್ಕಿಹಾಕಿಕೊಳ್ಳುತ್ತವೆ. ಮತ್ತು ಸತ್ತ ಆ ಕೀಟಾಣುಗಳನ್ನು ತಿನ್ನುವುದರಿಂದ ನಿಸರ್ಗ ಸಹಜವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಇವರ ಸಂಶೋಧನೆಯ ಸಾರ.
ಕೈಯಿಂದ ಅದನ್ನು ಮುಟ್ಟಲೂ ಅಸಹ್ಯಿಸಿಕೊಳ್ಳುವವರು ಆ ನಿಸರ್ಗ ಸಂತ್ತನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೇ ನಮ್ಮ ಪ್ರೊಫೆಸರ್ ಹೇಳುತ್ತಿದ್ದಾರೆ. ಸೋ, ನಿಮ್ಮ ಮಗು ಮೂಗಿನೊಳಕ್ಕೆ ಕೈ ತೂರಿಸಿ, ಸ್ವಚ್ಚಂದವಾಗಿ ಗೊಣ್ಣೆ ತಿನ್ನುತ್ತಿದ್ದರೆ ಬೇಸರಿಸಿಕೊಳ್ಳದೆ/ ಅಸಹ್ಯಿಸಿಕೊಳ್ಳದೆ ಅದಕ್ಕಿಂತ ಹೆಚ್ಚಾಗಿ ಮಗುವನ್ನು ಬೈಯದೆ ಅದರ ಪಾಡಿಗೆ ಅದನ್ನು ತಿನ್ನಲು ಬಿಡಿ. ನೀವು ಬೇಕಾದರೆ ಮೂಗು/ ಕಣ್ಣು ಮುಚ್ಚಿಕೊಳ್ಳಿ!












Click it and Unblock the Notifications