ಪ್ರೇಮ ಕಲಹ: ಬೆಂಗ್ಳೂರು ಟೆಕ್ಕಿ ಪ್ರಿಯತಮೆ ಬೆಂಕಿಗೆ

banglore-techie-jeeva-suicide-chennai-techie-lover-held
ಬೆಂಗಳೂರು, ಏ.29: ಸಾಫ್ಟ್‌ವೇರ್ ಇಂಜಿನಿಯರುಗಳ ನಡುವಣ ಪ್ರೇಮ ಕಲಹಕ್ಕೆ ತಿರುಗಿ ಬೆಂಗಳೂರಿನ ಟೆಕ್ಕಿ ಪ್ರಿಯತಮೆ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿರುವ ಘಟನೆ ಚೆನ್ನೈನ ಪಳ್ಳಿಕರಣೈನಲ್ಲಿ ಕಳೆದ ವಾರಾಂತ್ಯ ನಡೆದಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 23 ವರ್ಷದ ಬಿ ಜೀವಾ ನಾಯರ್ ಮೃತಪಟ್ಟ ಯುವತಿ. ಈಕೆ 25 ವರ್ಷದ ರಾಹುಲ್ ಎಂಬ ಟೆಕ್ಕಿಯ ಮನೆಯಲ್ಲಿ ಶನಿವಾರ ರಾತ್ರಿ ಪೆಟ್ರೋಲ್ ಸುರಿದುಕೊಂಡು ಬೆಂಕಿಗೆ ಆಹುತಿಯಾಗಿದ್ದಾಳೆ.

ಟೆಕ್ಕಿಗಳಾದ ತಿರುವನಂತಪುರದ ಜೀವಾ ನಾಯರ್ ಮತ್ತು ರಾಹುಲ್ ನಡುವಣ ಪ್ರೇಮ 5 ವರ್ಷದ್ದು. ಆದರೆ 2 ತಿಂಗಳ ಹಿಂದೆ ಇವರ ಪ್ರೇಮ ಹಳಸಿತ್ತು. ಜೀವಾ ಆತ್ಮಹತ್ಯೆಗೆ ಪ್ರೇರಿಪಿಸಿದ ಕಾರಣ ರಾಹುಲನನ್ನು ಪೊಲೀಸರು ಬಂಧಿಸಿದ್ದಾರೆ.

ಅನೇಕ ಬಾರಿ ಫೋನಿನ ಮೂಲಕ ಸಂಪರ್ಕಿಸಲು ಜೀವಾ ಪ್ರಯತ್ನಿಸಿದ್ದಳಾದರೂ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಬೇಸತ್ತ ಜೀವಾ ಚೆನ್ನೈನಲ್ಲಿ ಸ್ನೇಹಿತರ ಜತೆ ತಂಗಿದ್ದ ರಾಹುಲ್ ಮನೆಗೆ ಬಂದಿದ್ದಳು. ಅಲ್ಲಿ ತಮ್ಮ ಪ್ರೇಮದ ಬಗ್ಗೆ ಮಾತುಕತೆಗೆ ಮುಂದಾಗಿದ್ದಾಳೆ. ಜೀವಾ, ರಾಹುಲ್ ಮನೆಗೆ ಬರುವಾಗ ಕೈಯಲ್ಲಿ ಪೆಟ್ರೋಲ್ ಬಾಟಲ್ ಹಿಡಿದು ಬಂದಿದ್ದಳು.

ಆದರೆ ಜೀವಾ ಪ್ರೇಮ ಯಾಚನೆಗೆ ರಾಹುಲ್ ಸೊಪ್ಪು ಹಾಕದೆ, ಬೆಂಗಳೂರಿಗೆ ವಾಪಸುಹೋಗು ಎಂದಿದ್ದಾನೆ. ಭಗ್ನಗೊಂಡ ಜೀವಾ ಮೈಮೇಲೆ ಪೆಟ್ರೋಲು ಸುರಿದುಕೊಂಡು ಭಗ್ಗನೆ ಬೆಂಕಿ ಹಚ್ಚಿಕೊಂಡಿದ್ದಾಳೆ. ತೀವ್ರವಾದ ಸುಟ್ಟಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+