• search

ಶಾಸಕರ ಭವನದಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
  suicide
  ಬೆಂಗಳೂರು, ಏ. 29 : ಶಾಸಕರ ಭವನದ ಕಟ್ಟಡದಿಂದ ಜಿಗಿದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಗೋವಿಂದಗೌಡ ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಪ್ರೇಮ ವೈಫಲ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

  ಜೇವರ್ಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡಪ್ಪ ಗೌಡ ನರಿಬೋಳ್ ಆಪ್ತ ಸಹಾಯರಾಗಿದ್ದ ಗೋವಿಂದಗೌಡ (24) ಡೆತ್ ನೋಟ್ ಬರೆದಿಟ್ಟು, ಇಂದು ಬೆಳಗ್ಗೆ 5.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕರ ಭವನದ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಐದು ವರ್ಷಗಳಿಂದ ಇವರು ಶಾಸಕರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

  ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪ್ರೇಮಾಂಕುರ: ಅನಾರೋಗ್ಯದಿಂದಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಾದಾಗ ಗೋವಿಂದನಿಗೆ ಅಲ್ಲಿ ನರ್ಸ್ ಒಬ್ಬಳ ಮೇಲೆ ಪ್ರೇಮ ಅಂಕುರಿಸಿದೆ. ಆದರೆ ಈತನ ಪ್ರೀತಿಯನ್ನು ಆಕೆ ನಿರಾಕರಿಸಿದ ಕಾರಣ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಕೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಈತ, ಕೈ ಮೇಲೆ ಮತ್ತು ಎದೆಯ ಮೇಲೆ ಆಕೆಯ ಹೆಸರು ಬರೆದುಕೊಂಡಿದ್ದ ಎಂದು ಖುದ್ದು ಶಾಸಕರೇ ತಿಳಿಸಿದ್ದಾರೆ.

  ಇತ್ತೀಚೆಗೆ ಆಕೆ ಇವನ ಪ್ರೀತಿಯನ್ನು ನಿರಾಕರಿಸಿದ ಕಾರಣ ಗೋವಿಂದ ಗೌಡ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂಲತಃ ಜೇವರ್ಗಿಯವರಾದ ಗೋವಿಂದಗೌಡ ಶಾಸಕರು ಬೆಂಗಳೂರಿಗೆ ಆಗಮಿಸಿದಾಗ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಸ್ವತಃ ಶಾಸಕರೇ ಈತನನ್ನು ಆಪ್ತ ಸಹಾಯಕರಾಗಿ ನೇಮಿಸಿಕೊಂಡಿದ್ದರು.

  ಹಿಂದೆಯೂ ಆತ್ಮಹತ್ಯಗೆ ಯತ್ನಿಸಿದ್ದ : ಚುನಾವಣಾ ಪ್ರಚಾರ ಕಾರ್ಯದ ನಿಮಿತ್ತ ಸ್ವ ಕೇತ್ರ ಜೇವರ್ಗಿಯಲ್ಲಿರುವ ಶಾಸಕ ದೊಡ್ಡಪ್ಪಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಉತ್ತಮವಾಗಿ ಕೆಲಸ ಮಾಡುತ್ತಿದ್ದ. ಪ್ರೀತಿಸಿದ ಹುಡುಗಿಯ ಹೆಸರನ್ನು ಕೈ ಮೇಲೆ ಬರೆದುಕೊಂಡು ಹಿಂದೆಯೂ ನಿದ್ರೆ ಮಾತ್ರೆ ಸೇಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆದರೆ, ಜೊತೆಗಾರರು ಆತನನ್ನು ರಕ್ಷಿಸಿದ್ದರು. ನಿನ್ನೆ ಯಾರು ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿಬಹುದು ಎಂದು ಹೇಳಿದ್ದಾರೆ.

  ತುಂಬಾ ಸ್ಥಿತಿವಂತ ಕುಟುಂಬದಿಂದ ವ್ಯಕ್ತಿ ಆತ. ಪಾರ್ಥೀವ ಶರೀರವನ್ನು ಜೇವರ್ಗಿಗೆ ಕಳುಹಿಸಲು ಅಗತ್ಯ ಏರ್ಪಾಟು ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಸ್ವ ಗ್ರಾಮಕ್ಕೆ ತರಲು ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.

  ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Jevargi BJP MLA personal assistant Govinda Gowda committed suicide in Bangalore Shasakara Bhavan, near Vidhana Soudha. On Monday, April, 29 he jumped from Shasakara Bhavan and committed suicide. Govinda Gowda working as personal assistant for MLA Doddappagouda Shinalingappagoud Patil Naribol.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more