ಅತ್ತೆ ಮಾವನ ಸೇವೆ ಮಾಡದಿದ್ರೆ ಸೊಸೆಗೆ ವಿಚ್ಛೇದನ

hc-wife-disputes-over-in-laws-doctor-granted-divorce
ಅಹಮದಾಬಾದ್, ಏ.24: ಇದೆಂಥಾ ಮನೆಮುರುಕು ಸುದ್ದಿ ಅಂತ ಅನ್ಕೋಬೇಡಿ. ಏನಪಾ ಅಂದರೆ ಅತ್ತೆ -ಮಾವನನ್ನು ಅಂದರೆ ಪತಿರಾಯನ ತಂದೆ-ತಾಯಿಯ ''ಸಹ ವಾಸ''ಕ್ಕೆ ಒಪ್ಪದೆ, ಅವರ ಆರೈಕೆ ಮಾಡದಿದ್ದರೆ ಪತಿಮಹಾಶಯ ಅಂತಹ ಪತ್ನಿಯಿಂದ ಕಾನೂನುಬದ್ಧವಾಗಿ ದೂರವಾಗುವ ಹಕ್ಕು ಹೊಂದುತ್ತಾನೆ ಎಂದು ಗುಜರಾತ್ ಹೈಕೋರ್ಟ್ ದೂರಗಾಮಿ ಪರಿಣಾಮ ಬೀರಬಹುದಾದ ಆದೇಶ ನೀಡಿದೆ.

ಅತ್ತೆ ಮಾವ ತಮ್ಮ ಜತೆಯಲ್ಲೇ ವಾಸ ಮಾಡುವುದಕ್ಕೆ ಅವಕಾಶ ನೀಡದೇ ಇರುವುದು ಮತ್ತು ಅವರ ಯೋಗಕ್ಷೇಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರಿಂದ ಹಿರಿಯರಿಗೆ ಮಾನಸಿಕ ಹಿಂಸೆ ನೀಡಿದಂತಾಗುತ್ತದೆ.

ಆದ್ದರಿಂದ ಅಂತಹ ಪತ್ನಿಯಿಂದ ವಿಚ್ಛೇದನ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾ. ಪರ್ದಿವಾಲಾ ಅವರ ನ್ಯಾಯಪೀಠ ಸ್ಪಷ್ಟ ಆದೇಶ ನೀಡಿದೆ.

ಇದೇ ಕಾರಣವೊಡ್ಡಿ ಪತ್ನಿಯಿಂದ ವಿಚ್ಛೇದಕ್ಕೆ ಹಠ ಹಿಡಿದಿರುವ ಕನ್ನಡದ ನಟನಿಗೆ ಈ ತೀರ್ಪು ಊರುಗೋಲು ಆಗಬಹುದು.

ಇಷ್ಟಕ್ಕೂ ಪ್ರಕರಣ ಯಾವುದು?: ಸೂರತ್ ಮೂಲದ ವೈದ್ಯ ಮಿಲಿಂದ್ ದೇವ್ ಅವರು ತಮ್ಮಪತ್ನಿಯಿಂದ ವಿಚ್ಛೇದನ ಕೋರಿ (ಆಕೆಯೂ ಸ್ವತಃ ವೈದ್ಯೆ! ) ಸೂರತ್ ಕೌಟುಂಬಿಕ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಕ್ಯಾನ್ಸರ್ ಪೀಡಿತ ನನ್ನ ತಂದೆಯನ್ನು ನೋಡಿಕೊಳ್ಳದಂತೆ ಪತ್ನಿ ನನ್ನನ್ನು ಪೀಡಿಸುತ್ತಿದ್ದಾಳೆ. ನನ್ನ ತಂದೆ-ತಾಯಿ ನಮ್ಮ ಜತೆ ವಾಸಿಸುವುದು ಆಕೆಗೆ ಸುತರಾಂ ಇಷ್ಟವಿಲ್ಲ. ಇದರಿಂದ ನನಗೆ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಅಲವತ್ತುಕೊಂಡಿದ್ದರು.

ಆದರೆ ಕೌಟುಂಬಿಕ ನ್ಯಾಯಾಲಯ ಪರಿತಪ್ತ ವೈದ್ಯ ಮಿಲಿಂದ್ ದೇವರ ಅರ್ಜಿಯನ್ನು ತಿರಸ್ಕರಿಸಿತ್ತು. ಇದರಿಂದ ಅಧೀರರಾಗದ ಮಿಲಿಂದ್ ಗುಜರಾತ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿದೆ.

ಇದರಿಂದ ಮಿಲಿಂದ್ ಕೈಹಿಡಿ(ಯ)ದ ಪತ್ನಿಯ ಬಗ್ಗೆ ಕಿಂಚಿತ್ತೂ ಯೋಚಿಸದೆ, ನೆಮ್ಮದಿಯಿಂದ ಅಮ್ಮನ ಸೇವೆಯಲ್ಲಿ ತೊಡಗಿದ್ದಾರೆ. ಅಂದಹಾಗೆ, ಈ ವೈದ್ಯ ದಂಪತಿಗಳ ದಾಂಪತ್ಯ ಗೀತೆ 15 ವರ್ಷದ್ದು, ಈ ಮಧ್ಯೆ ಕ್ಯಾನ್ಸರಿನಿಂದ ವೈದ್ಯ ಮಿಲಿಂದ್ ತಂದೆ ಅಸುನೀಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+