ಚೀನಾ: ಮದ್ವೆ ಮನೆಯಿಂದ ಓಡ್ಹೋದ ವಧು ಮಾಡಿದ್ದೇನು?

Chinese TV Journalist bride reports on China earthquake in wedding dress
ಬೀಜಿಂಗ್, ಏ.24: ಹಸೆಮಣೆಯ ಮೇಲೆ ಕುಳಿತ ವಧು ಸಹಜವಾಗಿ ತನ್ನ ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತಿರುತ್ತಾಳೆ. ಆದರೆ ಚೀನಾದಲ್ಲಿ ಆಗಿದ್ದೇನು? ಅದೂ ಚೀನಾದಲ್ಲಿ ಭೂಕಂಪದಂತಹ ಪ್ರಕೋಪಗಳು ಸರ್ವೆಸಾಮಾನ್ಯ ಎಂಬಂತಾಗಿರುವಾಗ?

ಏನಿಲ್ಲ ಮದುವೆ ಮಂಟಪದಿಂದ ಸುಂದರವಾಗಿ ಸಿಂಗರಿಸಿಕೊಂಡು ಮದುಮಗಳ ದಿರಿಸಿನಲ್ಲಿದ್ದ ಮದುವಣಗಿತ್ತಿ Chen Ying ಮದುವೆ ಮನೆಯಿಂದ ಹೊರಬಂದವಳೇ ಮೈಕ್ ಹಿಡಿದು ಕ್ಯಾಮರಾ ಮುಂದೆ ನಿಂತೇ ಬಿಟ್ಟಳು.

ಯಾಕೆ ಹೀಗೆ ಆಕೆಗೇನಾದರೂ ತಲೆಗಿಲೆ ಕೆಟ್ಟಿತ್ತಾ ಅಂತ ಕೇಳುವ/ನೋಡುವ ವ್ಯವದಾನ ಅಲ್ಲಿ ಯಾರಿಗೂ ಇರಲಿಲ್ಲ. ಏಕೆಂದರೆ ಚೀನಾದಲ್ಲಿ ಅದಾಗತಾನೆ ಭೀಕರ ಭೂಕಂಪ ಸಂಭವಿಸಿತ್ತು. ಅದು ಆಕೆಯ ಮನ ಕಲುಕಿತ್ತು. ಮೊದಲೇ ಆಕೆ ವೃತ್ತಿಯಿಂದ ಪತ್ರಕರ್ತೆ.

ವೃತ್ತಿ ಧರ್ಮ ಅಂದರೆ ಇದೇನಾ?: ಹಾಗಾಗಿ, ಮದ್ವೆ ಆಮೇಲೆ. ಮೊದಲು ನಮ್ಮ ನಾಡಿನ ಜನರ ಯೋಗಕ್ಷೇಮ ಮುಖ್ಯ ಎಂದೆಣೆಸಿದವಳೇ ... ತಾನು ತೊಟ್ಟಿದ್ದ ಶ್ವೇತವರ್ಣದ ಮದುವೆ ಪೋಷಾಕಿನಲ್ಲಿಯೇ ಆಕೆ ಭೂಕಂಪದ ಸ್ಥಳಕ್ಕೆ ದೌಡಾಯಿಸಿ, South China Morning Post.... ಎಂದು ಪ್ರವರ ಶುರು ಹಚ್ಚಿಕೊಂಡೇಬಿಟ್ಟಳು.

ಭೂಕಂಪದ ವರದಿ ಮುಗಿಸಿದ ಬಳಿಕ ಮದುವೆ ಮನೆಗೆ ವಾಪಸಾಗಿ ಭಾವಿ ಗಂಡನ ಕಡೆ ವಾರೆನೋಟ ಬೀರಿದ್ದಾಳೆ! ಮುಗುಳ್ನಕ್ಕ ವರ ಹೆಮ್ಮೆಯಿಂದ ಆಕೆಯನ್ನು ಅಪ್ಪಿ ಮುದ್ದಾಡಿದ್ದಾನೆ. ಈಕೆ ಮದುವೆ ಉಡುಪಿನಲ್ಲಿಯೇ ವರದಿ ಮಾಡಿದ್ದು ಈಗ ಇಂಟರ್ನೆಟ್ ಜಗತ್ತಿನಲ್ಲಿ ಭಾರೀ ಪ್ರಶಂಸೆ ಗಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+