• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಜೆಪಿ ಪಕ್ಷದ್ದೇ ಸಮೀಕ್ಷೆ: ಫಲಿತಾಂಶವೇನು ಗೊತ್ತಾ?

By Srinath
|
yeddyurappa-vijayendra-analysis-predict-20-seats-to-kjp
ಬೆಂಗಳೂರು, ಏ.23: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಕಥೆಯೇನು? ಕೆಜೆಪಿ ಅಧಿಕಾರಕ್ಕೆ ಬರುತ್ತದಾ? ಖುದ್ದು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರಾ? ಎಂಬ ಚಿಂತನಾರ್ಹ ಪ್ರಶ್ನೆಗಳು ಎದ್ದಿವೆ.

ಆದರೆ ಕೆಜೆಪಿ ಪಕ್ಷವೇ ಆಂತರಿಕ ಸಮೀಕ್ಷೆ/ಸಮಾಲೋಚನೆ/ ಚಿಂತನ-ಮಂಥನ ನಡೆಸಿದ್ದು, ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ಯತ್ನಿಸಿದೆ. ಈ ಕ್ಷಣದ ಮತದಾರನ ಮೂಡ್ ಅನ್ನು ಆಧರಿಸಿ ಹೇಳುವುದಾದರೆ ಕರ್ನಾಟಕದ ವಿಧಾನಸಭೆ ಈ ಬಾರಿ ಡೋಲಾಯಮಾನವಾಗಲಿದೆ. ಪಕ್ಷೇತರರು, ಪ್ರಾದೇಶಿಕ ಪಕ್ಷಗಳು ಈ ಹಂಗಿನರಮನೆಯಲ್ಲಿ ಓಲಾಡಲಿವೆ. ಅದರಲ್ಲಿ ಕೆಜೆಪಿಗೆ ಉತ್ತಮ ಅವಕಾಶವಿದೆ ಎಂಬುದು ದಾಖಲಾರ್ಹ.

20 ಸ್ಥಾನ ಗೆದ್ದೇ ತೀರುವ ಛಲ: ಒಂದಷ್ಟು ಕ್ಷೇತ್ರಗಳನ್ನು ಗುರುತಿಸಿರುವ ಕೆಜೆಪಿ ಆ ಕ್ಷೇತ್ರಗಳಲ್ಲಿ ನಿರಾಯಾಸ ಗೆಲುವು (cakewalk) ದಕ್ಕಿಸಿಕೊಳ್ಳಲಿದೆ. ಈ ಕ್ಷೇತ್ರಗಳನ್ನು ಪಕ್ಷವು A ಶ್ರೇಣಿಯಲ್ಲಿ ವರ್ಗೀಕರಿಸಿಟ್ಟುಕೊಂಡಿದೆ. ಇಂತಹ ಕ್ಷೇತ್ರಗಳು ಒಟ್ಟು 43 ಇವೆ. ಅಂದರೆ KJP ಈ ಬಾರಿ 43 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಗ್ಯಾರಂಟಿ.

ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ಅವರಿಬ್ಬರೂ ಚುನಾವಣಾ ರಣತಂತ್ರವನ್ನು ರೂಪಿಸಿದ್ದು, ಅದರಂತೆ ಪಕ್ಷಕ್ಕೆ ಈ 43ರ ಜತೆಗೆ ಇನ್ನೂ ಒಂದಷ್ಟು ಹೆಚ್ಚು ಸ್ಥಾನಗಳನ್ನು ಗೆದ್ದುಕೊಡುವ ಕಾಯಕದಲ್ಲಿ ಶ್ರಮಿಸುತ್ತಿದ್ದಾರೆ.

ಇದಾದನಂತರ ಅಪ್ಪ-ಮಗ ಜೋಡಿ ಇನ್ನೂ 56 ಸ್ಥಾನಗಳಿಗೆ ಲಗ್ಗೆ ಹಾಕಿದೆ. ಅಂದರೆ ಎರಡನೆಯ ಶ್ರೇಣಿಯಲ್ಲಿ 56 ಸ್ಥಾನಗಳನ್ನು ಗುರುತಿಸಿದ್ದು, ಅವುಗಳನ್ನು B ಶ್ರೇಣಿಯನ್ನಾಗಿ ವರ್ಗೀಕರಿಸಿದೆ.

ಈ ಎರಡೂ (A + B) ವರ್ಗಗಳ ಕ್ಷೇತ್ರಗಳಿಂದ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ತೀರುವ ಛಲವನ್ನು ಇವರಿಬ್ಬರೂ ತೊಟ್ಟಿದ್ದಾರೆ. ಅತಂತ್ರ ಫಲಿತಾಂಶ ಹೊರಬಿದ್ದರೆ ತಾವೇ kingmaker ಆಗಬೇಕೆಂದು ಇವರು ಶಪಥ ತೊಟ್ಟಿದ್ದಾರೆ. ಒಂದು ವೇಳೆ, ಕಾಂಗ್ರೆಸ್ ಪಕ್ಷವನ್ನು 100ರ ಗಡಿಯೊಳಗೆ ನಿಯಂತ್ರಿಸಿದ್ದೇ ಆದರೆ ಸರಕಾರದ ರಚನೆಗಾಗಿ ಕಾಂಗ್ರೆಸ್ ತಮ್ಮತ್ತ ಕೈಚಾಚುವುದು ಖಚಿತ ಎಂಬ ಭರವಸೆ ಇವರದು.

A category ಕ್ಷೇತ್ರಗಳಲ್ಲಿ KJP ಗೆಲ್ಲಲೇಬಹುದಾದ ಕ್ಷೇತ್ರಗಳು ಇಂತಿವೆ: ಶಿಕಾರಿಪುರ, ರಾಜಾಜಿನಗರ, ತಿಪಟೂರು, ಬ್ಯಾಡಗಿ, ಹಾವೇರಿ, ಹಾನಗಲ್, ಬೀದರ್ ಉತ್ತರ, ಆಳಂದ, ಚಿಂಚೋಳಿ, ಭಟ್ಕಳ, ಬೆಳಗಾವಿ, ಕುಂದಗೋಳ, ಗದಗ, ಬಸವಕಲ್ಯಾಣ, ಔರಾದ್, ಬೀದರ್, ನಾಗಠಾಣ, ಇಂಡಿ, ಸಿಂಧಗಿ, ತರಿಕೆರೆ, ಹೊನ್ನಾಳಿ ಮತ್ತು ಮಾಗಡಿ.

ಕಾಂಗ್ರೆಸ್ ಮೇಲುಗೈ ಹೊಂದಿದ್ದರೂ ಕೆಜೆಪಿಗೂ ಆಶಾದಾಯಕವಾಗಿರುವ ಇತರೆ ಕೆಲ ಕ್ಷೇತ್ರಗಳೂ ಹೀಗಿವೆ: ಸೇಡಂ, ಗುಲ್ಬರ್ಗಾ ದಕ್ಷಿಣ, ಚೆನ್ನಗಿರಿ, ವರುಣಾ ಮತ್ತು ಹುಕ್ಕೇರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು poll survey ಸುದ್ದಿಗಳುView All

English summary
Karnataka Assembly Election- BS Yeddyurappa BY Vijayendra analysis predicts 20 seats to KJP. The former CM wants to win at least 20 seats and become kingmaker if the polls throw up a fractured verdict. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more