• search

ಕಾಂಗ್ರೆಸ್ ಗೆ ಅಧಿಕಾರ ನಿಶ್ಚಿತ : ಜಾಫರ್ ಫರೀಫ್

Subscribe to Oneindia Kannada
For Quick Alerts
ALLOW NOTIFICATIONS
For Daily Alerts
   C. K. Jaffer Sharief
  ಬೆಂಗಳೂರು, ಏ. 23 : ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಜಯಗಳಿಸಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪ್ರತಿಕಾ ಸಂವಾದಲ್ಲಿ ಮಂಗಳವಾರ ಮಾತನಾಡಿದ ಜಾಫರ್ ಷರೀಫ್, ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆಯಲು ದೇವೇಗೌಡರ ಕುತಂತ್ರವೇ ಕಾರಣ. ಬಯಸದೇ ಬಂದ ಅಧಿಕಾರವನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಆರೋಪಿಸಿದರು.

  ಹಿರಿಯ ನಾಯಕರ ಸಲಹೆ, ಕಿರಿಯರ ಪಕ್ಷ ಸಂಘಟನೆ, ಜನರ ಬೆಂಬಲ ಮುಂತಾದವುಗಳಿಂದಾಗಿ ಪಕ್ಷ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ. ಎಸ್.ಎಂ.ಕೃಷ್ಣ ಸೇರಿದಂತೆ ಯಾವ ಹಿರಿಯ ನಾಯಕರನ್ನು ಕಡೆಗಣಿಸದೇ ಹೈಕಮಾಂಡ್ ನಾಯಕರು ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಿದರು.

  ಲೋಕಸಭೆಗೆ ಸ್ಪರ್ಧೆ : ಮುಂದಿನ ಲೋಕಸಭೆ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ. ರಾಜ್ಯ ರಾಜಕಾರಣಕ್ಕೆ ಮರಳುವ ಆಸೆ ನನಗಿಲ್ಲ. ಎಸ್.ಎಂ.ಕೃಷ್ಣ ಮತ್ತು ನಾನು ಮುಂದಿನ ಲೋಕಸಭೆ ಚುನಾವಣೆಗೆ ಬೆಂಗಳೂರಿನಿಂದ ಸ್ಪರ್ಧಿಸಲಿದ್ದೇವೆ ಎಂದು ಘೋಷಿಸಿದರು.

  ಯಡಿಯೂರಪ್ಪಗೆ ವಕೀಲರ ಬೆಂಬಲ : ರಾಜ್ಯದ 30 ಜಿಲ್ಲೆಗಳಲ್ಲೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷವನ್ನು ವಕೀಲ ಸಮುದಾಯ ಬೆಂಬಲಿಸಲಿದೆ ಎಂದು ವಕೀಲರ ಸಂಘದ ಮುಖಂಡ ನಾಗರಾಜು ತಿಳಿಸಿದ್ದಾರೆ. ಉಚ್ಛ ನ್ಯಾಯಾಲಯಕ್ಕೆ ವಕೀಲರನ್ನು ನೇಮಕ ಮಾಡುವಾಗ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ ಆದ್ಯತೆ ನೀಡಿಲ್ಲ. ಆದ್ದರಿಂದ ಕೆಜೆಪಿ ಬೆಂಬಲಿಸುತ್ತೇವೆ. ಕೆಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲೂ ಭಾಗವಹಿಸಲಿದ್ದೇವೆ ಎಂದು ಅವರು ಹೇಳಿದರು. (

  ನಾನು ಸುಳ್ಳು ಹೇಳಲ್ಲ : ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಅವರ ಮಕ್ಕಳು ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದಾರೆ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ನನ್ನ ಹೇಳಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷಮೆ ಕೇಳಿರುವುದು ಯಡಿಯೂರಪ್ಪ ಅವರ ಉದಾರ ಗುಣಕ್ಕೆ ಸಾಕ್ಷಿ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ ಹೇಳಿದ್ದಾರೆ. (ಕಿಕ್ ಬ್ಯಾಕ್ ಕಿರಿಕ್)

  ಪಕ್ಷೇತರ ಅಭ್ಯರ್ಥಿ ಬಂಧನ : ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಶಂಕರ್ ಮತದಾರರಿಗೆ ಹಂಚಲು ತಂದಿದ್ದ 5,500 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣದ ದಾಖಲಿಸಿಕೊಂಡಿದ್ದರು. ಇಂದು ತನಿಖೆಗಾಗಿ ಶಂಕರ್ ಅವರನ್ನು ಬಂಧಿಸಲಾಗಿದೆ.

  ಹೆಚ್ಡಿಕೆ ವಿರುದ್ಧ ಗುಡುಗಿದ ಅಂಬಿ : ನಿಜ ಜೀವನದಲ್ಲೂ ಅಂಬರೀಶ್ ನಟಿಸುವುದು ಬೇಡ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿಕೆಗೆ ಅಂಬರೀಶ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರೆ. ಅವರ ವಿರುದ್ಧ ವಾಗ್ದಾಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅಂಬಿ ಎಚ್ಚರಿಕೆ ನೀಡಿದ್ದಾರೆ. (ಕುಮಾರಣ್ಣ ಹೇಳಿದ್ದೇನು?)

  ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Senior Congress leader C. K. Jaffer Sharief said, Congress will get majority in assembly election. Advocate associations announced support for KJP party. Independent candidate arrested in Ranebennur. and other major developments of state.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more