Venu Swamy: ನಟಿ ತ್ರಿಶಾ ಪಕ್ಕದಲ್ಲಿ ಇಲ್ಲದಿದ್ದರೆ ವಿಜಯ್ ಜಾತಕ ಬೇರೆಯೇ ಇರುತ್ತಿತ್ತು: ವೇಣುಸ್ವಾಮಿ ಸ್ಫೋಟಕ ಭವಿಷ್ಯ
Venu Swamy Prediction: ದಶಕಗಳಿಂದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಹಂಚಿಹೋಗಿದ್ದ ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ಹೊಸ ಇತಿಹಾಸ ಬರೆದಿದ್ದಾರೆ. ಮೇ 4, 2026ರಂದು ಪ್ರಕಟವಾದ ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯವಾಣಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲ ಚುನಾವಣೆಯಲ್ಲೇ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಜಯಗಳಿಸಿ ಅಚ್ಚರಿ ಮೂಡಿಸಿದೆ. ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ವಿಜಯ್ ಅವರಿಗೆ ಕೇವಲ 10 ಸ್ಥಾನಗಳ ಕೊರತೆಯಿದೆ. ಸರ್ಕಾರ ರಚಿಸಲು ಕಾಂಗ್ರೆಸ್ ಸೇರಿದಂತೆ ಇತರ ಸಣ್ಣ ಪಕ್ಷಗಳ ಬೆಂಬಲವನ್ನು ಪಡೆಯಲು ಮಾತುಕತೆ ನಡೆಯುತ್ತಿದೆ. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ 59 ಸ್ಥಾನಗಳಿಗೆ ಸೀಮಿತವಾಗಿದ್ದರೆ, ಎಐಎಡಿಎಂಕೆ 47 ಸ್ಥಾನಗಳನ್ನು ಪಡೆದಿದೆ. ಸ್ವತಃ ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಕ್ಷೇತ್ರದಲ್ಲೇ ಸೋಲನುಭವಿಸಿರುವುದು ಈ ಚುನಾವಣೆಯ ದೊಡ್ಡ ತಿರುವು.

ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ಭಾರಿ ವೈರಲ್
ವಿಜಯ್ ಅವರು ಸ್ಪರ್ಧಿಸಿದ್ದ ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಎರಡೂ ಕ್ಷೇತ್ರಗಳಲ್ಲೂ ಭರ್ಜರಿ ಜಯ ಸಾಧಿಸಿದ್ದಾರೆ. ವಿಜಯ್ ಅವರ ರಾಜಕೀಯ ಪ್ರವೇಶದ ಸಂದರ್ಭದಲ್ಲೇ ತೆಲುಗಿನ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ಮಾಡಿದ್ದ ಭವಿಷ್ಯವಾಣಿ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ವಿಜಯ್ ಅವರ ಜಾತಕದ ಪ್ರಕಾರ ಅವರಿಗೆ ರಾಜಯೋಗವಿದೆ. ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವೇಣುಸ್ವಾಮಿ ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಫಲಿತಾಂಶದ ಬಳಿಕ ವೇಣುಸ್ವಾಮಿ ಅವರು ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿಜಯ್ ಅವರ ಆಡಳಿತಾವಧಿ ಹೇಗಿರಲಿದೆ ಮತ್ತು ಮುಂದಿನ ರಾಜಕೀಯ ಸವಾಲುಗಳೇನು ಎಂಬುದನ್ನು ವಿಶ್ಲೇಷಿಸಿದ್ದಾರೆ.
ವಿಜಯ್ ಅವರ ಈ ಗೆಲುವು 1983ರಲ್ಲಿ ಆಂಧ್ರಪ್ರದೇಶದಲ್ಲಿ ಎನ್.ಟಿ. ರಾಮರಾವ್ ಅವರು ಸೃಷ್ಟಿಸಿದ್ದ ರಾಜಕೀಯ ಕ್ರಾಂತಿಯನ್ನು ನೆನಪಿಸುವಂತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ಜೋರಾಗಿದ್ದು, ವಿಜಯ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
ವೇಣುಸ್ವಾಮಿ ಹೊಸ ಬಾಂಬ್
ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಜ್ಯೋತಿಷಿ ವೇಣುಸ್ವಾಮಿ ಅವರ ಹಳೆಯ ಮತ್ತು ಹೊಸ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿವೆ. ಅದರಲ್ಲೂ ವಿಜಯ್ ಜಾತಕದ ಮೇಲೆ ನಟಿ ತ್ರಿಶಾ ಅವರ ಪ್ರಭಾವವಿದೆ ಎಂಬ ಅವರ ಮಾತುಗಳು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
'ತ್ರಿಶಾ ಇಲ್ಲದಿದ್ದರೆ ಕಥೆ ಬೇರೆ ಆಗಿರುತ್ತಿತ್ತು'
ಈ ವಿಡಿಯೋದಲ್ಲಿ ವೇಣುಸ್ವಾಮಿ ಅತ್ಯಂತ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ನಟಿ ತ್ರಿಶಾ ಅವರು ವಿಜಯ್ ಪಕ್ಕದಲ್ಲಿ ಇಲ್ಲದಿದ್ದರೆ ಅವರ ಜಾತಕದ ಫಲವೇ ಬೇರೆಯಾಗಿರುತ್ತಿತ್ತು. ಅವರು ಈ ಮಟ್ಟದ ರಾಜಕೀಯ ಯಶಸ್ಸು ಪಡೆಯಲು ಸಾಧ್ಯವಾಗುತ್ತಿರಲಿಲ್ಲ," ಎಂದು ಹೇಳಿದ್ದಾರೆ.
"ವಿಜಯ್ ಮತ್ತು ತ್ರಿಶಾ ಇಬ್ಬರ ಜಾತಕ ಚಕ್ರಗಳ ಗ್ರಹಗತಿಗಳ ಮಿಲನವು ವಿಜಯ್ ಅವರ ರಾಜಕೀಯ ಏಳಿಗೆಗೆ ಪೂರಕವಾಗಿದೆ. ತ್ರಿಶಾ ಅವರ ಜಾತಕದ ಪ್ರಭಾವ ವಿಜಯ್ ಅವರ ಅದೃಷ್ಟವನ್ನು ಹೆಚ್ಚಿಸಿದೆ," ಎಂದು ಹೇಳಿದ್ದಾರೆ. ಈ ಹಿಂದೆ ತೆಲುಗಿನ ಚಿರಂಜೀವಿ ಸೇರಿದಂತೆ ಹಲವು ಸ್ಟಾರ್‌ಗಳ ಜಾತಕ ವಿಶ್ಲೇಷಿಸಿ ಸುದ್ದಿಯಾಗಿದ್ದ ವೇಣುಸ್ವಾಮಿ ಈಗ ವಿಜಯ್ ರಾಜಕೀಯ ಭವಿಷ್ಯಕ್ಕೂ ತ್ರಿಶಾ ಹೆಸರನ್ನು ತಳುಕು ಹಾಕಿರುವುದು ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕೆಲವರು "ಇದು ಕೇವಲ ವೈಯಕ್ತಿಕ ವಿಚಾರಗಳನ್ನು ಚರ್ಚೆಗೆ ತರುವ ತಂತ್ರ" ಎಂದು ಟೀಕಿಸಿದರೆ, ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಇಬ್ಬರ ನಡುವಿನ ಲಕ್ ಫ್ಯಾಕ್ಟರ್ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲು ಸಜ್ಜಾಗಿರುವ ಈ ಸಂದರ್ಭದಲ್ಲಿ ಈ ಜ್ಯೋತಿಷ್ಯದ ವಿಶ್ಲೇಷಣೆಗಳು ಚುನಾವಣಾ ಫಲಿತಾಂಶದಷ್ಟೇ ಹೆಚ್ಚು ಚರ್ಚೆಯಾಗುತ್ತಿವೆ.
"ವಿಜಯ್ ಸಿಎಂ ಆದರೂ ಸರ್ಕಾರ ಉಳಿಯುವುದು ಕಷ್ಟ"
ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ರಾಜ್ಯ ರಾಜಕೀಯದ ಕುರಿತು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಇದು ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. "ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ, ಆ ಅಧಿಕಾರ ಅವರಿಗೆ ದೀರ್ಘಕಾಲ ಉಳಿಯುವುದಿಲ್ಲ," ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.
"ವಿಜಯ್ ಸಿಎಂ ಆದ ಒಂದು ತಿಂಗಳು, ಆರು ತಿಂಗಳು ಅಥವಾ ಗರಿಷ್ಠ ಒಂದು ವರ್ಷದೊಳಗೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆ ಶೇಕಡ 100 ರಷ್ಟಿದೆ," ಎಂದು ಅವರು ವಿಶ್ವಾಸದಿಂದ ಹೇಳಿದ್ದಾರೆ. ಅಲ್ಲದೆ "ಗುರು ಗ್ರಹದ ಬದಲಾವಣೆಯಿಂದಾಗಿ ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚನೆಯಾಗುವುದು ಕಷ್ಟ. ರಾಜಕೀಯವಾಗಿ ದೊಡ್ಡ ಮಟ್ಟದ ಏರುಪೇರುಗಳು ಸಂಭವಿಸಲಿವೆ," ಎಂದು ಅವರು ಎಚ್ಚರಿಸಿದ್ದಾರೆ.
ಕೇವಲ ತಮಿಳುನಾಡು ಮಾತ್ರವಲ್ಲದೆ ದೇಶದ ಇತರ ರಾಜ್ಯಗಳ ಮೇಲೂ ಗ್ರಹಗತಿಗಳ ಪ್ರಭಾವ ಬೀರಲಿದೆ ಎಂದು ವೇಣುಸ್ವಾಮಿ ಹೇಳಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದ್ದು, ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಗಳಿವೆ.
ಗ್ರಹಗಳ ಬದಲಾವಣೆಯಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಊಹಿಸಲೂ ಸಾಧ್ಯವಾಗದಂತಹ ರಾಜಕೀಯ ಬಿಕ್ಕಟ್ಟುಗಳು ತಲೆದೂರಲಿವೆ," ಎಂದು ಭವಿಷ್ಯ ನುಡಿದಿದ್ದಾರೆ.
Venu Swamy తాజాగా Vijay రాజకీయ భవిష్యత్పై సంచలన వ్యాఖ్యలు చేశారు.
— SkyC Media (@SkyCMedia) May 9, 2026
త్రిష లేకుండా ఉండుంటే విజయ్ జాతకం మరోలా ఉండేదని వేణుస్వామి వ్యాఖ్యానించినట్టు సోషల్ మీడియాలో చర్చ జరుగుతోంది. అలాగే విజయ్ సీఎం అయినా, ఆరు నెలలు లేదా ఏడాది లోపే తమిళనాడులో మళ్లీ ఎన్నికలు వచ్చే అవకాశం ఉందని జోస్యం… pic.twitter.com/sbzMmCHfp3
ರಾಜಕೀಯ ವಿಶ್ಲೇಷಕರು ಹೇಳೋದೇನು?
ವೇಣುಸ್ವಾಮಿ ಅವರ ಈ ಭವಿಷ್ಯವನ್ನು ರಾಜಕೀಯ ವಿಶ್ಲೇಷಕರು ಪ್ರಶ್ನೆ ಮಾಡಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈಗಾಗಲೇ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಇಂತಹ ಸಂದರ್ಭದಲ್ಲಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವ ಸಾಧ್ಯತೆಯೇ ಇಲ್ಲ," ಎಂದು ವಿಶ್ಲೇಷಕರು ವಾದಿಸುತ್ತಿದ್ದಾರೆ.
ಮತ್ತೊಂದೆಡೆ "ತಮಿಳುನಾಡಿನಲ್ಲೂ ವಿಜಯ್ ಅವರು ಇತರ ಪಕ್ಷಗಳ ಬೆಂಬಲದೊಂದಿಗೆ ಸ್ಥಿರ ಸರ್ಕಾರ ನೀಡಲಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ವೇಣುಸ್ವಾಮಿ ಅವರ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಾಜಕೀಯ ಪಕ್ಷಗಳಲ್ಲೂ ಚರ್ಚೆ ಶುರುವಾಗುವಂತೆ ಮಾಡಿದೆ. ಅವರ ಭವಿಷ್ಯ ನಿಜವಾಗುತ್ತದೆಯೇ ಅಥವಾ ಕೇವಲ ಅಂದಾಜಾಗಿ ಉಳಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications