Rohit Sharma: 3.25 ಕೋಟಿ ರೂ. ಮೌಲ್ಯದ ವಾಚ್‌ಗಾಗಿ ರೋಹಿತ್ ಶರ್ಮಾ ಕೈ ಹಿಡಿದು ಎಳೆದ ಕಿಡಿಗೇಡಿಗಳು; ವಿಡಿಯೋ ವೈರಲ್
Rohit Sharma: ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಕಾರಿನಲ್ಲಿ ಪ್ರಯಾಣ ಮಾಡುವ ವೇಳೆ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು. ಈ ವೇಳೆ ಹ್ಯಾಂಡ್ ಶೇಕ್ ಮಾಡುವಾಗ ಅವರ ಕೈಯಲ್ಲಿದ್ದ ದುಬಾರಿ ಬೆಲೆಯ ವಾಚ್ ಅನ್ನು ಕಿತ್ತುಕೊಳ್ಳಲು ಯುವಕರು ಪ್ರಯತ್ನಿಸಿದ್ದು, ತಕ್ಷಣ ಎಚ್ಚೆತ್ತುಕೊಂಡ ಹಿಟ್ ಮ್ಯಾನ್ ಕೈಬಿಡಿಸಿಕೊಳ್ಳಲು ಹರಸಾಹಸಪಟ್ಟ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇತ್ತೀಚೆಗೆ ರೋಹಿತ್ ಶರ್ಮಾ ಅವರು ತಮ್ಮ ಕಾರಿನಲ್ಲಿ ಕುಳಿತು ಅಭಿಮಾನಿಗಳ ಕಡೆ ನೋಡುತ್ತಾ ಕೈಬೀಸುತ್ತಿರುವಾಗ ಈ ಘಟನೆ ಸಂಭವಿಸಿದೆ. ರೋಹಿತ್ ಶರ್ಮಾ ತಮ್ಮ ಕಾರಿನ ಕಿಟಕಿಯಿಂದ ಅಭಿಮಾನಿಗಳಿಗೆ ಕೈಬೀಸುತ್ತಿದ್ದಾಗ ಇಬ್ಬರು ಯುವಕರು ಕಾರಿನ ಹತ್ತಿರ ಬಂದು ಅವರ ಕೈ ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಒಬ್ಬ ಯುವಕ ರೋಹಿತ್ ಅವರ ಕೈಯಲ್ಲಿದ್ದ ಬೆಲೆ ಬಾಳುವ ವಾಚ್ ಅನ್ನು ಕಿತ್ತುಕೊಳ್ಳಲು ಯತ್ನಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಎಚ್ಚರಿಕೆ ನೀಡಿದ ರೋಹಿತ್ ಶರ್ಮಾ
ತಕ್ಷಣ ಎಚ್ಚೆತ್ತುಕೊಂಡ ರೋಹಿತ್ ಶರ್ಮಾ ಕೂಡಲೇ ತಮ್ಮ ಕೈಯನ್ನು ಒಳಕ್ಕೆ ಎಳೆದುಕೊಂಡು ಕಾರಿನ ಗಾಜನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ಅಸಭ್ಯವಾಗಿ ವರ್ತಿಸಿದ ಆ ಯುವಕರಿಗೆ ಎಚ್ಚರಿಕೆ ನೀಡಿ ಅಲ್ಲಿಂದ ಹೊರಟಿದ್ದಾರೆ. ಇನ್ನೂ ರೋಹಿತ್ ಧರಿಸಿದ್ದ ಕೈಗಡಿಯಾರ ರೋಲೆಕ್ಸ್ ಡೇಟೋನಾ ಜಿರಾಫೆ (Rolex Daytona Giraffe) ಎನ್ನಲಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು ₹3.25 ಕೋಟಿ ಎಂದು ವರದಿಯಾಗಿದೆ.
ಅಶಿಸ್ತಿನ ವರ್ತನೆಗೆ ನೆಟ್ಟಿಗರ ಆಕ್ರೋಶ
ಈ ಇಡೀ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಈ ಯುವಕರ ಇಂತಹ ಅಶಿಸ್ತಿನ ವರ್ತನೆಯ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರಿಟಿಗಳ ಭದ್ರತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಸ್ಟಾರ್ ಆಟಗಾರರಿಗೆ ಇರುವ ಭದ್ರತಾ ಸವಾಲುಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಈ ಘಟನೆ ಯಾವ ನಗರದಲ್ಲಿ ಅಥವಾ ಯಾವ ಸಮಯದಲ್ಲಿ ನಡೆದಿದೆ ಎಂಬ ಬಗ್ಗೆ ಇನ್ನು ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಇದು ಸಾರ್ವಜನಿಕವಾಗಿ ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಅಭಿಮಾನದ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವುದು ಸರಿಯಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು," ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
In a shocking incident, some fans tried to snatch former Mumbai Indians captain Rohit Sharma's expensive watch. This happened while he was greeting a crowd from his car.
— Hate Detector 🔍 (@HateDetectors) May 9, 2026
A video of the incident is now going viral. It shows Rohit sitting in the back seat of his car and waving to… pic.twitter.com/8PK27Wq6oI
ರೋಹಿತ್ ಕಟ್ಟಿದ ವಾಚ್ ಬೆಲೆ ಎಷ್ಟು ಗೊತ್ತಾ?
ವರದಿಗಳ ಪ್ರಕಾರ ರೋಹಿತ್ ಶರ್ಮಾ ಅವರು ಕೈಗೆ ಕಟ್ಟಿಕೊಂಡಿದ್ದ ವಾಚ್ ಅಂತಿಂತದ್ದಲ್ಲ. ಅದು ಜಗತ್ತಿನ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳಲ್ಲಿ ಒಂದಾದ Rolex Daytona Giraffe ಎನ್ನಲಾಗಿದೆ. ಇದರ ಅಂದಾಜು ಮೌಲ್ಯ ಸುಮಾರು ₹3.25 ಕೋಟಿ. ಇದರ ಅಪರೂಪದ ವಿನ್ಯಾಸ ಮತ್ತು ಮೌಲ್ಯವೇ ಕಳ್ಳರ ಕಣ್ಣು ಬೀಳಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications