ರಜೆಯ ಗೋಳು ಇನ್ನಿಲ್ಲ; ಪೇದೆಗಳು ಮನೆಗೆ?

new-delhi-union-govt-is-to-abolish-constable-posts
ನವದೆಹಲಿ, ಏ.22: Exit constables! ರಜೆ ಅದೂ ಇದೂ ಎಂದು ಹಿರಿಯ ಅಧಿಕಾರಿಗಳಿಗೆ ಇರುಸುಮುರುಸು ಉಂಟುಮಾಡುತ್ತಿದ್ದ ಕಾನ್‌ಸ್ಟೆಬಲ್‌ ಗಳು ಇನ್ನು ಇತಿಹಾಸದ ಪುಟ ಸೇರಲಿದ್ದಾರೆ. ಏನಪ್ಪಾ ರಜೆ ಕೇಳ್ತಿದ್ದರೆಂದು ಅವರನ್ನೆಲ್ಲಾ ಮನೆಗೇ ಕಳಿಸಿಬಿಟ್ಟರಾ? ಎಂದು ಆತಂಕ ಪಡಬೇಡಿ. ಏಕೆಂದರೆ ಇತಿಹಾಸ ಪುಟ ಸೇರಿರುವುದು ಅವರು ನಿರ್ವಹಿಸುತ್ತಿದ್ದ ಹುದ್ದೆಗಳು ಅಷ್ಟೇ.

ಅಂದರೆ ಇನ್ನು ಮುಂದೆ ಪೊಲೀಸ್ ಠಾಣೆಗಳಲ್ಲಿ ಪೇದೆಗಳು ನಿಮಗೆ ಕಾಣಸಿಗುವುದಿಲ್ಲ. ಏಕೆಂದರೆ 152 ವರ್ಷಗಳಿಂದ ಕಾರ್ಯಗತವಾಗಿದ್ದ ಪೇದೆ ಹುದ್ದೆಗಳನ್ನು ಕೇಂದ್ರ ಸರಕಾರ ಸದ್ಯದಲ್ಲೇ ರದ್ದುಗೊಳಿಸಲಿದೆ. ಅದಕ್ಕೂ ಮುನ್ನ ಕಾನೂನು ಸುವ್ಯಸವ್ಥೆ ಸಂಪೂರ್ಣವಾಗಿ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುವಂತಹುದಾಗಿದ್ದು, ಈ ನಿಟ್ಟಿನಲ್ಲಿ ಅವುಗಳ ಅನುಮೋದನೆಗಾಗಿ ಕೇಂದ್ರ ಕಾಯುತ್ತಿದೆ.

ಪೊಲೀಸ್‌ ಇಲಾಖೆಯ ನಾಗರಿಕ ಸೇವಾ ವಿಭಾಗದಲ್ಲಿ ಕಾನ್‌ ಸ್ಟೆಬಲ್‌ ಹುದ್ದೆಯನ್ನು ರದ್ದುಗೊಳಿಸಿ ಇದಕ್ಕೆ ಪರ್ಯಾಯವಾಗಿ ಸಹಾಯಕ ಉಪ ನಿರೀಕ್ಷಕ (ಎಎಸ್‌ಐ) ರನ್ನು ನೇಮಿಸಿಕೊಳ್ಳುವ ಪ್ರಸ್ತಾವನೆಯನ್ನು ಕೇಂದ್ರವು ಕಳೆದ ವಾರ ರಾಜ್ಯಗಳಿಗೆ ರವಾನಿಸಿದೆ.

ಗಮನಿಸಿ, ಹೀಗೆ ಪೇದೆ ಬದಲು ಎಎಸ್‌ಐ ಆಗಿ ನೇಮಕಗೊಳ್ಳಲು ಕನಿಷ್ಠ ವಿದ್ಯಾರ್ಹತೆ ಪದವಿ ಅಗತ್ಯವಾಗಿರುತ್ತದೆ. ಮತ್ತೊಂದು ಸಂಗತಿಯೆಂದರೆ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ ಕಾನ್‌ ಸ್ಟೆಬಲ್‌ ಹುದ್ದೆ ಮುಂದುವರಿಯಲಿದೆ.

ದ್ವಿತೀಯ ಆಡಳಿತ ಸುಧಾರಣಾ ಆಯೋಗ ನೀಡಿದ್ದ ಈ ಸಲಹೆ ಎ. 15ರಂದು ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚೆಗೆ ಬಂದಿದೆ. ಪೊಲೀಸ್‌ ಪಡೆಯ ಅವಿಭಾಜ್ಯ ಅಂಗವಾಗಿ ಬೆನ್ನೆಲುಬಿನಂತಿರುವ ಕಾನ್‌ಸ್ಟೆಬಲ್‌ ಹುದ್ದೆ 1861ರಲ್ಲಿ ಪೊಲೀಸ್‌ ಕಾಯಿದೆ ಜಾರಿಗೆ ಬಂದಾಗ ಅಸ್ತಿತ್ವಕ್ಕೆ ಬಂದಿದೆ.

ಇದು ಪೊಲೀಸ್‌ ಪಡೆಯ ಅತಿ ಕೆಳಗಿನ ಹುದ್ದೆ. ಕಾನ್‌ ಸ್ಟೆಬಲ್‌ ಆದ ಮೇಲೆ ಹೆಡ್‌ ಕಾನ್‌ ಸ್ಟೆಬಲ್‌ ಹುದ್ದೆ ಇದೆ. ಹಾಲಿ ಕಾನ್‌ಸ್ಟೆಬಲ್‌ ಗಳಿಗೆ ನಿಜಕ್ಕೂ ಇದು ಸಂತಸದ ಸುದ್ದಿಯೇ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+