ಕೆ.ಚಂದ್ರಶೇಖರ್ ಯು ಟರ್ನ್ ನಾಮಪತ್ರ ವಾಪಸ್ ?

ಬಸವನಗುಡಿ ಮಾಜಿ ಶಾಸಕ ಮತ್ತು ಮಾಜಿ ಮೇಯರ್ ಕೆ.ಚಂದ್ರಶೇಖರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪ್ರೊ.ಬಿ.ಕೆ.ಚಂದ್ರಶೇಖರ್ ಅವರಿಂದಾಗಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಇದರಿಂದ ಅವರು ಬಂಡಾಯದ ಕಹಳೆ ಮೊಳಗಿಸಿದ್ದರು.
ಪಕ್ಷದ ಅಭ್ಯರ್ಥಿಗೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಶುಕ್ರವಾರ ತಡರಾತ್ರಿ ಕೇಂದ್ರ ಸಚಿವ ಸರ್ವೆ ಸತ್ಯಾನಾರಾಯಣ ಕೆ.ಚಂದ್ರಶೇಖರ್ ಅವರ ಮನವೊಲಿಸಿದ್ದಾರೆ. ನಾಮಪತ್ರ ಹಿಂಪಡೆದು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಚಂದ್ರಶೇಖರ್ ನಾಮಪತ್ರ ಹಿಂಪಡೆದರೆ, ಬಸವನಗುಡಿಯಲ್ಲಿ ಬಂಡಾಯದ ಬೆಂಕಿ ಆರಿದಂತಾಗುತ್ತದೆ. ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್ ನಾಮಪತ್ರ ಹಿಂಪಡೆಯುವು ಬಗ್ಗೆ ಆಲೋಚಿಸಿಲ್ಲ. ಕೆಲವು ಷರತ್ತು ಹಾಕಿದ್ದೇನೆ. ಅದನ್ನು ಈಡೇರಿಸುವ ಭರವಸೆ ನೀಡಿದರೆ, ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರವಿ ಸುಬ್ರಮಣ್ಯ ವಿರುದ್ಧ ಸ್ಪರ್ಧಿಸಿ ಚಂದ್ರಶೇಖರ್ ಸೋಲು ಅನುಭವಿಸಿದ್ದರು. ಆದ್ದರಿಂದ ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ರಾಜ್ಯದಲ್ಲಿ 15ಕ್ಕೂ ಹೆಚ್ಚುಮಂದಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಅದರಲ್ಲಿ ಪ್ರಮುಖರ ನಾಮಪತ್ರ ಹಿಂಪಡೆಯುಂತೆ ಮಾಡಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಇಂದು ಕೊನೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯದಿದ್ದರೆ, ಮುಂದಿನ ಕಾರ್ಯತಂತ್ರ ಏನು ? ಎಂದು ಪಕ್ಷದ ಪ್ರಮುಖರು ತೀರ್ಮಾನಿಸಬೇಕಾಗಿದೆ.
ಬಂಡಾಯ ಮೊಳಗಿಸಿರುವ ಪ್ರಮುಖರು : ಕಾಪು ಕ್ಷೇತ್ರ ವಸಂತ ಸಾಲಿಯಾನ, ಭದ್ರಾವತಿ ಬಿ.ಕೆ.ಸಂಗಮೇಶ್, ರಾಜರಾಜೇಶ್ವರಿ ನಗರ ಪಿ.ಎಂ.ಕೃಷ್ಣಮೂರ್ತಿ, ಶ್ರೀರಂಗಪಟ್ಟಣ ರವೀಂದ್ರ ಶೀಕಂಠಯ್ಯ, ಕಾರವಾರ ಸತೀಶ್ ಸೈಲ್,
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications