ಅಂದಿನ ರೆಡ್ಡಿ ಸಾಮ್ರಾಜ್ಯವೂ ಈ ಬಾರಿಯ ಚುನಾವಣೆಯೂ

2008ರ ಚುನಾವಣೆಯತ್ತ ಹಿನ್ನೋಟ ಹಾಯಿಸುವುದಾದರೆ ಬಳ್ಳಾರಿ ಜಿಲ್ಲೆಯಲ್ಲಿ ಅಂದು ನಡೆದದ್ದು ಮೂವರು ಗಣಿಧಣಿಗಳಾದ ಜನಾರ್ಧನ ರೆಡ್ಡಿ, ಅನಿಲ್ ಲಾಡ್, ದಿವಾಕರ್ ಬಾಬು ನಡುವಣ ಪ್ರತಿಷ್ಠೆಯ ಮೇಲಾಟ, ಹಣದೇಟಿನ ಪ್ರಾಬಲ್ಯ.

ಈ ಎಲ್ಲಾ ಸವಾಲನ್ನು ಮೆಟ್ಟಿನಿಂತು ಕಾಂಗ್ರೆಸ್ ಭದ್ರ ಕೋಟೆ ಬಳ್ಳಾರಿಯಲ್ಲಿ ರೆಡ್ಡಿ ಕುಟುಂಬ ಕೇಸರಿ ಬಾವುಟ ಹಾರಿಸುವಲ್ಲಿ ಅಂದು ಯಶಸ್ವಿಯಾಗಿದ್ದು ಈಗ ಇತಿಹಾಸ. ರೆಡ್ಡಿ ಸಹೋದರರಿಗೆ ಯಾವುದೇ ವಿಚಾರದಲ್ಲಿ ಸರಿಸಾಟಿಯಾಗಿ ನಿಲ್ಲಲು ಇಬ್ಬರೂ ಗಣಿಧಣಿಗಳ ಜೊತೆಗೆ ವೀರಶೈವ ಕೋಮಿಗೆ ಸೇರಿದ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ ಕೂಡಾ ವಿಫಲರಾಗಿ ಕೈಚೆಲ್ಲಿ ಕೂತಿದ್ದರು.

ಬರೀ ಬಳ್ಳಾರಿ ಜಿಲ್ಲೆಗೆ ರೆಡ್ಡಿ ಬ್ರದರ್ಸ್ ಸಾಮ್ರಾಜ್ಯ ಮೀಸಲಾಗಿರದೇ. ಪಕ್ಕದ ಚಿತ್ರದುರ್ಗ, ಗದಗ ಜಿಲ್ಲೆಗೂ ವಿಸ್ತರಿಸಿತ್ತು. ಹಣವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ರೆಡ್ಡಿಗಳು ಸ್ವಲ್ಪ ವರ್ಷದ ಮಟ್ಟಿಗಾದರೂ ತೋರಿಸಿಕೊಟ್ಟಿದ್ದರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಗುರಿಯಂತೆ ಆಡಿಸಿದ್ದರು.

ಆದರೆ ಪ್ರಸಕ್ತ ಚುನಾವಣೆಯಲ್ಲಿ ಅದೆಲ್ಲಾ ಗೌಣ, ಯಾಕೆಂದರೆ ಅಂದು ಇತಿಹಾಸ ಮಾರ್ಪಾಡು ಮಾಡಿದ್ದ ಜನಾರ್ಧನ ರೆಡ್ಡಿ ಮನೆಯ ದಾರಿಯನ್ನು ಮರೆಯುವಂತೆ ಮಾಡಿದೆ ಅವರ ಜೈಲುವಾಸ, ಕವಲು ದಾರಿಯಲ್ಲಿದೆ ರೆಡ್ಡಿ ಕುಟುಂಬ. ಸಹೋದರ ಕರುಣಾಕರ ರೆಡ್ಡಿ ಇವರಿಂದ ಬಲುದೂರ ಸಾಗಿ ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ.

ಅದಕ್ಕೇ ಇರಬಹುದು ಬಹುಷ: it's a just question of time ಅನ್ನೋದು, ಕಾಲಚಕ್ರ ತಿರುಗದೇ ಇರುತ್ತದೆಯೇ? ರೆಡ್ದಿ ಸಹೋದರು, ಅವರ ಆಪ್ತರು, ಅವರ ಸಂಬಿಕಸ್ಥರ ಈ ಬಾರಿ ಚುನಾವಣೆಯಲ್ಲಿನ ನಿಲುವೇನು? ಸ್ಲೈಡಿನಲ್ಲಿ ನೋಡಿ..

ಕರುಣಾಕರ ರೆಡ್ಡಿ

ಕರುಣಾಕರ ರೆಡ್ಡಿ

ಅಂದು ಕೂಡ ಹರಪನಹಳ್ಳಿಯಿಂದ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದರು, ಪ್ರಸಕ್ತ ಚುನಾವಣೆಯಲ್ಲಿ ಕೂಡಾ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಜನಾರ್ಧನ ರೆಡ್ಡಿ

ಜನಾರ್ಧನ ರೆಡ್ಡಿ

ಈ ಸೆಪ್ಟಂಬರ್ ಬಂದರೆ ಜೈಲು ಸೇರಿ ಎರಡು ವರ್ಷ ಆಗುತ್ತದೆ. ವಿಧಾನ ಪರಿಷತ್ ಸದಸ್ಯರಾಗಿರುವ ಇವರು ಚುನಾವಣೆಯ ಎಲ್ಲಾ ಚಟುವಟಿಕೆಗಳಿಂದ ದೂರವಿಲ್ಲದೆ ಬೇರೆ ವಿಧಿಯಿಲ್ಲ.

ಸೋಮಶೇಖರ ರೆಡ್ಡಿ

ಸೋಮಶೇಖರ ರೆಡ್ಡಿ

ಅಂದು ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ರೆಡ್ಡಿ ಕುಟುಂಬದ ಕಟ್ಟಾ ವಿರೋಧಿ, ಕಾಂಗ್ರೆಸ್ಸಿನ ಅನಿಲ್ ಲಾಡ್ ವಿರುದ್ದ ಕೂದಲೆಳೆಯಂತರದಿಂದ ಗೆದ್ದಿದ್ದರು. ಆದರೆ, ಈ ಬಾರಿ ಆಶ್ಚರ್ಯ ರೀತಿಯಲ್ಲಿ ಕಡೇ ಗಳಿಗೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಕೊಡುವ ಕಾರಣ ಚುನಾವಣೆಯಲ್ಲಿ ರಾಜ್ಯಾದ್ಯಂತ BSR ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆನ್ನುವುದು.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

ರೆಡ್ಡಿ ಪರಮಾಪ್ತ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಗೆದ್ದು, ಬಿಜೆಪಿ ತೊರೆದು ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ರಾಮುಲು, BSR ಎನ್ನುವ ಹೊಸ ಪಕ್ಷ ಹುಟ್ಟು ಹಾಕಿ ಈಗ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ತನ್ನದೇ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಲಿದ್ದಾರೆ.

ಟಿ ಎಚ್ ಸುರೇಶ್ ಬಾಬು

ಟಿ ಎಚ್ ಸುರೇಶ್ ಬಾಬು

ರೆಡ್ಡಿ ಕುಟುಂಬದ ಸದಸ್ಯ. ಈ ಯುವಕ ಕಳೆದ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಿಂದ ಬಿಜೆಪಿ ಟಿಕೆಟಿನಿಂದ ಗೆದ್ದು ನಂತರದ ದಿನಗಳಲ್ಲಿ BSR ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕಂಪ್ಲಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. BSR ಪಕ್ಷ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ.

ಬಿ ನಾಗೇಂದ್ರ

ಬಿ ನಾಗೇಂದ್ರ

ಕೂಡ್ಲಿಗಿ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಟಿಕೆಟಿನಿಂದ ಗೆದ್ದಿದ್ದರು. ಈ ಬಾರಿ BSR ಪಕ್ಷದ ಟಿಕೆಟಿನಿಂದ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಸಣ್ಣ ಫಕೀರಪ್ಪ

ಸಣ್ಣ ಫಕೀರಪ್ಪ

ಬಿಜೆಪಿ ಟೆಕೆಟಿನಿಂದ ರಾಯಚೂರು ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು ರಾಮುಲು ಕುಟುಂಬದ ಸದಸ್ಯರು. BSR ಪಕ್ಷದ ಜೊತೆ ಗುರುತಿಸಿಕೊಂಡಿದ್ದರೂ ಪ್ರಸಕ್ತ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ಶಾಂತಾ

ಶಾಂತಾ

ಶ್ರೀರಾಮುಲು ಸಹೋದರಿ ಮತ್ತು ಬಿಜೆಪಿ ಟಿಕೆಟಿನಿಂದ ಗೆದ್ದ ಬಳ್ಳಾರಿ ಸಂಸದೆ. ಸದ್ಯ ಸಹೋದರನಿಗೆ ಸಾಥ್ ನೀಡಿರುವ ಶಾಂತಾ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಆನಂದ್ ಸಿಂಗ್

ಆನಂದ್ ಸಿಂಗ್

ರೆಡ್ಡಿ ಕುಟುಂಬದ ಪರಮಾಪ್ತ ಎಂದೇ ಗುರುತಿಸಿಕೊಂಡಿದ್ದವರು. ಕಳೆದ ಬಾರಿ ವಿಜಯನಗರ (ಹೊಸಪೇಟೆ) ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಿನಿಂದ ಗೆದ್ದಿದ್ದರು. ಈ ಬಾರಿ ಅವರು ಬಿಜೆಪಿ ಮೇಲೆ ನಿಷ್ಠೆ ಮುಂದುವರಿಸಿದ್ದು, ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಆನಂದ್ ಸಿಂಗ್ ಸಹೋದರಿ ರಾಣಿ ಈ ಕ್ಷೇತ್ರದಲ್ಲಿ BSR ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+