ಬೋಸ್ಟನಿನಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: 1 ಸಾವು
ಬೋಸ್ಟನ್, ಏ.19: ಒಂದೇ ವಾರದಲ್ಲಿ ಅಮೆರಿಕದಲ್ಲಿ ಮೂರನೆಯ ಸ್ಫೋಟ ಸಂಭವಿಸಿದ್ದು, ಭಾರಿ ಆಘಾತಕ್ಕೊಳಗಾಗಿದೆ. ಬೋಸ್ಟನ್ ಮ್ಯಾರಥಾನ್ ಅವಳಿ ಸ್ಫೋಟದ ನಂತರ ಇದೀಗ ಪ್ರತಿಷ್ಠಿತ Massachusetts Institute of Technology ಕ್ಯಾಂಪಸ್ಸಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಆರಂಭದಲ್ಲಿ, ಗುರುವಾರ ರಾತ್ರಿ 11 ಗಂಟೆಯ ವೇಳೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದು ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟ ಘಟನೆ ನಡೆಯಿತು. ತದನಂತರ ಮತ್ತೆ ಮೆಸಾಚ್ಯುಸೆಟ್ಸ್ ನ ವಾಟರ್ ಟೌನಿನಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ.

ಒಟ್ಟಿನಲ್ಲಿ ಬೋಸ್ಟನಿನ ಮೆಸಾಚ್ಯುಸೆಟ್ಸ್ ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದೆ, ಉದ್ವಿಗ್ನ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದು ಭಯೋತ್ಪಾದಕರ ಕೃತ್ಯವಾ ಅಥವಾ ದುಷ್ಕರ್ಮಿಗಳ ಅಟ್ಟಹಾಸವಾ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications