ದೆಹಲಿಯಲ್ಲಿ ನೇಪಾಳ ಯುವತಿಯ ಗ್ಯಾಂಗ್ ರೇಪ್

Nepali young woman gang-raped at Nanakpura flyover Delhi
ನವದೆಹಲಿ, ಏ.19: ನವದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. 20ರ ಹರೆಯದ ನೇಪಾಳಿ ಯುವತಿಯನ್ನು ಅಪಹರಣ ಮಾಡಿ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ.

ಗುರುವಾರ ಬೆಳಗ್ಗೆ 7.30ರಲ್ಲಿ ಬಾಧಿತ ಯುವತಿ ಅರೆಬಟ್ಟೆಯಲ್ಲಿ ರಡ್ತೆ ಮೇಲೆ ಬಿದ್ದಿದ್ದುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸದರಿ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ, ವಿಚಾರಣೆ ನಡೆಸಿದಾಗ ಅಪಹರಣ - ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗಹೆ ಬಂದಿದೆ.

ದಕ್ಷಿಣ ದಿಲ್ಲಿಯ ನಾನಕಪುರ ಫ್ಳೈ ಓವರ್ ಸಮೀಪ ಅರೆ ಪ್ರಜ್ಞಾವಸ್ಥೆಯಲ್ಲಿ ಯುವತಿ ಬಿದ್ದಿದ್ದಳು. ಪೊಲೀಸರು ಆಕೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿರುವ ಕೋಟ್ಲಾ ಮುಬಾರಕ್ ಪುರದಿಂದ ಬುಧವಾರ ರಾತ್ರಿ ಮೂವರು ಅಪರಿಚಿತರು ಆಕೆಯನ್ನು ಅಪಹರಿಸಿದ್ದರು. ನಂತರ ಆಕೆಯನ್ನು ರೇಪ್ ಮಾಡಿ, ಫ್ಳೈ ಓವರ್ ಸಮೀಪ ಬಿಸಾಕಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಫೆನ್ಸ್ ಕಾಲೊನಿಯಲ್ಲಿ ಮನೆಗೆಲಸ ಮಾಡುವ ಮಹಿಳೆ ಕೆಲಸದ ನಂತರ ಅಣ್ಣನ ಮನೆಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಾತನಾಡಲು ಆಗದಷ್ಟು ದುಸ್ಥಿತಿಯಲ್ಲಿ ಯುವತಿ ಕೊನೆಗೆ ಇಟ್ಟಿಗೆ ತುಣುಕಿನಲ್ಲಿ Kotla Mubarakpur, Nepal ಮತ್ತು rape ಎಂಬ ತುಣುಕಗಳನ್ನು ಬರೆದು ತನಗೊದಗಿದ ಅವಸ್ಥೆಯನ್ನು ಹೇಳಿಕೊಂಡಿದ್ದಾಳೆ.

ಗ್ರೇಟರ್ ಕೈಲಾಷ್ ಭಾಗದಲ್ಲಿ ಆಕೆಯ ಗಂಡ ಕೆಫೆಯೊಂದರಲ್ಲಿ ವೈಟರ್ ಆಗಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+