ಮೈತ್ರಿ ಮಾತುಕತೆ : ಸಿಎಂ ಜೊತೆ ಶ್ರೀರಾಮುಲು

ಶನಿವಾರ ರಾತ್ರಿ ಸಿಎಂ ಗೃಹ ಕಚೇರಿಗೆ ಭೇಟಿ ನೀಡಿದ ಶ್ರೀರಾಮುಲು ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ನಡೆಸಿರು. ಇಬ್ಬರು ನಾಯಕರು ಮೈತ್ರಿ ಇಲ್ಲವೇ ವಿಲೀನ ಕುರಿತು ಮಾತುಕತೆ ನಡೆಸಿದ್ದಾರೆ ಎಂದ ಸಿಎಂ ಆಪ್ತ ಮೂಲಗಳು ತಿಳಿಸಿವೆ. ಆದರೆ, ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಏಕೆ ವಿಲೀನ : ಶ್ರೀರಾಮುಲು ಸದ್ಯ ಒಬ್ಬಂಟಿಯಾಗಿದ್ದಾರೆ. ಅವರ ಬೆನ್ನೆಲುಬಾಗಿ ನಿಲ್ಲಬೇಕಾಗಿದ್ದ ಬಳ್ಳಾರಿ ಜಿಲ್ಲೆಯ ಶಾಸಕರಾದ ಸೋಮಶೇಖರ ರೆಡ್ಡಿ ಹಾಗೂ ಬಿ.ನಾಗೇಂದ್ರ ಬಿಎಸ್‌ಆರ್ ಕಾಂಗ್ರೆಸ್ ಸೇರುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಪಕ್ಷ ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಬೇರೆ ಪಕ್ಷದೊಂದಿಗೆ ವಿಲೀನ ಅನಿವಾರ್ಯ ಎಂದು ಶ್ರೀರಾಮುಲು ಚಿಂತಿಸಿದ್ದಾರೆ. ಬಳ್ಳಾರಿಯ ಕೆಲ ಮುಖಂಡರು ಶ್ರೀ ರಾಮುಲು ಅವರಿಗೆ ವಿಲೀನದ ಬಗ್ಗೆ ಚಿಂತನೆ ನಡೆಸಲು ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಉನ್ನತ ಮೂಲಗಳ ಪ್ರಕಾರ, ಬಳ್ಳಾರಿ, ರಾಯಚೂರು, ಗದಗ ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ರಾಮುಲು ಚರ್ಚೆ ನಡೆಸಿದ್ದಾರೆ. ಆದರೆ, ಬಿಜೆಪಿಯಿಂದ ಅಂತಿಮ ತೀರ್ಮಾನ ಪ್ರಕಟವಾಗಿಲ್ಲ.
ಅಲ್ಲದೇ ಬಿಎಸ್ಆರ್ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಹೊಂದಾಣಿಕೆ ಬೇಡ ಎಂದು ಬಿಜೆಪಿಯ ರಾಜ್ಯದ ಹಿರಿಯ ಮುಖಂಡರು ಅಭಿಪ್ರಾಯಪಟ್ಟಿದ್ದು, ಒಪ್ಪಂದ ಅಥವ ವಿಲೀನ ಮುರಿದು ಬೀಳುಸ ಸಂಭವವಿದೆ.
ಕೆಲವು ದಿನಗಳ ಹಿಂದೆ ಜೆಡಿಎಸ್ ನೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಬಿಎಸ್ಆರ್ ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ, ದೊಡ್ಡ ಗೌಡರು ಅದಕ್ಕೆ ಫುಲ್ ಸ್ಟಾಪ್ ಹಾಕಿ, ಶ್ರೀರಾಮುಲು ಆಸೆಗೆ ತಣ್ಣೀರು ಸುರಿದ್ದಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications