ಸಮುದ್ರಕ್ಕೆ ಬಿದ್ದ ವಿಮಾನ, ಪ್ರಯಾಣಿಕರು ಪಾರು

ಸಮುದ್ರಕ್ಕೆ ಬಿದ್ದ ಕೂಡಲೆ ವಿಮಾನ ಎರಡು ಭಾಗಗಳಾಗಿದೆ ಎಂದು ಹೇಳಲಾಗಿದೆ. ನಂತರ ಸಮುದ್ರಕ್ಕೆ ನುಗ್ಗಿದ್ದರೂ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ವರದಿಯ ಪ್ರಕಾರ, ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂಡೋನೇಷ್ಯಾದ ರೆಸಾರ್ಟ್ ದ್ವೀಪ ಬಾಲಿಯಲ್ಲಿ ರನ್ ವೇ ನಲ್ಲಿ ಇಳಿಯುತ್ತಿದ್ದಾಗ ನಿಯಂತ್ರಣ ತಪ್ಪಿ ವಿಮಾನ ಸಮುದ್ರಕ್ಕೆ ನುಗ್ಗಿದೆ. ವಿಮಾನ ಬಂಡುಂಗ್‌ನಿಂದ ಬಂದು ಬಾಲಿಯಲ್ಲಿ ಇಳಿಯುತ್ತಿತ್ತು. ಈ ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಕರ್ನಾಟಕದ ಬಜ್ಪೆ ವಿಮಾನ ನಿಲ್ದಾಣದಲ್ಲಿಯೂ 2010ರ ಮೇ 22ರಂದು ಇದೇ ರೀತಿ, ದುಬೈನಿಂದ ಬರುತ್ತಿದ್ದ ವಿಮಾನ ರನ್ ವೇನಿಂದ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಆ ದುರಂತದಲ್ಲಿ 158 ಪ್ರಯಾಣಿಕರು ಸಾವಿಗೀಡಾಗಿದ್ದರು. ಅದೇ ರೀತಿ ಬಾಲಿಯಲ್ಲಿಯೂ ಅಪಘಾತ ನಡೆದಿದ್ದರೂ ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.












Click it and Unblock the Notifications