ಪತ್ನಿ ರೇಪ್ ಮಾಡಿದ್ದು ಪತಿ ಅಷ್ಟೇ ಅಲ್ಲ..ಜೊತೆಗೆ

Woman raped by her Husband and relatives New Delhi
ನವದೆಹಲಿ, ಏ.11: ದೆಹಲಿಯಲ್ಲಿ ಮತ್ತೊಮ್ಮೆ ಮಹಿಳೆಯ ಮಾನಹರಣ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಈ ಪ್ರಕರಣದಲ್ಲಿ ಅತ್ಯಾಚಾರ ಎಸಗಿದ್ದು ಮಹಿಳೆಯ ಪತಿ ಹಾಗೂ ಆತನ ಸಂಬಂಧಿಕರು ಎಂಬುದು ದುರಂತವಾಗಿದೆ. ಮನೆಯವರಿಂದ ದೂರಾಗಿ ಪ್ರೀತಿಸಿದವನ ಹಿಂದೆ ಓಡಿ ಬಂದಿದ್ದ ಮಹಿಳೆಗೆ ಈಗ ಅತ್ಯಾಚಾರದ ಘೋರ ಶಿಕ್ಷೆ ಸಿಕ್ಕಿದೆ.

20 ವರ್ಷದ ಮಹಿಳೆ ನಜಫ್ ಘರ್ ಪ್ರದೇಶದಲ್ಲಿ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದಾಗ ಆಕೆ ಮೇಲೆ ಬಲಾತ್ಕಾರ ನಡೆದಿರುವುದು ದೃಢಪಟ್ಟಿದೆ.

ಮಹಿಳೆಯನ್ನು ಮಾತನಾಡಿಸಿದ ಪೊಲೀಸರು ಎಲ್ಲಿಗೆ ಹೊರಟ್ಟಿದ್ರಿ? ಎಂದು ಪ್ರಶ್ನಿಸಿದಾಗ ನನ್ನ ಮದುವೆ ನೋಂದಣಿ ಮಾಡಿಸಲು ತೆರಳುತ್ತಿದ್ದೆ ಆದರೆ, ನನ್ನ ಗಂಡ ಹಾಗೂ ಆತನ ಸಂಬಂಧಿಕರು ಹಾಳು ಮಾಡಿಬಿಟ್ಟರು ಎಂದು ತನ್ನ ಕಥೆ ಹೇಳಿದ್ದಾಳೆ.

ಇಂದ್ರಜೀತ್ ಎಂಬ ಯುವಕನನ್ನು ಪ್ರೀತಿಸಿದ್ದ ಮಹಿಳೆ ತನ್ನ ಪೋಷಕರಿಗೆ ತಿಳಿಸದೆ ದೇಗುಲದಲ್ಲಿ ಮದುವೆಯಾಗಿದ್ದಳು. ನಂತರ ಮದುವೆ ನೋಂದಣಿ ಮಾಡಲು ಎಲ್ಲರೂ ತೆರಳುತ್ತಿದ್ದರು. ಇದಕ್ಕೂ ಮುನ್ನ ಕೋಲ್ಡ್ ಡ್ರಿಂಕ್ಸ್ ಕುಡಿಯಲು ಮಾರ್ಗಮಧ್ಯೆ ನಿಲ್ಲಿಸಲಾಗಿತ್ತು.

ಡ್ರಿಂಕ್ಸ್ ನಲ್ಲಿ ಮಾದಕ ದ್ರವ್ಯ ಸೇರಿಸಿ ಮತ್ತೇರುವಂತೆ ಮಾಡಲಾಗಿದೆ. ನಂತರ ಚಲಿಸುವ ವಾಹನದಲ್ಲೇ ಆಕೆ ಗಂಡ ಹಾಗೂ ಆತನ ಸಂಬಂಧಿಕರಾದ ನಿತಿನ್ ಹಾಗೂ ವಿಜೇಂದರ್ ಅವರು ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಹರ್ಯಾಣದ ಝಾಜ್ಜರ್ ನಲ್ಲಿರುವ ಈಕೆ ದೆಹಲಿಗೆ ಬಂದು ಮದುವೆ ಮಾಡಿಕೊಂಡು ನೋಂದಣಿ ಮಾಡಿಸಿಕೊಂಡು ಮತ್ತೆ ಮನೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದಳು. ಆದರೆ, ನಂಬಿದ ಪ್ರೇಮಿಯಿಂದಲೇ ಅತ್ಯಾಚಾರಕ್ಕೊಳಗಾಗಿ ದೆಹಲಿಯ ರಸ್ತೆ ಪಕ್ಕದಲ್ಲಿ ಅನಾಥವಾಗಿ ಬೀಳಬೇಕಾದ ಪರಿಸ್ಥಿತಿ ಒದಗಿ ಬಂದಿದ್ದು ದುರ್ದೈವ.

ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆಕೆಯನ್ನು ಪ್ರಜ್ಞಾಶೂನ್ಯಳನ್ನಾಗಿಸಿ ಅತ್ಯಾಚಾರ ಎಸಗಿಸುವ ಪ್ಲ್ಯಾನ್ ಹಾಕಿಕೊಂಡಿದ್ದೆವು ಅದರಂತೆ ಎಲ್ಲವನ್ನೂ ಮುಗಿಸಿದೆವು ಎಂದು ಇಂದ್ರಜೀತ್ ಹೇಳಿಕೆ ನೀಡಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+