ರಾಜಧಾನಿಯಲ್ಲಿ 3.6 ಲಕ್ಷ ಹೊಸ ಮತದಾರರು

ಆದರೆ ರಾಜಧಾನಿಯಲ್ಲಿ...? ಬೆಂಗಳೂರಿನಲ್ಲೂ ಹೊಸದಾಗಿ ಮತದಾರರ ನೋಂದಣೆಯಾಗಿದೆ. ಆದರೆ ಹೇಳಿಕೊಳ್ಳುವಷ್ಟು ಆಗಿಲ್ಲ. ಇದಕ್ಕೆ ಮುಖ್ಯವಾಗಿ ಹೊಸ ನೋಂದನಿಗೆ ಬರುವ ಅರ್ಹ ಮತದಾರರ ಬಗ್ಗೆ ಅಧಿಕಾರಿಗಳು ತೋರಿದ ಅಸಡ್ಡೆ ಕಾರಣವಾಗಿದೆ.
ಇದರ ಹೊರತಾಗಿಯೂ ಬೆಂಗಳೂರು ಮತದಾರರು ತ್ರಿವಿಕ್ರಮನಂತೆ ಆ ಕಚೇರಿಯಿಂದ ಈ ಕಚೇರಿಗೆ/ ಆ ಅಧಿಕಾರಿಯಿಂದ ಈ ಅಧಿಕಾರವರೆಗೆ ಎಂದು ಓಡಾಡಿ ನೋಂದಣಿ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಕೊನೆಯ ಕ್ಷಣದಲ್ಲಿ ಅಂದರೆ ಜನವರಿ 28ರಿಂದ ಏಪ್ರಿಲ್ 7ರ ಮಧ್ಯೆ 4.41 ಲಕ್ಷ ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಹಾತೊರೆದಿದ್ದರು.
ಇದರಲ್ಲಿ 3.6 ಲಕ್ಷ ಅರ್ಜಿಗಳು ಊರ್ಜಿತವಾಗಿವೆ. ಅಂದರೆ 3.6 ಲಕ್ಷ ಮಂದಿ ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಚುನಾವಣೆ ದೃಷ್ಟಿಯಿಂದ ಮಹತ್ವದ ಸಂಖ್ಯೆಯೇ. ಇದರ ಜತೆಗೆ ಇನ್ನೂ 71,000 ಅರ್ಜಿಗಳು ಬಾಕಿಯಿದ್ದು, ಅವುಗಳನ್ನೂ ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದು ಬಿಬಿಎಂಪಿ ಚುನಾವಣೆ ವಿಭಾಗ ತಿಳಿಸಿದೆ.
ಆದರೂ 28 ಕ್ಷೇತ್ರಗಳಲ್ಲಿ ಇನ್ನೂ ಅನೇಕ ಅರ್ಹ ಮತದಾರರು ಇದ್ದಾರೆ. ಆದರೆ ಅವರೆಲ್ಲ ನೋಂದಣಿ ಮಾಂಡಿಸಿಕೊಂಡಿಲ್ಲ ಎಂಬುದೇ ಬೇಸರದ ಸಂಗತಿ.
ಇಡೀ ರಾಜ್ಯದಲ್ಲಿ ಈ ಅವಧಿಯಲ್ಲಿ ಒಟ್ಟು 11,67,879 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 7,34,240 ಅರ್ಜಿಗಳಿಗೆ ಒಪ್ಪಿಗೆಯ ಮುದ್ರೆ ಸಿಕ್ಕಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications