ಯುಕೆ 'ಐರನ್ ಲೇಡಿ' ಮಾರ್ಗರೆಟ್ ಥ್ಯಾಚರ್ ಇನ್ನಿಲ್ಲ

Ex-British PM Margaret Thatcher dead at 87
ಲಂಡನ್, ಏ.8: ಯುನೈಟೆಡ್ ಕಿಂಗ್ ಡಮ್ ನ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರು ಸೋಮವಾರ(ಏ.8) ಕೊನೆಯುಸಿರೆಳೆದಿದ್ದಾರೆ. ಐರನ್ ಲೇಡಿ ಆಫ್ ಇಂಗ್ಲೆಂಡ್ ಎಂದೇ ಖ್ಯಾತರಾಗಿದ್ದ ಏಕೈಕ ಮಹಿಳಾ ಪ್ರಧಾನಿ ಇನ್ನು ನೆನಪು ಮಾತ್ರ.

ಮಾರ್ಗರೇಟ್ ಥ್ಯಾಚರ್ ಅವರು 87 ವರ್ಷ ವಯಸ್ಸಾಗಿತ್ತು. ಅಕ್ಟೋಬರ್ 13, 1925ರಲ್ಲಿ ಜನಿಸಿದ ಮಾರ್ಗರೇಟ್ ಹಿಲ್ಡಾ ರಾಬರ್ಟ್ಸ್ ಅವರಿಗೆ ಥ್ಯಾಚರ್, ದಿ ಮಿಲ್ಕ್ ಸ್ನಾಚರ್, ಮ್ಯಾಗಿ, ಅಟ್ಟಿಲ ದಿ ಹೆನ್, ಐರನ್ ಲೇಡಿ ಎಂಬ ಅಡ್ಡ ಹೆಸರುಗಳಿತ್ತು. ಮಾರ್ಕ್ ಹಾಗೂ ಕರೋಲ್ ಥ್ಯಾಚರ್ ಎಂಬ ಮಕ್ಕಳನ್ನು ಹೊಂದಿದ್ದ ಥ್ಯಾಚರ್ ಅವರು ಯುಕೆ ಕಂಡ ಅತ್ಯಂತ ದೀರ್ಘಾವರ್ಧಿ ಆಡಳಿತಗಾರಣಿಯಾಗಿದ್ದರು.

1979 ರಿಂದ 1990ರ ತನಕ ಬ್ರಿಟಿಷ್ ಪ್ರಧಾನಿಯಾಗಿದ್ದ ಥ್ಯಾಚರ್ ಅವರು ಯುರೋಪಿನಲ್ಲಿ ಹತ್ತ್ತು ಹಲವು ಬದಲಾವಣೆ ಕಾಣಲು ಕಾರಣರಾದರು.

ಮಧ್ಯಮ ವರ್ಗದ ಕುಟುಂಬದಿಂದ ಬಂದ ಥ್ಯಾಚರ್ ಅವರು ಆಕ್ಸ್ ಫರ್ಡ್ ನಲ್ಲಿ ರಸಾಯನ ಶಾಸ್ತ್ರ ಅಧ್ಯಯನ ಮಾಡಿದರು. 20 ವರ್ಷಕ್ಕೆ ರಾಜಕೀಯದತ್ತ ಆಕರ್ಷಣೆ ಬೆಳೆಸಿಕೊಂಡರು. ಕರ್ಸವೇಟಿವ್ ಪಕ್ಷದ ಮೂಲಕ 1975ರಲ್ಲಿ ವಿಪಕ್ಷ ಸದಸ್ಯೆಯಾಗಿ ಸಂಸತ್ ಪ್ರವೇಶಿಸಿದರು. 1979ರಲ್ಲಿ ಪಕ್ಷ ಜಯಭೇರಿ ಬಾರಿಸಿದ ಮೇಲೆ ಪ್ರಧಾನಿಯಾದರು.

ಮುಂದೆ ಜನತೆಯ ಆಶೀರ್ವಾದ ಸಿಕ್ಕರೂ ತನ್ನದೇ ಪಕ್ಷದ ಪಿತೂರಿಗೆ ಒಳಗಾಗಿ 1990ರಲ್ಲಿ ರಾಜೀನಾಮೆ ನೀಡಬೇಕಾಯಿತು.ಈ ನಡುವೆ ಒಮ್ಮೆ ಉಗ್ರರ ದಾಳಿಯಿಂದ ಆಕೆ ಬಚಾವಾಗಿದ್ದರು.

ಡೆನಿಸ್ ಥ್ಯಾಚರ್ ಎಂಬ ಉದ್ಯಮಿಯನ್ನು ಆಕೆ ಮದುವೆಯಾಗಿದ್ದರು. ದಂಪತಿಗೆ ಕರೋಲ್ ಹಾಗೂ ಮಾರ್ಕ್ ಎಂಬ ಅವಳಿ ಮಕ್ಕಳು ಜನಿಸಿದರು.
ಜಾರ್ಜ್ ಬುಷ್ ಅವರಿಂದ U.S. Medal of Freedom ಪಡೆದ ಥ್ಯಾಚರ್ ಅವರನ್ನು Baroness Thatcher of Kesteven ಎಂದು ಕರೆಯಲಾಯಿತು.

2002ರ ನಂತರ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದರು. 2003ರಲ್ಲಿ ಪತಿ ವಿಯೋಗ ಅನುಭವಿಸಿದರು. ರೀಗನ್ ಆಡಳಿತ ಮೆಚ್ಚುತ್ತಿದ್ದ ಥ್ಯಾಚರ್ 2004ರಲ್ಲಿ ರೀಗನ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+