ಭಾರತದಲ್ಲಿ ಪೆಟ್ರೋಲ್‌ ಬೆಲೆ ಲೆಕ್ಕಾಚಾರ ಹೇಗಿದೆ ಗೊತ್ತಾ?

ಮುಂಬೈ, ಏ.8: ಪೆಟ್ರೋಲ್‌ ಬೆಲೆ - ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡುವ ಸಾಮಾನ್ಯ ಸಮಸ್ಯೆ. ಭಾರತದಲ್ಲಿ ಈ ಸಮಸ್ಯೆ ಅಗಾಧವಾಗಿದೆ. ಏಕೆಂದರೆ ಭಾರತದಲ್ಲಿಯೇ ಪೆಟ್ರೋಲ್‌ ಬೆಲೆ ಗರಿಷ್ಠ ಪ್ರಮಾಣದಲ್ಲಿರುವುದು.

ಈ ಹಿಂದೆಯೆಲ್ಲ ಭಾರತದಲ್ಲಿ ಪೆಟ್ರೋಲ್‌ ಬೆಲೆ ಸ್ಥಿರವಾಗಿರುತ್ತಿತ್ತು. ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿತ್ಯಂತರಗಳೂ ನಮ್ಮ ಪೆಟ್ರೋಲ್‌ ಬೆಲೆ ಮೇಲೆ ಪರಿಣಾಮ ಬೀರದೆ ಸುರಕ್ಷಿತವಾಗಿದ್ದವು.

ಆದರೆ 2010ರಲ್ಲಿ ದೇಶೀಯ ಸ್ತರದಲ್ಲಿನ ಪೆಟ್ರೋಲ್‌ ಬೆಲೆಗಳು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಸ್ಥಿತ್ಯಂತರಗೊಳ್ಳಲಿ ಎಂದು ಕೇಂದ್ರ ಸರಕಾರ ಆದೇಶಿದ್ದರ ಫಲವಾಗಿ ದಿನಬೆಳಗಾಗುವುದರೊಳಗಾಗಿ ಪೆಟ್ರೋಲ್‌ ಬೆಲೆ ಜನರ ಮೇಲೆ ಏರಿಳಿಯುತ್ತಿದೆ.

ಪೆಟ್ರೋಲ್‌ ಬೆಲೆ ಸಾಮಾನ್ಯವಾಗಿ ಏರಿಕೆ ಪ್ರವೃತ್ತಿಯಲ್ಲಿದೆಯಾದರೂ ಒಂದಷ್ಟು ಅಲ್ಪ ಪ್ರಮಾಣದಲ್ಲಿ ಇಳಿಕೆಯೂ ಆಗಿತ್ತು.

ಕಳೆದ 12 ತಿಂಗಳಲ್ಲಿ ಪೆಟ್ರೋಲ್‌ ಬೆಲೆ ಮೂರು ಬಾರಿ ಏರಿಕೆ/ಇಳಿಕೆ ಕಂಡಿದೆ. ಸರಿಯಾಗಿ ವರ್ಷದ ಹಿಂದೆ (2012ರ ಏಪ್ರಿಲ್ ನಲ್ಲಿ) ಪೆಟ್ರೋಲ್ ಬೆಲೆ ಧಿಗ್ಗನೆ ಹೊತ್ತಿಕೊಂಡಿತು. ಆಗ ಲೀಟರಿಗೆ 8 ರೂಪಾಯಿ ಏರಿಬಿಟ್ಟಿತ್ತು.

ಪೆಟ್ರೋಲ್ ''ಮೌಲ್ಯ ವರ್ಧನೆ'' :

ಪೆಟ್ರೋಲ್ ''ಮೌಲ್ಯ ವರ್ಧನೆ'' :

ಪೆಟ್ರೋಲ್‌ ಬೆಲೆ ಲೆಕ್ಕಾಚಾರ ಹೇಗಿದೆ ಗೊತ್ತಾ? ಅವುಗಳ ಮೇಲೆ ವಿಧಿಸುವ ತೆರಿಗೆ ಮತ್ತು ಸುಂಕಗಳು ಹೇಗಿರುತ್ತವೆ, ಗೊತ್ತಾ?
ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಜಾಗತಿಕ ಸರಕುಗಳು. ಪ್ರಧಾನವಾಗಿ ಸರಬರಾಜು ಮತ್ತು ಬೇಡಿಕೆಗೆ ಅನುಗುಣವಾಗಿ ಇವುಗಳ ಬೆಲೆ ಏರಿಳಿತವಿರುತ್ತದೆ. Business Standard/ Rediff.com ಇತ್ತೀಚೆಗೆ ಈ ಸಂಬಂಧ ಒಂದು ಸುದೀರ್ಘ ವರದಿ ಬಿತ್ತರಿಸಿದೆ.

ಕಚ್ಚಾ ತೈಲದಿಂದ ಉದ್ಭವವಾಗಿ ಗ್ರಾಹಕನ ವಾಹನದಲ್ಲಿರುವ ಆಯಿಲ್ ಟ್ಯಾಂಕ್ ತುಂಬುವವರೆಗೂ ಹೇಗೆಲ್ಲ ಪೆಟ್ರೋಲ್ ''ಮೌಲ್ಯ ವರ್ಧನೆ'' ಆಗುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ವಿದೇಶಿ ನೆಲದಿಂದ ಕಚ್ಚಾ ತೈಲ ಖರೀದಿ:

ವಿದೇಶಿ ನೆಲದಿಂದ ಕಚ್ಚಾ ತೈಲ ಖರೀದಿ:

ಭಾರತದ ಸರಕಾರಿ ತೈಲ ಮಾರುಕಟ್ಟೆ ಕಂಪನಿಗಳು ಕಚ್ಚಾ ತೈಲವನ್ನು ವಿದೇಶಿ ನೆಲದಲ್ಲಿ ಸರಬರಾಜು ಕಂಪನಿಗಳಿಂದ ಖರೀದಿಸುತ್ತವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಆಧಾರದಲ್ಲಿ ಲೆಕ್ಕ ಹಾಕಿ ಸಂಸ್ಕರಣಾ ಘಟಕದಲ್ಲಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 119.17 ಡಾಲರ್:

ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 119.17 ಡಾಲರ್:

1 ಬ್ಯಾರೆಲ್ ನಲ್ಲಿ 160 ಲೀಟರ್ ಕಚ್ಚಾ ತೈಲ ಇರುತ್ತದೆ. ಡಾಲರ್ ಮೌಲ್ಯ 54.28 ರೂಪಾಯಿ. 54.28 X 119.17 ಇದನ್ನು 160 ರಿಂದ ಭಾಗಾಕಾರ ಮಾಡಿದಾಗ = 40.42 ರೂಪಾಯಿ ಬರುತ್ತದೆ. ಅಂದರೆ 1 ಲೀಟರ್ ಕಚ್ಚಾ ತೈಲದ ಬೆಲೆ 40.42 ರೂ. ಆಗುತ್ತದೆ.

ಸಂಸ್ಕರಣಾ ಘಟಕದಲ್ಲಿನ ಬೆಲೆ:

ಸಂಸ್ಕರಣಾ ಘಟಕದಲ್ಲಿನ ಬೆಲೆ:

ವಿದೇಶಿ ಸರಬರಾಜುದಾರರಿಂದ ಕಚ್ಚಾ ತೈಲವನ್ನು ಭಾರತದಲ್ಲಿನ ಸಂಸ್ಕರಣಾ ಘಟಕಗಳಿಗೆ ಪೂರೈಸಲಾಗುವುದು. ಭಾರತದಲ್ಲಿ 20ಕ್ಕೂ ಹೆಚ್ಚು ಸಂಸ್ಕರಣಾ ಘಟಕಗಳಿವೆ. ಅದನ್ನು ಡಿಸ್ಟಿಲೇಶನ್ ಟವರ್ ಗಳಿಗೆ ಭರ್ತಿ ಮಾಡಲಾಗುವುದು. ಅಲ್ಲಿಂದ ಮುಂದಕ್ಕೆ diesel, petrol, jet fuel ಮತ್ತು coal tar ಆಗಿ ಪ್ರತ್ಯೇಕಿಸಲಾಗುವುದು.

ಈ ಹಂತದಲ್ಲಿ distilling ಮತ್ತು refining ವೆಚ್ಚದ ಜತೆಗೆ ಕಚ್ಚಾ ತೈಲದ ಮೇಲಿನ ಕಸ್ಟಂ ಸುಂಕ ಮತ್ತು ಸರಬರಾಜು ವೆಚ್ಚವನ್ನು ಸೇರಿಸಲಾಗುವುದು. ಇದರಿಂದ 1 ಲೀಟರ್ ಕಚ್ಚಾ ತೈಲದ ಬೆಲೆ 41.64 ರೂ.ಗೆ ಏರುತ್ತದೆ.

ಗ್ರಾಹಕನತ್ತ ಮುಖ:

ಗ್ರಾಹಕನತ್ತ ಮುಖ:

ಕಚ್ಚಾ ತೈಲದಿಂದ ಬೇರ್ಪಟ್ಟ ಪೆಟ್ರೋಲ್ ಮುಂದಿನ ಹಂತದಲ್ಲಿ ಸರಕಾರಿ ತೈಲ ಕಂಪನಿಗಳ ಶೇಖರಣಾ ಟ್ಯಾಂಕುಗಳಲ್ಲಿ ಭರ್ತಿಯಾಗುತ್ತವೆ. ಸಂಸ್ಕರಣಾ ಘಟಕದಿಂದ ತೈಲ ಮಾರುಕಟ್ಟೆ ಕಂಪನಿಗಳ ಟ್ಯಾಂಕುಗಳಿಗೆ ಸಾಗಿಸಲು ತಗಲುವ ವೆಚ್ಚವನ್ನು ತೈಲ ಕಂಪನಿಗಳ ಲೆಕ್ಕಕ್ಕೆ (OMC) ಹಾಕಲಾಗುತ್ತದೆ.

ಈ ಹಂತದಲ್ಲಿ ಹೆಚ್ಚು'ವರಿ'ಯಾಗಿ ಅಬಕಾರಿ ಸುಂಕ ಮತ್ತು VAT ತೆರಿಗೆಗಳ ಸೇರ್ಪಡೆಯಾಗುತ್ತದೆ. ಇದರಿಂದ 1 ಲೀಟರ್ ಕಚ್ಚಾ ತೈಲದ ಬೆಲೆ 44.80 ರೂ.ಗೆ ಏರುತ್ತದೆ.

ಕೊನೆಯ ಕೊಂಡಿಯಾಗಿ ಪೆಟ್ರೋಲ್ ಬಂಕುಗಳಲ್ಲಿ

ಕೊನೆಯ ಕೊಂಡಿಯಾಗಿ ಪೆಟ್ರೋಲ್ ಬಂಕುಗಳಲ್ಲಿ

ಪೆಟ್ರೋಲ್ ಬಂಕ್ ಡೀಲರುಗಳು ತೈಲ ಕಂಪನಿಗಳ ಲೆಕ್ಕಕ್ಕೆ (OMC) ಪಾವತಿಸಬೇಕಾದ ಬಾಬತ್ತುಗಳು.
ಅಬಕಾರಿ ಸುಂಕ ಲೀಟರಿಗೆ 9.2 ರೂಪಾಯಿ.
ಶಿಕ್ಷಣ ಮೇಲ್ತೆರಿಗೆ ಶೇ. 3ರಷ್ಟು
ಡೀಲರ್ ಕಮಿಷನ್ ಲೀಟರಿಗೆ 1.79 ರೂ
ವ್ಯಾಟ್ ಬಾಬತ್ತು ಲೀಟರಿಗೆ 11.79 ರೂ
(ಒಟ್ಟು ಸುಂಕ ಮತ್ತು ತೆರಿಗೆಗಳ ಪ್ರಮಾಣ ಲೀಟರಿಗೆ 22.49)
ಅಲ್ಲಿಗೆ ಅಂತಿಮವಾಗಿ ಒಂದು ಲೀಟರ್ ಪೆಟ್ರೋಲ್ ದರ (ದೆಹಲಿಯಲ್ಲಿ) 68 ರೂಪಾಯಿಗೆ ಬಂದು ನಿಲ್ಲುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+