ಬಿಜೆಪಿ ನಾಯಕರ ವಿಮಾನ ತುರ್ತು ಭೂ ಸ್ಪರ್ಶ

ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಮೂವರು ನಾಯಕರು ಬೆಂಗಳೂರಿಗೆ ಆಗಮಿಸಲು ಇಂದು ಬೆಳಗ್ಗೆ 10.45ರ ಸುಮಾರಿಗೆ ವಿಶೇಷ ವಿಮಾನವೇರಿದ್ದರು. ಆದರೆ ವಿಮಾನ ಹಾರಾಟ ಪ್ರಾರಂಭಿಸಿದ ಕೆಲವೇ ಕ್ಷಣದಲ್ಲಿ ಭೂಸ್ಪರ್ಶವಾಗಿದೆ. ತಾಂತ್ರಿಕ ದೋಷದಿಂದಾಗಿ ವಿಮಾನ ಭೂಸ್ಪರ್ಶವಾಗಿದೆ ಎಂದು ತಿಳಿದು ಬಂದಿದೆ.
ನಾಯಕರ ವಿಮಾನದ ಭೂ ಸ್ಪರ್ಶದಿಂದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶ ತಡವಾಗಿ ಆರಂಭವಾಗುವ ಸಂಭವವಿದೆ. ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಲು ಅಗತ್ಯ ತಯಾರಿ ನಡೆಸಿದ್ದು, ಸಮಾವೇಶ ಮಧ್ಯಾಹ್ನದ ವೇಳೆಗೆ ಪ್ರಾರಂಭವಾಗುವ ಸಾಧ್ಯತೆ ಇದೆ.
ಸಮಾವೇಶಕ್ಕೆ ವಿಘ್ನ : ಬೀದರ್ ಜಿಲ್ಲೆಯ ಚೌಳಿ ಮಠದಲ್ಲಿ 3 ಕಿರಿಯ ಸ್ವಾಮಿಜೀಗಳು ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಗ್ನಿ ಪ್ರವೇಶ ಮಾಡಿ ಆತ್ಮಾಹುತಿ ಮಾಡಿಕೊಂಡಿದ್ದರಿಂದ ಬಿಜೆಪಿಯ ಸಮಾವೇಶಕ್ಕೆ ಮೊದಲ ಹಿನ್ನಡೆ ಉಂಟಾಗಿತ್ತು. ಈ ಘೋರ ದುರಂತಕ್ಕೆ ಬಿಜೆಪಿ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಪ್ರಸ್ತುತ ಪಕ್ಷದ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದ ವಿಮಾನದ ಭೂ ಸ್ಪರ್ಶದಿಂದಾಗಿ ಮತ್ತೊಂದು ವಿಘ್ನ ಎದುರಾಗಿದೆ.
ಈ ಘಟನೆಗಳು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮತ್ತು ಬಹಿರಂಗ ಚುನಾವಣಾ ಪ್ರಚಾರದ ಸಮಾವೇಶಕ್ಕೆ ದೊಡ್ಡ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ. ನಾಯಕರು ಪರ್ಯಾಯ ವಿಮಾನ ಬಳಸಿ ಬೆಂಗಳೂರಿಗೆ ಆಗಮಿಸಿದರೂ ಆಗಿರುವ ವಿಘ್ನಗಳನ್ನು ಮರೆಯುವಂತಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications