ದಾವೂದ್ ಇಬ್ರಾಹಿಂ ಹಣ ಬರೋಡಾ ಬ್ಯಾಂಕಿನಲ್ಲೇ ಇದೆ!

dawood-ibrahim-laundering-money-thro-bank-of-baroda
ಮುಂಬೈ, ಏ.6: ಭೂಗತ ಪಾತಕಿ, ದೇಶಭ್ರಷ್ಟ ದಾವೂದ್ ಇಬ್ರಾಹಿಂ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಬಹಮಾಸ್‌ ನ ನಾಸೌನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ ಜಮೆ ಮಾಡಿದ್ದಾನೆ. ಈ ಹಣದ ಮೂಲಕವೇ ಪಾತಕಿ ದಾವೂದ್, ಜಿಹಾದಿಗಳಿಗೆ ನೆರವು ನೀಡುತ್ತಿದ್ದಾನೆ ಎಂಬ ಆಘಾತಕಾರಿ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಿರುವವನೇ ಈ ದೇಶಭ್ರಷ್ಟ ದಾವೂದ್. Bank of Baroda ಶಾಖೆಗೆ ಸಾವಿರಾರು ಡಾಲರ್ ಹಣ ದುಬೈ ಮೂಲದ ಹಣ ವಿನಿಮಯ ಕೇಂದ್ರದಿಂದ ವರ್ಗಾವಣೆ ಆಗುತ್ತದೆ.

ಅಲ್ ಝರೌನಿ ಎಕ್ಸ್‌ಚೇಂಜ್, ದುಬೈ ಎಕ್ಸ್‌ಚೇಂಜ್ ಮತ್ತು ದಿ ಅಲ್ ದಿರ್ಹಾಂ ಎಕ್ಸ್‌ಚೇಂಜ್ ಮೂಲಕ ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆಯಾಗುತ್ತದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿವೆ.

ಅದರಲ್ಲೂ ಅಲ್ ದಿರ್ಹಾಂ ಎಕ್ಸ್‌ಚೇಂಜ್ ದಾವುದ್‌ನ ಹಣ ವರ್ಗಾವಣೆಯ ಮೂಲ ಎಂಬುದರ ಕುರಿತು ಭಾರತದ ಸರ್ಕಾರಕ್ಕೆ ಮೊದಲಿನಿಂದಲೂ ಮಾಹಿತಿ ಇದೆ. ಹಾಗಂತ ಬರೋಡಾ ಬ್ಯಾಂಕ್ ಪಾತಕಿ ದಾವೂದನ ಹಣವನ್ನು ವರ್ಗಾವಣೆ ಮಾಡುವಂತಿಲ್ಲ. ಏಕೆಂದರೆ ಬ್ಯಾಂಕಿನ ಪ್ರಕಾರ ಅದು ಕಾನೂನುಬಾಹಿರ ವ್ಯವಹಾರ ಅಲ್ಲ.

ಆದ್ದರಿಂದ ದಾವೂದನ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆಸೆಯನ್ನು ಕೈಬಿಟ್ಟಿರುವ ಭಾರತ ಸರ್ಕಾರ, ಈಗ ಈ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದರ ಕುರಿತು ತಲೆಕೆಡಿಸಿಕೊಂಡಿದೆ. ದಕ್ಷಿಣ ಏಷ್ಯಾದಲ್ಲಿ ಮಾದಕ ವಸ್ತುಗಳನ್ನು ಸಾಗಿಸುವವರು (3.5 ಶತಕೋಟಿ ಡಾಲರ್ ವಾರ್ಷಿಕ ವಹಿವಾಟು) ಮತ್ತು ಜಿಹಾದಿಗಳಿಗೆ ದಾವುದನ ಈ ಹಣವೇ ಪ್ರಧಾನ ಹಣಕಾಸು ಮೂಲವಾಗಿದೆ.

ಅಲ್ಲದೆ, ಪಾಕಿಸ್ತಾನದಲ್ಲೂ ಹಲವು ರಾಜಕಾರಣಿಗಳಿಗೆ ದಾವೂದನಿಂದ ಈ ಹಣಕಾಸು ನೆರವು ಸಿಗುತ್ತದೆ. ಪಾಕಿಸ್ತಾನದ ಆರ್ಥಿಕ ವ್ಯವಸ್ಥೆಯ ಮೇಲೂ ದಾವುದ್ ನಿಯಂತ್ರಣ ಸಾಧಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+