ಜೋಗದ ಗುಂಡಿಯಲ್ಲಿ ಜಾರಿಬಿದ್ದ ಚಿತ್ರದುರ್ಗ ಕೋತಿರಾಜ

ಚಿತ್ರದುರ್ಗ ಕೋಟೆಕೊತ್ತಲೆಗಳನ್ನು ಬರಿಗೈ, ಬರಿಗಾಲಲ್ಲಿ ಹತ್ತಿಳಿಯುವ ಜ್ಯೋತಿರಾಜ ಅಲಿಯಾಸ್ ಕೋತಿರಾಜ ಇತ್ತೀಚೆಗೆ ಶಿವಮೊಗ್ಗದ ಸುತ್ತಮುತ್ತ ತನ್ನ ಸಾಹಸಗಳನ್ನು ಪ್ರದರ್ಶಿಸುತ್ತಿದ್ದ. ಹಾಗಿರುವಾಗ ಇಂದು ಶನಿವಾರ ಬೆಳಗ್ಗೆ 12 ಗಂಟೆಯಲ್ಲಿ ಜೋಗ್ ಫಾಲ್ಸ್ ನಲ್ಲಿಯೂ ತನ್ನ ತಾಕತ್ತನ್ನು ಪ್ರದರ್ಶಿಸಲು ಮುಂದಾಗಿದ್ದಾನೆ.
ಹಾಗಿರುವಾಗ ಜೋಗ್ ಫಾಲ್ಸ್ ಗುಂಡಿಗೆ ಇಳಿದು ಅಲ್ಲಿಂದ ಮೇಲಕ್ಕೆ ನೀರಿನ ಹಾದಿಯಲ್ಲಿ (ಸದ್ಯಕ್ಕೆ ಜೋಗ ಖಾಲಿಯಾಗಿದೆ) ಹತ್ತಲು ಯತ್ನಿಸಿದ್ದಾನೆ. ಸುಮಾರು 20 ಅಡಿ ಮೇಲಕ್ಕೆ ಹತ್ತಿದ್ದಾನೆ.
ಕೋತಿರಾಜನ ಸಾಹಸವನ್ನು ಕಂಡು ಜನ ಚಪ್ಪಾಳೆ ತಟ್ಟುತ್ತಿರುವಾಗಲೇ ತಪ್ಪು ಹೆಜ್ಜೆ ಹಾಕಿದ್ದಾನೆ ಕೋತಿ. ಸರಿಯಾಗಿ ಕೆಳಗೆ ಉರುಳಿಬಿದ್ದಿದ್ದಾನೆ. ಇದರಿಂದ ಆತನ ಬೆನ್ನುಮೂಳೆಗೆ ಭಾರಿ ಪೆಟ್ಟು ಬಿದ್ದಿದೆ. ತಲೆಗೆ ಸಹ ಪೆಟ್ಟು ಬಿದ್ದಿದೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲಾಗಿದೆ.
ಕೋತಿರಾಜ್, ಹೀಗೆ ಮತ್ತೊಮ್ಮೆ ಪೆಟ್ಟು ಮಾಡಿಕೊಂಡಿರುವುದನ್ನು ಕೇಳಿ ಜನ ಬಾರಿ ಆತಂಕ/ನಿರಾಶೆಗೊಳಗಾಗಿದ್ದಾರೆ. ಇದೇ ವೇಳೆ ಕೋತಿರಾಜ್ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications