ಪ್ರಧಾನಿ, ಮದುವೆ ಎಲ್ಲವೂ ನನಗೆ ಅಸಂಬದ್ಧ

My becoming PM is all smoke: Rahul Gandhi
ನವದೆಹಲಿ, ಏ.4: ತಮ್ಮ ಮದುವೆ ಮತ್ತು ಪ್ರಧಾನಿ ಹುದ್ದೆಗೇರುವ ಕುರಿತು ಎದ್ದಿರುವ ಊಹಾಪೊಹಗಳಿಗೆ ರಾಹುಲ್ ಗಾಂಧಿ ತೆರೆ ಎಳೆದಿದ್ದಾರೆ, ಮದುವೆಯಾಗುವುದು ಮತ್ತು ಪ್ರಧಾನಿ ಹುದ್ದೆಗೇರುವುದು ಎರಡೂ ಅಸಂಬದ್ಧ ಪ್ರಶ್ನೆಗಳಾಗುತ್ತವೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಉದ್ಯಮ ಒಕ್ಕೂಟ(CII) ದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, 'ಮಾಧ್ಯಮ ಮಿತ್ರರೊಬ್ಬರು ನನ್ನ ಬಳಿ ಬಂದು ನೀವು ಮದುವೆಯಾಗುತ್ತಿದ್ದೀರಂತೆ. ಪ್ರಧಾನಿ ಕೂಡ ಆಗುತ್ತಿದ್ದೀರಂತೆ ಎಂದು ಕೇಳಿದರು. ಆದರೆ ನನ್ನ ಪಾಲಿಗೆ ಇಂತಹ ಪ್ರಶ್ನೆಗಳೆಲ್ಲಾ ಅಸಂಬದ್ಧವೆನಿಸಿಕೊಳ್ಳುತ್ತವೆ. ನನ್ನ ಪ್ರಮುಖ ಪ್ರಶ್ನೆ ಎಂದರೆ ನಾವು ಹೇಗೆ ಜನರ ಧ್ವನಿಯಾಗಬಲ್ಲೆವು ಮತ್ತು ಹೇಗೆ ಅವರ ಸಹಾಯಕ್ಕೆ ನಿಲ್ಲಬಲ್ಲೆವು' ಎಂಬುದು ಮಾತ್ರ ಎಂದು ಹೇಳಿದರು.

ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರುವ ಕುರಿತು ಕಾಂಗ್ರೆಸ್ ಪಕ್ಷದ ವಕ್ತಾರ ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಮಾತನಾಡಿದ್ದರು. ಆದರೆ ಈಗ ಸ್ವತಃ ರಾಹುಲ್ ಗಾಂಧಿ ಅವರೇ ತಮ್ಮ ಮದುವೆ ಮತ್ತು ಪಿಎಂ ಹುದ್ದೆ ಕುರಿತು ಸ್ಪಷ್ಟೀಕರಣ ನೀಡಿ ತೆರೆ ಎಳೆದಿದ್ದಾರೆ.

ರಾಹುಲ್ ಗಾಂಧಿ ಭಾಷಣದ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲೂ ಸದ್ದು ಮಾಡಿದೆ. ಆಯ್ದ ಟ್ವೀಟ್ ಗಳು ಇಲ್ಲಿದೆ.

Pawan Khera ‏@Pawankhera: Unlike Chappan's bombastic 'I, me, myself' speeches, RG's was a refreshingly grounded 'India First' speech. Also guts 2 take questions#RGCII

Sagarika Ghose ‏@sagarikaghose: In sum: good ideas, unassuming persona, good strategic persona contrast with Namo, but still awkward in his shoes, too boyish.

Milind Deora ‏@milinddeora: Hope industry realizes that the greatest opportunity comes when humility, inclusiveness & systemic change are chosen over arrogant rhetoric.

Semu Bhatt ‏@semubhatt: Rahul Gandhi is an excellent example for all Indian parents. DO NOT push your children into a profession they don't want to be in.

ಬಿಜೆಪಿ ಗೇಲಿ: ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿಯಂಥ ಕನ್ ಫ್ಯೂಸ್ ನಾಯಕ ಬಂದರೆ ಉದ್ಧಾರ. ಎಲ್ಲಿ ಏನು ಮಾತನಾಡಬೇಕು ಎಂಬ ಅರಿವು ಕೂಡಾ ಆತನಿಗೆ ಇಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭಯ ಯುಪಿಎಗೆ ಕಾಡುತ್ತಿದೆ. ಗೊಂದಲಮಯ ಹೇಳಿಕೆಗಳನ್ನು ನೀಡುತ್ತಾ ಜನರ ಪ್ರಶ್ನೆಗೆ ಉತ್ತರ ನೀಡುವುದರ ಬದಲು ಪ್ರಶ್ನೆಗಳನ್ನು ಹಾಕುವುದನ್ನು ನೋಡಿದರೆ ರಾಹುಲ್ ಗಾಂಧಿ ಬುದ್ಧಿಮಟ್ಟ ಅರ್ಥವಾಗುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+