ಇಂಟರ್ನೆಟ್ ಬಳಕೆದಾರರಿಗೆ ಬೀರ್ ಪಂಚಪ್ರಾಣ

ಭಾರತದಲ್ಲಿ ಇಂಟರ್ನೆಟ್ ಉಪಯೋಗಿಸುತ್ತಾ ಆಲ್ಕೋಹಾಲ್ ತೆಗೆದುಕೊಳ್ಳುವವರ ಪೈಕಿ ಶೇ. 44 ಮಂದಿಗೆ ಬೀರ್ ಅಂದರೆ ಪಂಚಪ್ರಾಣ. ಇನ್ನು ಶೇ. 26 ಮಂದಿಗೆ ವಿಸ್ಕಿ ಇಷ್ಟವಂತೆ- Juxt ಮತ್ತು Qilo ಸಂಸ್ಥೆಯ ಆನ್ ಲೈನ್ ಸಮೀಕ್ಷಾ ವರದಿ ಇದು. ಶೇ. 14ರಷ್ಟು ಮಂದಿಗೆ ವೊಡ್ಕಾನೂ ಇಷ್ಟವೇ. ಶೇ. 9 ಮಂದಿಗೆ ರಮ್ ಬೇಕಂತೆ.
ಸುಮಾರು 6.5 ಲಕ್ಷಕ್ಕೂ ಹೆಚ್ಚು ಮಂದಿ ಇಂಟರ್ನೆಟ್ ಬಳಕೆದಾರರು ಈ ಸಮೀಕ್ಷೆಯಲ್ಲಿ ಉತ್ತರಿಸಿದ್ದಾರೆ. ದೇಶದ ಅಗ್ರರ 12 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು ಎಂದು Juxt ಮತ್ತು Qilo ಸಂಸ್ಥೆ ತಿಳಿಸಿದೆ.
ಆಲ್ಕೋಹಾಲ್ ಸೇವನೆ ವಿದ್ಯಮಾನವನ್ನು ಅಳೆಯಲು ಇಂಟರ್ನೆಟ್ ಮಾಧ್ಯಮ ಅತ್ಯುತ್ತಮ ವೇದಿಕೆಯಾಗಿದೆ. ಇಂಟರ್ನೆಟ್ ಮಂದಿ ಯಾವ ಆಲ್ಕೋಹಾಲ್ ಬ್ರ್ಯಾಂಡ್ ಅನ್ನು ಇಷ್ಟಪಡುತ್ತಾರೆ ಎಂಬುದನ್ನೂ ಇದರಿಂದ ಸುಲಭವಾಗಿ ತಿಳಿಯಬಹುದು ಎಂಬುದು Juxt ಸಂಸ್ಥೆಯ ಸಹ ಸಂಸ್ಥಾಪಕ ಮೃತ್ಯುಂಜಯ ಅವರ ಅನುಭವದ ಮಾತು.
ಭಾರತದಲ್ಲಿ ಇಂಟರ್ನೆಟ್ ಮತ್ತು ಇಂಟರ್ನೆಟ್ ಅಲ್ಲದ ಮಾಧ್ಯಮಗಳ ಮೂಲಕ ಸಮೀಕ್ಷಾ ಸಂಶೋಧನೆ ಕೈಗೊಳ್ಳುವಲ್ಲಿ Juxt ಮತ್ತು Qilo ಮುಂಚೂಣಿ ಸಂಸ್ಥೆಯಾಗಿದೆ.












Click it and Unblock the Notifications