ನಾಲ್ಕು ಶಿಕ್ಷಕಿ ಸೋದರಿಯರ ಮೇಲೆ ಆಸಿಡ್ ದಾಳಿ

ಸಂತ್ರಸ್ತ ನಾಲ್ವರೂ ಸೋದರಿಯರಾಗಿದ್ದು, ವೃತ್ತಿಯಿಂದ ಶಿಕ್ಷಕಿಯರೂ ಆಗಿದ್ದಾರೆ. ಬಾಧಿತ ಶಿಕ್ಷಕಿಯರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೋಟಾರ್ ಬೈಕಿನಲ್ಲಿ ಬಂದ ಪಾಫಿಗಳು ಈ ದುಷ್ಕೃತ್ಯವೆಸಗಿದ್ದಾರೆ.
ನಿನ್ನೆ ಮಧ್ಯಾಹ್ನ ಪರೀಕ್ಷಾ ಉಸ್ತುವಾರಿ ಕಾರ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸೋದರಿಯರ ಮೇಲೆ ಆಸಿಡ್ ಸುರಿಯಲಾಗಿದೆ. ಕಮೆರ್ ಜಹಾನ್ (26), ಆಯೀಶಾ (25), ಇಶಾ (23) ಮತ್ತು ಸನಂ (20) ಬಾಧಿತ ಯುವತಿಯರು. ತೀವ್ರವಾಗಿ ಗಾಯಗೊಂಡ ಮೂವರನ್ನೂ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications