2008ರ ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
ಬೆಂಗಳೂರು, ಏ 2: ಬರುವ ತಿಂಗಳು ಆರಂಭವಾಗಲಿರುವ ವಿಧಾನಸಭಾ ಚುನಾವಣೆಗೆ ಮುನ್ನ 2008ರ ಅಸೆಂಬ್ಲಿ ಚುನಾವಣೆಯ ಕುತೂಹಲಕಾರಿ ಅಂಶಗಳ ಮೇಲೆ ಒಂದು ಹಿನ್ನೋಟ.
ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಡಿಯಲ್ಲಿ ನೊಂದಾಯಿಸಲ್ಪಟ್ಟ ಐದು ಪಕ್ಷಗಳು ಕಣದಲ್ಲಿದ್ದವು. ಅವು ಯಾವುದೆಂದರೆ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಸಿಪಿಐ, ಸಿಪಿಐ(ಎಂ). ಪ್ರಾದೇಶಿಕ ಪಕ್ಷಗಳಡಿ ನೊಂದಾಯಿತವಾದ ಜೆಡಿಎಸ್ ಕಣದಲ್ಲಿತ್ತು.
ಇದಲ್ಲದೇ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳಡಿ ನೊಂದಾಯಿತವಾದ ಏಳು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಎಡಿಎಂಕೆ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಸಿಪಿಐಎಂಎಲ್ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕಿಸ್ಟ್ ಲೆನಿಸ್ಟ್), ಜನತಾದಳ (ಯುನೈಟೆಡ್), ಎಲ್ಜೆಪಿ (ಲೋಕಜನಶಕ್ತಿ), ಶಿವಸೇನೆ ಮತ್ತು ಸಮಾಜವಾದಿ ಪಾರ್ಟಿ.
ಇಷ್ಟಕ್ಕೂ ಮುಗಿಯದೇ ನೋಂದಾಯಿಸಲ್ಪಡದ 18 ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಪ್ರಮುಖವಾಗಿ ಸರ್ವೋದಯ ಪಾರ್ಟಿ, ಟಿಪ್ಪು ಸುಲ್ತಾನ್ ರಿಪಬ್ಲಿಕ್ ಪಾರ್ಟಿ, ಕನ್ನಡ ಪಕ್ಷ, ಭಾರತೀಯ ಪ್ರಜಾ ಪಕ್ಷ, ಅಖಿಲ ಭಾರತ ಹಿಂದೂ ಮಹಾಸಭಾ ಇತ್ಯಾದಿ)
ಸ್ಲೈಡಿನಲ್ಲಿ ಮುಂದುವರಿಯುತ್ತದೆ.

2008 ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
ಹೋದ ಚುನಾವಣೆಯಲ್ಲಿ ಒಟ್ಟು 2242 ಅಭ್ಯರ್ಥಿಗಳು ಕಣದಲ್ಲಿದ್ದರು. ನೇರ ಹಣಾಹಣಿ ಅಂದರೆ ಬರೀ ಇಬ್ಬರೇ ಅಭ್ಯಥಿಗಳು ಕಣದಲ್ಲಿದ್ದ ಕ್ಷೇತ್ರ ಒಂದೇ ಒಂದು. ಹದಿನೈದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದ ಕ್ಷೇತ್ರಗಳು 16.

2008 ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
ರಾಜ್ಯದ ಒಟ್ಟು ಜನಸಂಖ್ಯೆಯ 4,03,63,725 ರಲ್ಲಿ ಪುರುಷರು 2,05,51,086 ಮತ್ತು ಮಹಿಳೆಯರು 1,98,12,639. ಇದರಲ್ಲಿ ಶೇ. 66.20% ಪುರುಷರು ಮತ್ತು ಶೇ.63.10% ಮಹಿಳೆಯರು ಮತದಾನದಲ್ಲಿ ಭಾಗವಹಿಸಿದ್ದರು.

2008 ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
ಕಳೆದ ಬಾರಿಯ ಚುನಾವಣೆಯಲ್ಲಿ ಕಣದಲ್ಲಿದ್ದ 107 ಮಹಿಳೆಯರ ಪೈಕಿ ಗೆದ್ದದ್ದು ಬರೀ ಮೂವರು.1605 ಪುರುಷರು ಮತ್ತು 89 ಮಹಿಳೆಯರು ಕಳೆದ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.

2008 ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
ಮತದಾನದಲ್ಲಿ ಒಟ್ಟಾರೆ ಬಿಜೆಪಿಗೆ ಶೇ.34, ಕಾಂಗ್ರೆಸಿಗೆ ಶೇ. 35, ಜೆಡಿಎಸ್ಸಿಗೆ ಶೇ.19 ಮತ್ತು ಸಿಪಿಎಂಗೆ ಶೇ. 6 ಮತಗಳು ಲಭ್ಯವಾಗಿದ್ದವು.

2008 ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
944 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು ಅದರಲ್ಲಿ ಗೆದ್ದವರು 6 ಶಾಸಕರು. ಕಣದಲ್ಲಿದ್ದ 107 ಮಹಿಳೆಯರ ಪೈಕಿ 94 ಮಹಿಳೆಯರು ನಾಲ್ಕಂಕಿ ಮತ ಪಡೆಯಲು ವಿಫಲರಾಗಿದ್ದಾರೆ.

2008 ಚುನಾವಣೆಯ ಸ್ವಾರಸ್ಯಕಾರಿ ಅಂಶಗಳು
ರಾಯಬಾಗ್ ಮೀಸಲು ಮತ್ತು ಜೇವರ್ಗಿ ಕ್ಷೇತ್ರದಲ್ಲಿ ಗರಿಷ್ಠ 32 ಮಂದಿ ನಾಮಪತ್ರ ಸಲ್ಲಿಸಿದ್ದರು. ಕಾರ್ಕಳ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು. ಬಳ್ಳಾರಿ ನಗರ ಕ್ಷೇತದಲ್ಲಿ 31 ಮಂದಿ ಕಣದಲ್ಲಿ ಉಳಿದಿದ್ದರು.












Click it and Unblock the Notifications