ಉದ್ಯೋಗ ಸೃಷ್ಟಿ ಅವಕಾಶಗಳು ಶೇ.14ರಷ್ಟು ಕುಸಿತ

'ಭಾರತದ ಅರ್ಥ ವ್ಯವಸ್ಥೆ ಮಂದಗತಿಯಲ್ಲಿ ಸಾಗುತ್ತಿರುವುದು ಮತ್ತು ಸರಕಾರಿ ನೀತಿಗಳು ಅತಂತ್ರವಾಗಿರುವುದರಿಂದ ಹೊಸ ಹೂಡಿಕೆಗಳು ಕಡಿಮೆಯಾಗುತ್ತಿವೆ. ಇದು ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ಬಾಧಕವಾಗಿದೆ' ಎಂದು ASSOCHAM ಅಧ್ಯಯನ ತಿಳಿಸಿದೆ.
Job Trends Across India in 2012-13 ಮುಖ್ಯಾಂಶಗಳು: 2012-13ನೇ ಆರ್ಥಿಕ ಸಾಲಿನಲ್ಲಿ 5.38 ಲಕ್ಷ ಮಂದಿ ಉದ್ಯೋಗಸ್ಥರಾಗಿದ್ದರು. ಮೊದಲಾರ್ಧದಲ್ಲಿ 2.65 ಲಕ್ಷ ಮಂದಿ ಮತ್ತು ದ್ವಿತೀಯಾರ್ಧದಲ್ಲಿ ತುಸು ಹೆಚ್ಚು ಅಂದರೆ 2.73 ಲಕ್ಷ ಮಂದಿಗೆ ಉದ್ಯೋಗಗಳು ದಕ್ಕಿದ್ದವು.
56 ನಗರಗಳಲ್ಲಿ 32 ಕ್ಷೇತ್ರಗಳಲ್ಲಿ 4,000 ಕಂಪನಿಗಳು timesjobs.com, naukari.com, monster.com, shine.com ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಉದ್ಯೋಗ ಜಾಹೀರಾತುಗಳ ಆಧಾರದ ಮೇಲೆ ಈ ಅಂಶಗಳು ಬೆಳಕಿಗೆ ಬಂದಿವೆ.
ಉದ್ಯೋಗ ಸೃಷ್ಟಿ ಬೆಂಗಳೂರಿಗೆ ದ್ವಿತೀಯ ಸ್ಥಾನ:
ರಾಜಧಾನಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಉದ್ಯೋಗ ಸೃಷ್ಟಿ ಅಗ್ರ ಸ್ಥಾನದಲ್ಲಿತ್ತು. ನಂತದ ಸ್ಥಾನ ಬೆಂಗಳೂರಿಗೆ ಸಂದಿದೆ. ಮೊದಲ ಸ್ಥಾನದಲ್ಲಿ 66,000 ಉದ್ಯೋಗಗಳು ಸೃಷ್ಟಿಯಾಗಿದ್ದರೆ ಬೆಂಗಳೂರು ಭಾಗದಲ್ಲಿ 66,000 ಉದ್ಯೋಗಗಳು ಸೃಷ್ಟಿಯಾಗಿದ್ದವು. ಮುಂಬೈ (35,500 ಉದ್ಯೋಗಗಳು), ಚೆನ್ನೈ (21,000 ಉದ್ಯೋಗಗಳು) ಮತ್ತು ಐದನೆಯ ಸ್ಥಾನ (20,930 ಉದ್ಯೋಗಗಳು) ಹೈದರಾಬಾದಿಗೆ ಸಂದಿದೆ.
ಕ್ಷೇತ್ರಾವಾರು ವಿಂಗಡಣೆ ಮಾಡಿದಾಗ 2012-13ನೇ ದ್ವಿತೀಯಾರ್ಧದಲ್ಲಿ (ಅಕ್ಟೋಬರ್- ಮಾರ್ಚ್) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ (IT) ಅತಿ ಹೆಚ್ಚು ಅಂದರೆ 1.2 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು.
ಸಮೀಕ್ಷೆಯ ಸಂಪೂರ್ಣ ಪಾಠಕ್ಕೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications