ಏ. 5 ರ ತನಕ ಸೆಟ್ ಟಾಪ್ ಬಾಕ್ಸ್ ರಗಳೆ ಇಲ್ಲ

ಬೆಂಗಳೂರು,ಏ.1: ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಗಡುವನ್ನು ಏಪ್ರಿಲ್ 5ರವರೆಗೆ ಮತ್ತೊಮ್ಮೆ ವಿಸ್ತರಿಸಿ ಸೋಮವಾರ ಹೈಕೋರ್ಟ್ ಆದೇಶಿಸಿದೆ. ಅನಲಾಗ್ ಕೇಭಲ್ ಟಿವಿ ವ್ಯವಸ್ಥೆಯಿಂದ ಡಿಜಿಟಲ್ ಕೇಬಲ್ ವ್ಯವಸ್ಥೆಗೆ ಬದಲಾಯಿಸಲು ಇದ್ದ ಗಡವಿಗೆ ಹೈಕೋರ್ಟ್ ಗುರುವಾರ (ಮಾ.28) ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಬೆಂಗಳೂರು ಹಾಗೂ ಮೈಸೂರು ಸೇರಿ ಸುಮಾರು 38 ನಗರಗಳಲ್ಲಿ ಮಾ.31ರೊಳಗೆ ಅನಲಾಗ್ ಕೇಬಲ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ಕೋರಿ ಕೇಬಲ್ ಅಸೋಸಿಯೇಷನ್ ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ, ಏಪ್ರಿಲ್ 5ರವರೆಗೆ ಕೇಬಲ್ ಪ್ರಸಾರ ಸ್ಥಗಿತಕ್ಕೆ ತಡೆ ನೀಡಿದೆ.

ಕೇಂದ್ರ ಸರ್ಕಾರದ ಆದೇಶದಂತೆ ತಮ್ಮ ಬಳಿ ಬೇಡಿಕೆಗೆ ತಕ್ಕಂತೆ ಸೆಟ್‌ಟಾಪ್ ಬಾಕ್ಸ್‌ಗಳು ಲಭ್ಯವಿಲ್ಲದಿರುವುದರಿಂದ ಏ.1ರಿಂದ ಸಂಪರ್ಕ ಕಡಿತಗೊಳಿಸಬೇಕು ಎಂಬ ಕೇಂದ್ರದ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

HC order on set top box

ಈ ಬಗ್ಗೆ ಉತ್ತರಿಸಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.
ಸೆಟ್ ಟಾಪ್ ಬಾಕ್ಸ್‌ನ್ನು ಸೆಟ್ ಮಾಡಿಕೊಳ್ಳಲು ಆದೇಶಿಸಿದ್ದ ಸರ್ಕಾರ, ಸೆಟ್ ಟಾಪ್ ಬಾಕ್ಸ್ ಪಡೆಯುವ ಬಗ್ಗೆ ಇರುವ ಹಲವು ಗೊಂದಲಗಳಿಗೆ ಉತ್ತರ ನೀಡುವ ಮುನ್ನವೇ ಅಂತಿಮ ಗಡುವು ನಿರ್ಧರಿಸಿಬಿಟ್ಟಿತ್ತು.

ಕೊಟ್ಟಿರುವ ಗಡುವಿನೊಳಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಆಗದೆ ಕೇಬಲ್ ಸಂಸ್ಥೆಗಳು ಒದ್ದಾಡುತ್ತಿವೆ, ಗ್ರಾಹಕರು ಏನ್ರಿ ಹೀಗೆ ಮಾಡಿದ್ರೆ ಬಿಗ್ ಬಾಸ್, ಸಾಯಿಬಾಬಾ ಎಲ್ಲಾ ಹೇಗೆ ನೋಡೋದು ಎಂದು ಕೇಳಿದ್ರೆ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸುತ್ತಿದ್ದಾರೆ. ಶೇ 50 ರಷ್ಟು ಮಾತ್ರ ಅಳವಡಿಕೆ ಸಾಧ್ಯವಾಗಿದೆ. ಮಿಕ್ಕ ಗ್ರಾಹಕರ ಮನೆಗೆ ಸೆಟ್ ಟಾಪ್ ಬಾಕ್ಸ್ ಸೇರ್ಪಡೆಗೆ ಇನ್ನೂ ಕಾಲಾವಕಾಶ ಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ನಿಮ್ಮ ಕೇಬಲ್ ಆಪರೇಟರನ್ನು ಸಂಪರ್ಕಿಸಿ ಇಲ್ಲದಿದ್ದಲ್ಲಿ ಟಿವಿ ವೀಕ್ಷಣೆ ಮಾಡಲಾಗುವುದಿಲ್ಲ ಎಂಬ ಜಾಹೀರಾತು ಪದೇ ಪದೇ ಎಲ್ಲಾ ಚಾನೆಲ್‌ಗಳಲ್ಲೂ ಬರುತ್ತಿದೆ. ಆದರೆ, ಇನ್ನೂ ಸೆಟ್ ಟಾಪ್ ಬಾಕ್ಸ್ ರಗಳೆ ಮುಗಿದಿಲ್ಲ. ಸುಮಾರು 14 ರಾಜ್ಯಗಳ 38 ನಗರಗಳಲ್ಲಿ ಪ್ರೇಕ್ಷಕರು ಆತಂಕದಲ್ಲಿದ್ದರು. ಬೆಂಗಳೂರು, ಮೈಸೂರು, ಅಹಮದಾಬಾದ್ ಸೇರಿದಂತೆ 38 ನಗರಗಳ ಪೈಕಿ ಅನೇಕ ನಗರಗಳಲ್ಲಿ ಗಡುವು ವಿಸ್ತರಣೆಗೊಂಡಿದೆ.

ಬೆಲೆ ಹೆಚ್ಚಳ: ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಬಾಕ್ಸ್‌ಗೆ ಹಣ ಪಡೆಯಲಾಗುತ್ತಿದೆ. ಕೆಲವು ಆಪರೇಟರ್‍ಸ್ 1200 ರೂ. ಎಂದು ಹೇಳಿ 700 ರೂ. ಅಡ್ವಾನ್ಸ್ ಪಡೆಯುತ್ತಿದ್ದಾರೆ. ಆದರೆ ಬಾಕ್ಸ್ ಕೊಡಲು ಇನ್ನು 15-20 ದಿನ ಬೇಕಾಗುತ್ತದೆ ಎಂದು ಹೇಳುತ್ತಾರೆ. ಇನ್ನು ನಾಲ್ಕು ದಿನ ಕಳೆದರೆ ಟಿವಿ ಬರಲ್ಲ. ನಾವೇನು ಮಾಡಬೇಕು ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವೆಡೆ 1500 ರೂ. ಪಡೆಯಲಾಗುತ್ತಿದ್ದರೆ, ಏಪ್ರಿಲ್‌ನಿಂದ 2,200 ನೀಡಬೇಕಾಗುತ್ತದೆ. ಕೇಂದ್ರ ಬಜೆಟ್ 2013ನಲ್ಲಿ ಘೋಷಿಸಿದಂತೆ ಸೆಟ್ ಟಾಪ್ ಬಾಕ್ಸ್ ಬೆಲೆ ಏರಿಕೆಯಾಗಲಿದೆ. ಒಟ್ಟಾರೆ ವೀಕ್ಷಕರು ನಿಜಕ್ಕೂ ತೀವ್ರ ಗೊಂದಲಗಳಿಗೆ ಈಡಾಗಿದ್ದಾರೆ. ಕೆಲ ವೀಕ್ಷಕರಂತೂ ಸೆಟ್‌ಟಾಪ್ ಬಾಕ್ಸ್ ಸಹವಾಸವೂ ಬೇಡ. ಕೇಬಲ್ ಕೂಡಾ ಬೇಡ ಎಂದು ಡಿಟಿಎಚ್ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+