ಎಚ್ 1ಬಿ ವೀಸಾ ಲಾಟರಿ ಮೂಲಕ ಆಯ್ಕೆ

ಎಚ್-1ಬಿ ವೀಸಾಗಳಿಗಾಗಿ ಬರುವ ಸಾವಿರಾರು ಅರ್ಜಿಗಳನ್ನು ಕಂಪ್ಯೂಟರೀಕೃತ ಲಾಟರಿ ಡ್ರಾದ ಮೂಲಕ ನಿರ್ಧರಿಸಲಾಗುವುದು. ಈ ರೀತಿ ವಿತರಿಸುವುದು 2008ರ ಬಳಿಕ ಮೊದಲ ಬಾರಿಯಾಗಿದೆ.
ಅರ್ಜಿ ಸ್ವೀಕಾರ ಆರಂಭಗೊಂಡ ಮೊದಲ ಐದು ದಿನಗಳಲ್ಲೇ ವಿತರಣೆಗಾಗಿ ಇರುವ ವೀಸಾದಷ್ಟು ಅರ್ಜಿಗಳು ಬರಬಹುದು ಎಂದು ಅಮೆರಿಕದ ಸಿಟಿಝನ್‌ಶಿಪ್ ಅಂಡ್ ಇಮಿಗ್ರೇಶನ್ ಸರ್ವಿಸಸ್ ((USCIS) ಊಹಿಸಿದೆ. 2013 ಅಕ್ಟೋಬರ್ 1ರಂದು ಆರಂಭಗೊಳ್ಳುವ 2014ರ ಹಣಕಾಸು ವರ್ಷಕ್ಕಾಗಿ ಗರಿಷ್ಠ 65,000 ಎಚ್-1ಬಿ ವೀಸಾಗಳನ್ನು ವಿತರಿಸಲು ಯುಎಸ್‌ಸಿಐಎಸ್‌ಗೆ ಕಾಂಗ್ರೆಸ್ ಅನುಮೋದನೆ ನೀಡಿದೆ.
ಇದಕ್ಕೆ ಹೊರತಾಗಿ, ಅಮೆರಿಕದ ಶೈಕ್ಷಣಿಕ ಸಂಸ್ಥೆಗಳಿಂದ ಸ್ನಾತಕೋತ್ತರ ಅಥವಾ ಅದಕ್ಕೂ ಹೆಚ್ಚಿನ ಪದವಿಗಳನ್ನು ಪಡೆದಿರುವವರಿಗೆ ಇನ್ನೂ 20,000 ಎಚ್-1ಬಿ ವೀಸಾಗಳನ್ನು ಯುಎಸ್‌ಸಿಐಎಸ್ ನೀಡಬಹುದಾಗಿದೆ. ಏಪ್ರಿಲ್ 2008ರಲ್ಲಿ ಲಾಟರಿ ವ್ಯವಸ್ಥೆ ಬಳಸಲಾಗಿತ್ತು. ಮೊದಲ ದಿನದಲ್ಲೇ ಎಲ್ಲಾ ಅರ್ಜಿಗಳ ವಿತರಣೆಯಾಗಿತ್ತು.
ವೀಸಾ ಆಸಕ್ತರು ಇನ್ನು ಮುಂದೆ ಕಾಲ್ ಸೆಂಟರ್ ಗೆ ಕರೆ ಮಾಡಿ ಕಚೇರಿಗೆ ಹಾಜರಾಗಲು ದಿನ ನಿಗದಿ ಪಡಿಸಿಕೊಳ್ಳಬಹುದು. ಹೈದರಾಬಾದ್ ನಗರದ ಜೊತೆ ನೋಯ್ಡಾ ನಗರದಲ್ಲೂ ಕಾಲ್ ಸೆಂಟರ್ ತೆರೆಯಲಾಗಿದೆ. ಹಿಂದಿ, ಇಂಗ್ಲಿಷ್, ಪಂಜಾಬಿ, ಗುಜರಾತಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ವ್ಯವಹರಿಸಬಹುದು.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ ಎಂಟರವರೆಗೆ ಮತ್ತು ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾಲ್ ಸೆಂಟರ್ ತೆರೆದಿರುತ್ತದೆ ಎಂದು ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ
ಕಾಲ್ ಸೆಂಟರ್ ನಂಬರ್ (ಭಾರತ) : 91 -120 -660 -2222 ಮತ್ತು 91 -22 -6720 -9400
ಭಾರತದಲ್ಲಿರುವ ಅಮೇರಿಕಾ ದೂತಾವಾಸ ಕಚೇರಿಯ ದೂರವಾಣಿ ಸಂಖ್ಯೆ:
ನವದೆಹಲಿ: 011-91-11-2347 2000
ಕೋಲ್ಕತ್ತಾ: 011-91-33-3984 2400
ಚೆನ್ನೈ: 011-91-44-2857 4000
ಮುಂಬೈ: 011-91-22-2672 4000
ಹೈದರಾಬಾದ್: 011-91-40-4033 8300
ಸೆಪ್ಟೆಂಬರ್ 26, 2012ರಿಂದ ಜಾರಿಗೆ ಬರುವಂತೆ ಅಮೆರಿಕ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಇಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಭಾರತೀಯರಿಗಾಗಿ ಇನ್ನಷ್ಟು ಸರಳಗೊಳಿಸಿದೆ. ಶುಲ್ಕ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ನೂತನ ವೀಸಾ ಪರಿಷ್ಕರಣೆ ವ್ಯವಸ್ಥೆಯನ್ನೂ ಅಮೆರಿಕ ಕಚೇರಿ ಪ್ರಕಟಿಸಿತ್ತು.
ನೂತನ ವ್ಯವಸ್ಥೆಯಡಿ, ಅರ್ಜಿದಾರರು ವೀಸಾ ಶುಲ್ಕವನ್ನು ಪಾವತಿಸಲು ಹಲವಾರು ವಿಧದ ಆಯ್ಕೆಗಳಿರುತ್ತವೆ. ಎಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆ, ಮೊಬೈಲ್ ಫೋನ್ ಮೂಲಕವೂ ಅವರು ಶುಲ್ಕವನ್ನು ಪಾವತಿಸಬಹುದಾಗಿದೆ. 1800 ರೂ.ಗಿಂತ ಹೆಚ್ಚಿನ ಹಣವನ್ನು ಅವರು ಆಕ್ಸಿಸ್ ಬ್ಯಾಂಕ್ ಹಾಗೂ ಸಿಟಿ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.












Click it and Unblock the Notifications