ಫೇಸ್ ಬುಕ್ ಹೊಸ ಆವಿಷ್ಕಾರವೇನು?

ಫೇಸ್ ಬುಕ್ ಏ.4ರಂದು ಪತ್ರಿಕಾಗೋಷ್ಠಿ ಕರೆದಿದ್ದು ಅಂದು ಸ್ಮಾರ್ಟ್‌ಫೋನ್ ತಯಾರಿಕೆ ಅಥವ ಮೊಬೈಲ್ ತಂತ್ರಜ್ಞಾನ ಬಿಡುಗಡೆ ಮಾಡುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ನೂತನ ಮೊಬೈಲ್ ತಂತ್ರಜ್ಞಾನದ ಮೂಲಕ ಮತ್ತಷ್ಟು ಗ್ರಾಹಕ ಸ್ನೇಹಿ ಆಗಲು ಫೇಸ್ ಬುಕ್ ಆಲೋಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫೇಸ್‌ಬುಕ್ ಆಧುನಿಕ ರೂಪದ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ಮಾಡಬಹುದು. ಅದರಲ್ಲಿ ಫೇಸ್‌ಬುಕ್‌ನ ಉಪಯೋಗಿಸಲು ಹೆಚ್ಚು ಸಹಕಾರಿ ಆಗುವ ತಂತ್ರಜ್ಞಾನ ಬಿಡುಗಡೆ ಮಾಡಬಹುದು ಎಂಬ ಸುದ್ದಿಗಳು ಹರಡಿವೆ.
ತೈವಾನ್‌ನ ಎಚ್‌ಟಿಸಿ ಕಂಪನಿ ಸ್ಮಾರ್ಟ್‌ಫೋನ್ ತಯಾರಿಸಲಿದೆ ಇದಕ್ಕೆ ಹೊಂದಿಕೆಯಾಗುವ ನೂತನ ತಂತ್ರಜ್ಞಾನವನ್ನು ಫೇಸ್ ಬುಕ್ ಪರಿಚಯಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಏಪ್ರಿಲ್ 4ರ ಪತ್ರಿಕಾಗೋಷ್ಠಿಯಲ್ಲಿ ಕಂಪನಿಯ ಹೊಸ ಆವಿಷ್ಕಾರದ ಬಗ್ಗೆ ತಿಳಿಯಲಿದೆ.
ಮೊಬೈಲ್ ಮೇಲೆ ಕಣ್ಣು : ಫೇಸ್‌ಬುಕ್ ಮೊಬೈಲ್ ಗ್ರಾಹಕರ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದು, ಆದ್ದರಿಂದ ನೂನತ ತಂತ್ರಜ್ಞಾನ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ಗಳೇ ಹೆಚ್ಚಿನದಾಗಿ ಬಳಕೆಯಾಗುತ್ತಿರುವುದರಿಂದ ಫೇಸ್‌ಬುಕ್ ಸ್ವಂತ ಸ್ಮಾರ್ಟ್‌ಫೋನ್ ತಯಾರಿಕೆಗೆ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ ವಿಶ್ವದ ನಂ ಒನ್ ಸಾಮಾಜಿಕ ತಾಣ ಫೇಸ್ ಬುಕ್ ನೂತನ ಸಾಹಸವೊಂದಕ್ಕೆ ಕೈ ಹಾಕಿದೆ ಅದೇನು ಎಂದು ಏ.4ರಂದು ಬಹಿರಂಗವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications