ಹೊತ್ತಿಲ್ಲದ ಹೊತ್ತಿನಲ್ಲಿ ಹಣ ಹಂಚುತ್ತಿರುವ ಯೋಗೀಶ್ವರ್
ರಾಮನಗರ, ಮಾ 30: ಚನ್ನಪಟ್ಟಣ ಕ್ಷೇತದಿಂದ ಸ್ಪರ್ಧಿಸುತ್ತಿರುವ ಅನಿತಾ ಕುಮಾರಸ್ವಾಮಿಯವರನ್ನು 'ಹಾರುವ ಹಕ್ಕಿ' ಎಂದು ಸಿ ಪಿ ಯೋಗೀಶ್ವರ್ ಟೀಕಿಸಿದ್ದಾರೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವವರು ಯಾರೆಂದು ರಾಜ್ಯದ ಜನತೆಗೆ ತಿಳಿದಿದೆ.
ಯೋಗೀಶ್ವರ್ ತನ್ನನ್ನು ತಾನು ಆಧುನಿಕ ಭಗೀರಥ ಎಂದು ಕೊಂಡಿದ್ದಾರೆ. ಬೈಕಿನಲ್ಲಿ ಕಾರ್ಯಕರ್ತರನ್ನು ಕೂರಿಸಿಕೊಂಡು ಹೊತ್ತಿಲ್ಲದ ಹೊತ್ತಿನಲ್ಲಿ ಊರೆಲ್ಲಾ ಸುತ್ತುತ್ತಾ ಹಣ ಹಂಚಿಕೊಂಡು ತಿರುಗಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸುವುದರಿಂದ ಯೋಗೀಶ್ವರ್ ಕಂಗಾಲಾಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಿದ್ದು ನಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳಿಂದ. ಇದಕ್ಕೆ ಕಾಂಗ್ರೆಸ್ ನಾಯಕರು ಹೆಮ್ಮೆ ಪಟ್ಟುಕೊಳ್ಳ ಬೇಕಾಗಿಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಯಶಸ್ಸು ಸಾಧಿಸುವ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮಧುಗಿರಿಯಿಂದ ಚನ್ನಪಟ್ಟಣಕ್ಕೆ ಹಾರಿ ಬಂದಿರುವ ಹಕ್ಕಿಯಿಂದಾಗಿ ನನಗಿದ್ದ ಆ ಆತಂಕ ದೂರವಾಗಿದೆ ಎಂದು ಅನಿತಾ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಯೋಗೀಶ್ವರ್
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದು ಹೀಗೆ..

ಕುಮಾರಸ್ವಾಮಿ Vs ಕಾಂಗ್ರೆಸ್
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ ವಿರುದ್ದ ಸಮರ ಸಾರಿ ಸರಕಾರಕ್ಕೆ ಆದ ನಷ್ಟವನ್ನು ಬಡ್ಡಿ ಸಮೇತ ವಸೂಲು ಮಾಡಿ ಖಜಾನೆ ತುಂಬಿಸಿ ಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಇದರಿಂದ ತನ್ನದೇ ಪಕ್ಷದ ಡಿ ಕೆ ಶಿವಕುಮಾರ್ ಸೋಲಿಗೆ ಸಿದ್ದು ಕಾರಣವಾಗಲಿದ್ದಾರೆ.

ಕುಮಾರಸ್ವಾಮಿ Vs ಕಾಂಗ್ರೆಸ್
ಶಿವಕುಮಾರ್ ಅಕ್ರಮ ಗಣಿಗಾರಿಕೆಯ ಪಿತಾಮಹ. ಸಿದ್ದರಾಮಯ್ಯ ಒಂದು ವೇಳೆ ಮುಖ್ಯಮಂತ್ರಿಯಾಗಿ ಈ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡರೆ ಶಿವಕುಮಾರ್ ಕೃಷ್ಣನ ಜನ್ಮಸ್ಥಾನದಲ್ಲಿ ಪರ್ಮನೆಂಟ್ ಆಗಿ ಇರಬೇಕಾಗುತ್ತದೆ.

ಕುಮಾರಸ್ವಾಮಿ Vs ಕಾಂಗ್ರೆಸ್
ಸಿಂಧ್ಯಾ ಮತ್ತು ಕುಮಾರಸ್ವಾಮಿ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಮೊದಲು ಅವರ ಪಕ್ಷದ ತೂತನ್ನು ಸರಿ ಪಡಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸಲಿ. ನಮ್ಮದು ನಾವು ನೋಡಿಕೊಳ್ಳುತ್ತೇವೆ.

ಕುಮಾರಸ್ವಾಮಿ Vs ಕಾಂಗ್ರೆಸ್
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸಿಗೆ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಲಿಲ್ಲ. ಬಿಜೆಪಿಯಂತೆ ಅಲ್ಲೂ ಚುನಾವಣೆಯ ಮುನ್ನವೇ 'ಬಣ ರಾಜಕೀಯ' ಶುರುವಾಗಿದೆ. ಪ್ರಚಾರದ ಭರಾಟೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಜನತೆಯ ಕೋಪಕ್ಕೆ ಗುರಿಯಾಗ ಬೇಡಿ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಬುದ್ದಿಮಾತನ್ನು ಹೇಳಿದ್ದಾರೆ.

ಕುಮಾರಸ್ವಾಮಿ Vs ಕಾಂಗ್ರೆಸ್
ನಮ್ಮ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಟ್ಟಿ ಬಿಡುಗಡೆ ನಂತರ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications