ಎಸ್ಎಂಎಸ್ ವಿಚ್ಛೇದನ ಸಂದೇಶ ಮಾನ್ಯವೇ?

ದುಬೈನ Department of Islamic Affairs and Charitable Activities ಈ ಸಂಬಂಧ ಇಂತಹ ಫತ್ವಾ ಹೊರಡಿಸಿದೆ. ಏನಪಾ ಅಂದರೆ ಮುಸ್ಲಿಂ ಮಹಿಳೆಯೊಬ್ಬರು ಗಂಡನನ್ನು ಬಿಟ್ಟು ತವರು ಸೇರಿಕೊಂಡಿದ್ದರು. ಪತಿ ಮಹಾಶಯ ಸಿಟ್ಟು ಸೆಡವಿನಿಂದ ಸೀದಾ ಆಕೆಯ ತಂದೆಯ ಅರ್ಥಾತ್ ಮಾವನ ಮನೆಗೆ ಹೋದವನೇ ನಾನು ನಿನಗೆ ವಿಚ್ಛೇದನ ಕೊಟ್ಟಿದ್ದೀನಿ ಎಂದು ಪತ್ನಿಗೆ ಹೇಳಿದ.
ಆ ಸಂದರ್ಭದಲ್ಲೇ ಮತ್ತೆ ಪತಿ-ಪತ್ನಿ ಮಧ್ಯೆ ಜಗಳವಾಗಿದೆ. ಆಗಲೂ ಪತಿರಾಯ ಮತ್ತೆ ವಿಚ್ಛೇದನ (ತಲಾಖ್) ಕೊಡ್ತಿದ್ದೀನಿ ಎಂದು ಹೇಳಿದ್ದಾನೆ. ಅಷ್ಟಕ್ಕೇ ತೃಪ್ತನಾಗದೆ ವಾಪಸು ಬರುತ್ತಾ ಮೊಬೈಲಿನಲ್ಲಿ SMS ಸಂದೇಶವನ್ನೂ ಕಳುಹಿಸಿದ್ದಾನೆ. ಅಲ್ಲಿಗೆ ಷರಿಯಾ ಕಾನೂನು ಪ್ರಕಾರ ಮೂರು ಬಾರಿ ತಲಾಖ್ ಹೇಳಿದಂತಾಗಿದೆ.
ಸರಿ ಅದನ್ನೇ ಮುಂದಿಟ್ಟುಕೊಂಡು ನಾನು ಮೂರು ಬಾರಿ ತಲಾಖ್ ಎಂದು ಹೇಳಿರುವೆ. ಹಾಗಾಗಿ ನನಗೆ ವಿಚ್ಛೇದನ (ತಲಾಖ್) ಕೊಡಿಸಿಬಿಡಿ ಎಂದು ಅಲವತ್ತುಕೊಂಡಿದ್ದಾನೆ. ಇದಕ್ಕೆ ಇಸ್ಲಾಂ ಪಂಡಿತರೂ ನಿರುತ್ತರರಾಗಿದ್ದಾರೆ. ಆತನು ಕೇಳುತ್ತಿರುವುದೂ ಸರಿಯಾಗಿಯೇ ಇದೆ.
ಕಾನೂನಿನ ಪ್ರಕಾರ ಕೋಪದ ಘಳಿಗೆಯಲ್ಲಿ ವಿಚ್ಛೇದನ (ತಲಾಖ್) ಅಂಗೀಕಾರ ಅಲ್ಲವಾದರೂ ಮೂರು ಬಾರಿ ತಲಾಖ್ ಅಂದಿರುವುದು ಕಾನೂನುಬದ್ಧವಾಗಿದೆ. ಹಾಗಾಗಿ ದಂಪತಿಯ ವಿಚ್ಛೇದನಕ್ಕೆ ಅಸ್ತು ಅನ್ನುವುದು ಅನಿವಾರ್ಯವಾಗಿದೆ ಎಂದು Department of Islamic Affairs and Charitable Activities ಆದೇಶ ನೀಡಿದೆ.












Click it and Unblock the Notifications