ಮತ್ತೊಂದು ಬ್ಲೂಫಿಲಂ: ಶಾಸಕ ರಘುಪತಿ ಭಟ್ ಭಾಗಿ?

ಶಾಸಕ ರಘುಪತಿ ಭಟ್ ಅವರು ಯುವತಿಯೊಬ್ಬಳ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಜಿಲ್ಲೆಯಾದ್ಯಂತ 15 ದಿನಗಳಿಂದ ಹರಿದಾಡುತ್ತಿದ್ದು, ಇಂದು ಬೆಳಗ್ಗೆ ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಸದರಿ ಬ್ಲೂಫಿಲಂ ಅನ್ನು ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದಾರೆ.
ಆದರೆ ಈ ಸಿಡಿ ವಿಡಿಯೋ ಇಂದು ಬೆಳಗ್ಗೆಯಷ್ಟೇ ತಮ್ಮ ಕೈಗೆ ಲಭ್ಯವಾಗಿದೆ. ಇದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ. ಇದರಲ್ಲಿರುವುದು ಖಂಡಿತಾ ನಾನಲ್ಲ. ಚುನಾವಣೆ ಕಾಲದಲ್ಲಿ ನನ್ನ ತೇಜೋವಧೆ ನಡೆದಿದೆ ಎಂದು ವಿಡಿಯೋದಲ್ಲಿ ತಾವು ಸೆಕ್ಸ್ ನಲ್ಲಿ ಭಾಗಿಯಾಗಿರುವುದನ್ನು ಶಾಸಕ ರಘುಪತಿ ಭಟ್ ಅಲ್ಲಗಳೆದಿದ್ದಾರೆ.
ಶಾಸಕ ರಘುಪತಿಯ ಹಿಂದಿನ 2 ಹಗರಣಗಳು:
1. ಶಾಸಕರಾಗಿ ಆಯ್ಕೆಯಾದ ಹೊಸದರಲ್ಲೇ ಪತ್ನಿ ಪದ್ಮಪ್ರಿಯಾ ಕೊಲೆ ಕೇಸ್ ಹಗರಣ ಸುತ್ತಿಕೊಂಡಿತ್ತು. ಹಾಗೆ ನೋಡಿದರೆ ಕಮಲ ಪಕ್ಷದ ಸರಕಾರಕ್ಕೆ ಮೆತ್ತಿಕೊಂಡ ಮೊದಲ ಕೆಸರು ಇದಾಗಿತ್ತು.
2. ಪಡುಬಿದ್ರೆ ಬಳಿ ಕೆಐಎಡಿಬಿ ಭೂಸ್ವಾಧೀನ ಮಾಡಿದ ಸುಮಾರು 110 ಎಕರೆಯಲ್ಲಿ 44 ಎಕರೆಯಷ್ಟು ಜಮೀನನ್ನು 2002ರಲ್ಲಿ ಉಡುಪಿಯ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಡಿನೋಟಿಫಿಕೇಶನ್ ಮಾಡಿಸಿ, ನಂತರ ಈ ಜಾಗವನ್ನು ರೈತರ ಮುಖಾಂತರ ತನ್ನ ಸ್ನೇಹಿತ ಮುಂಬೈ ಉದ್ಯಮಿಗೆ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪ ಹೊರೆಸಿದೆ.
[ಉಡುಪಿ ಕ್ಷೇತ್ರ ಪರಿಚಯ]












Click it and Unblock the Notifications