In Pics: ಬಣ್ಣದ ಹಬ್ಬ ದೇಶವಾಯ್ತು ವರ್ಣಮಯ
ದೇಶದೆಲ್ಲೆಡೆ ಬಣ್ಣದ ಹಬ್ಬದ ಸಂಭ್ರಮ ಮುಗಿಲು ಮುಟ್ಟುತ್ತಿದೆ. ಈ ಬಾರಿ ಸುರಕ್ಷತೆಯಿಂದ ಹೋಳಿ ಆಚರಿಸಿ, ನೀರು ಉಳಿಸಿ ಎಂಬ ಕೂಗು ಎಲ್ಲೆಡೆ ಎದ್ದಿದೆ. ರಾಸಾಯನಿಕ ಬಣ್ಣಗಳ ಬಳಕೆ ನಿಯಂತ್ರಿಸಿ ನೈಸರ್ಗಿಕ ಬಣ್ಣ ಬಳಸಿ ಇದು ಆರೋಗ್ಯಕರ, ಖರ್ಚು ಕಮ್ಮಿ ಎಂದು ಸಾರಲಾಗುತ್ತಿದೆ.
ಆದರೆ, ಹುಚ್ಚುಕೋಡಿ ಮನಸ್ಸುಗಳಿಗೆ ತಕ್ಷಣಕ್ಕೆ ಕಡಿವಾಣ ಹಾಕುವುದು ಸಾಧ್ಯವಿಲ್ಲ. ಹೋಳಿ ಹಬ್ಬದಂದೇ ನೀರು ಪೋಲಾಗುತ್ತಿದೆ ಎಂಬುದು ಹಲವೆಡೆ ನಗೆಪಾಟಲಾಗಿದೆ. ಜಾತಿ ಮತ ಪಂಥದ ಬೇಧ ಭಾವ ವಿಲ್ಲದೆ ಹೋಳಿ ಆಚರಿಸಲಾಗುತ್ತಿದೆ. ಈ ಬಾರಿ ಹೆಚ್ಚೆಚ್ಚು ವಿದೇಶಿಯರು ಬಣ್ಣದೋಕುಳಿಯಲ್ಲಿ ತೊಡಗಿದ್ದಾರೆ.
ಅಮಿತಾಬ್ ಬಚ್ಚನ್ ಅವರ ನೀರು ಉಳಿಸಿ ಟ್ವೀಟ್ ಜೊತೆಗೆ ಟ್ವೀಟ್ ಲೋಕದಲ್ಲಿ #loveholi #happyholi ಟ್ಯಾಗ್ ಗಳು ಸುತ್ತಾಡುತ್ತಿದೆ. ನೀರಿನ ಮಹತ್ವದ ಬಗ್ಗೆ ಅತಿ ದೊಡ್ಡ ಅಭಿಯಾನ ನಡೆಯುತ್ತಿದೆ. ಮುಂಬೈ ವಿವಿ ವಿದ್ಯಾರ್ಥಿಗಳು ನೀರಿನ ಉಳಿತಾಯಕ್ಕಾಗಿ ಬೀದಿ ನಾಟಕಗಳನ್ನು ಆಡುತ್ತಾ ಜನ ಜಾಗೃತಿ ಮೂಡಿಸುತ್ತಿದ್ದಾರೆ.
* ಚಿತ್ರಸರಣಿ: ಬೃಂದಾವನದಲ್ಲಿ ಕೃಷ್ಣ ಭಕ್ತೆಯರ ಹೋಳಿ
* ಚಿತ್ರಸರಣಿ: ಹೋಳಿ ಆಚರಿಸಿ ನೀರು ಉಳಿಸಿ
ತಮ್ಮ ಪರಿಚಿತರ ಜೊತೆಗೆ ಹೋಳಿ ಆಡುವುದು, ಆದಷ್ಟು ಮುನ್ನಚ್ಚರಿಕೆಯನ್ನು ಪಾಲಿಸುವುದು ಒಂದು ರೀತಿ ಒಳ್ಳೆಯದೆ, ಷೇರು ಪೇಟೆ ಸೇರಿ ಸರ್ಕಾರಿ ರಜೆ, ಶಾಲಾ, ಕಾಲೇಜುಗಳಿಗೆ ಪರೀಕ್ಷೆ ನಡುವೆ ರಜೆ ಇರುವುದರಿಂದ ಹ್ಯಾಪಿ ಹೋಳಿ ಎಂದು ಬಣ್ಣ ಎರಚುವುದರಲ್ಲಿ ತಪ್ಪೇನಿಲ್ಲ.
ಮಹಾರಾಷ್ಟ್ರದಲ್ಲಿ ವಿವಾದಿತ ದೇವ ಮಾನವ ಅಸರಾಮ್ ಬಾಪು ಹೋಳಿ ಆಚರಣೆಯಲ್ಲಿ ಉಂಟಾಗಿರುವ ಗೊಂದಲ ಗಲಾಟೆ ಬಿಟ್ಟರೆ ಉಳಿದಂತೆ ದೇಶದೆಲ್ಲೆಡೆ ಹೋಳಿಗೆ ಭಂಗ ಬಂದಿಲ್ಲ. ಹೋಳಿ ಹಬ್ಬದಂದು ಭಾಂಗ್ ಕುಡಿಯುವುದು ನಿಂತಿಲ್ಲ. ಸಂಭ್ರಮದ ಚಿತ್ರಗಳ ಸರಣಿ ಮುಂದುವರೆಸುತ್ತಾ ಇನ್ನಷ್ಟು ಚಿತ್ರಗಳು ನಿಮಗಾಗಿ...

ಬಣ್ಣದ ಹಬ್ಬ ಸಂಭ್ರಮ ಮುಗಿಲು ಮುಟ್ಟಿದೆ
Foreign tourists take part in Tug-of-War during Holi Festival in Jaipur

ಬಣ್ಣದ ಹಬ್ಬ ಸಂಭ್ರಮ ಮುಗಿಲು ಮುಟ್ಟಿದೆ
Foreign tourists participate in the turban tying competition during the Holi festival at the Rambagh Polo Ground in Jaipur

ಬಣ್ಣದ ಹಬ್ಬ ಸಂಭ್ರಮ ಮುಗಿಲು ಮುಟ್ಟಿದೆ
Border Security Force (BSF) jawans celebrate 'Holi' festival at India-Pakistan border of Suchetgarh near Jammu

ಬಣ್ಣದ ಹಬ್ಬ ಸಂಭ್ರಮ ಮುಗಿಲು ಮುಟ್ಟಿದೆ
People celebrate Holi in Bengaluru

ಬಣ್ಣದ ಹಬ್ಬ ಸಂಭ್ರಮ ಮುಗಿಲು ಮುಟ್ಟಿದೆ
Allahabad: Muslim people apply colours to celebrate holi in Allahabad

ಬಣ್ಣದ ಹಬ್ಬದ ಸಂಭ್ರಮ
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮುಸ್ಲಿಂ ಬಾಂಧವರ ಜೊತೆ ಹೋಳಿ ಸಂಭ್ರಮದಲ್ಲಿ

ಬಣ್ಣದ ಹಬ್ಬದ ಸಂಭ್ರಮ
ಜಮ್ಮು ಕಾಶ್ಮೀರದಲ್ಲಿ ಮಹಿಳೆಯರು ಸಂಭ್ರಮದಿಂದ ಹೋಳಿ ಆಚರಿಸಿದರು

ಬಣ್ಣದ ಹಬ್ಬದ ಸಂಭ್ರಮ
ಮಹಿಳೆಯರ ಸಂಭ್ರಮದ ಹೋಳಿ ಆಚರಣೆ

ಬಣ್ಣದ ಹಬ್ಬದ ಸಂಭ್ರಮ
ಮುಂಬೈ ನಗರದಲ್ಲಿ ಬಣ್ಣದ ಜೊತೆ ಥಕ ಥೈ

ಬಣ್ಣದ ಹಬ್ಬದ ಸಂಭ್ರಮ
ಚಿಣ್ಣರಿಗೆ ಬಣ್ಣದ್ ಹಬ್ಬ ಅಚ್ಚುಮೆಚ್ಚು

ಬಣ್ಣದ ಹಬ್ಬದ ಸಂಭ್ರಮ
ವಿದೇಶಿಯರಿಗೂ ಹೋಳಿ ಬಣ್ಣ ಹುಚ್ಚು ಹೆಚ್ಚುತ್ತಿದೆ

ಬಣ್ಣದ ಹಬ್ಬದ ಸಂಭ್ರಮ
ಮಹಿಳಾ ಕಾನ್ಸ್ ಟೇಬಲ್ ಗಳ ಹೋಳಿ ಸಂಭ್ರಮ

ಬಣ್ಣದ ಹಬ್ಬದ ಸಂಭ್ರಮ
ಹಳದಿ ಬಣ್ಣ ಮಹಿಳೆಯರ ನೆಚ್ಚಿನ ಕಲರ್

ಬಣ್ಣದ ಹಬ್ಬದ ಸಂಭ್ರಮ
ಜನಶಕ್ತಿ ಪಾರ್ಟಿ ನಾಯಕನ ಹೋಳಿ ಆಟ

ಬಣ್ಣದ ಹಬ್ಬದ ಸಂಭ್ರಮ
ಕೆಂಪು ತಿಲಕದೊಂದಿಗೆ ಭಾರತೀಯ ನಾರಿ

ಬಣ್ಣದ ಹಬ್ಬದ ಸಂಭ್ರಮ
ಮಂಗಳಮುಖಿ ಲಕ್ಷ್ಮಿ ತ್ರಿಪಾಠಿ ಹೋಳಿ ನರ್ತನ

ಬಣ್ಣದ ಹಬ್ಬದ ಸಂಭ್ರಮ
ಗಡಿಭಾಗದಲ್ಲಿ ಸೈನಿಕರ ಬಣ್ಣದಾಟ

ಬಣ್ಣದ ಹಬ್ಬದ ಸಂಭ್ರಮ
ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಧೊಪ್ಪನೇ ಬಿದ್ದ ಕ್ಷಣ

ಬಣ್ಣದ ಹಬ್ಬದ ಸಂಭ್ರಮ
ಆ ಎಂಥಾ ಆ ಕ್ಷಣ ಬಣ್ಣದ ಜೊತೆ ನರ್ತನ

ಬಣ್ಣದ ಹಬ್ಬದ ಸಂಭ್ರಮ
ಮಹಿಳಾ ಕಾನ್ಸ್ ಟೇಬಲ್ ಗಳ ಹೋಳಿ ಸಂಭ್ರಮ

ಬಣ್ಣದ ಹಬ್ಬದ ಸಂಭ್ರಮ
ವಿದೇಶಿಯರಿಗೂ ಹೋಳಿ ಬಣ್ಣ ಹುಚ್ಚು ಹೆಚ್ಚುತ್ತಿದೆ

ಬಣ್ಣದ ಹಬ್ಬದ ಸಂಭ್ರಮ
ಹೋಳಿ ಆಚರಣೆ ರಂಗು ಜೈಪುರದಲ್ಲಿ ಹಾಡು ನರ್ತನ

ಬಣ್ಣದ ಹಬ್ಬದ ಸಂಭ್ರಮ
ಬಣ್ಣದ ಮಳೆಯಿಂದ ಬಚಾವ್ ಆಗೋದು ಕಷ್ಟ

ಬಣ್ಣದ ಹಬ್ಬದ ಸಂಭ್ರಮ
ಹಿಂದೂ ಅರ್ಚಕರೊಬ್ಬರು ಬಣ್ಣ ಎರಚುತ್ತಿರುವುದು












Click it and Unblock the Notifications