Get Updates
Get notified of breaking news, exclusive insights, and must-see stories!

ಬೃಂದಾವನದಲ್ಲಿ ಕೃಷ್ಣ ಭಕ್ತೆಯರ ಬಣ್ಣದೋಕುಳಿ

ಮಥುರಾ, ಮಾ.25: ಬಣ್ಣಗಳ ಹಬ್ಬ ಹೋಳಿಗೆ ಭಾನುವಾರದಿಂದಲೇ ಚಾಲನೆ ಸಿಕ್ಕಿದೆ. ನಾಲ್ಕು ದಿನಗಳ ವರ್ಣಮಯ ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ಆವಾಸ ಸ್ಥಾನ ಮಥುರಾ ಜಿಲ್ಲೆಯ ಜನತೆಗೆ ತಮ್ಮ 'ಠಾಕೂರ್' ಪರಮಾತ್ಮನ ಆರಾಧನೆ ಇದು ಪರ್ವಕಾಲ.

ಮಯ್ಯಾಸ್ ಪಂಗಡದ ಆಚರಣೆ ವಿಶೇಷವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ವಿಧವೆಯರು ಬಣ್ಣದ ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಮಾ.27ರ ಬುಧವಾರದಂದು ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಉತ್ತರ ಭಾರತದಲ್ಲಿ ನಾಲ್ಕು ದಿನಗಳ ಹಬ್ಬ ಮಾ.24ರಿಂದ ಆರಂಭವಾಗಿದ್ದು, ಬುಧವಾರದಂದು ಭಕ್ತರ ಸಂಭ್ರಮ ಮುಗಿಲು ಮುಟ್ಟಲಿದೆ. ಈ ಬಾರಿ ವಿಶೇಷತೆ ಕೃಷ್ಣನ ಊರಿನಲ್ಲೇ ಶುರುವಾಗಿದ್ದು, ಸುಮಾರು 6,000 ವಿಧವೆಯರು ಬೃಂದಾವನದಲ್ಲಿ ಸಂಭ್ರಮದಿಂದ ಹೋಳಿ ಪರ್ವವನ್ನು ಬರಮಾಡಿಕೊಂಡಿದ್ದಾರೆ.

ಗಂಡನನ್ನು ಕಳೆದುಕೊಂಡು ಪರಿತ್ಯಕ್ತರಾದ ಈ ಅಬಲೆಯರಿಗೆ ಕೃಷ್ಣ ಪರಮಾತ್ಮನ ಆರಾಧನೆ ಮಾನಸಿಕ ನೆಮ್ಮದಿ, ಶಾಂತಿ ತರುವುದರಲ್ಲಿ ಆಶ್ಚರ್ಯವಿಲ್ಲ. ಮನೆಯಲ್ಲಿ ವಿಧವೆಯರನ್ನು ಇರಿಸಿಕೊಳ್ಳುವುದು ಅಶುಭ ಎಂಬ ಕೆಟ್ಟ ಸಂಪ್ರದಾಯ ಇಂದಿಗೂ ಭಾರತದ ಹಲವೆಡೆ ಜಾರಿಯಲ್ಲಿರುವುದು ದುರಂತ ಸತ್ಯ.

ಎಲ್ಲಾ ಕಟ್ಟುಪಾಡು, ನೀತಿ ನಿಯಮಗಳನ್ನು ಮೀರಿ ಗೊಲ್ಲನ ಕರೆಗೆ ಓಗೊಟ್ಟು ಬಂದಿರುವ ವಿಧವೆಯರಿಗೆ ಬೃಂದಾವನದ ಸುಲಭ ಇಂಟರ್ ನ್ಯಾಷನಲ್ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಬಡವ, ನಿರ್ಗತಿಕ ವಿಧವೆಯ ಪಾಲಿಗೆ ಆಶಾಕಿರಣವಾಗಿರುವ ಸಂಸ್ಥೆ, ಆಹಾರ, ವೈದ್ಯಕೀಯ ನೆರವು ನೀಡುತ್ತಿದೆ. ಸರ್ಕಾರದ ನೆರವು ಸಿಕ್ಕಿರುವುದರಿಂದ ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ.

ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮ ಎಲ್ಲೆಡೆ ಹೋಳಿ ಸಂಭ್ರಮ ಮೊದಲುಗೊಂಡಿದ್ದು, ಬಣ್ಣದ ಹಬ್ಬದ ಸಂಭ್ರಮದ ಚಿತ್ರಗಳನ್ನು ನಿತ್ಯ ನಿಮಗೆ ನೀಡುತ್ತೇವೆ.. ಮೊದಲ ಕಂತು ಇಲ್ಲಿದೆ ನೋಡಿ ಆನಂದಿಸಿ...

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಎಲ್ಲರಂತೆ ಬಾಳಲು ವಿಧವೆಯರಿಗೂ ಹಕ್ಕಿದೆ. ಶ್ರೀಕೃಷ್ಣನ ಆರಾಧನೆಯಲ್ಲಿ ಅವರಿಗೆ ಸಿಗುವ ಸಂತೋಷ ಕಂಡು ನಮಗೂ ಸಂತಸ, ಉತ್ಸಾಹ ಹೆಚ್ಚಿದೆ ಎಂದು ಸುಲಭ ಇಂಟರ್ ನ್ಯಾಷನಲ್ ಸಂಸ್ಥೆ ಸ್ಥಾಪಕ ಸುಲಭ್ ಬಿಂದೇಶ್ವರ್ ಪಾಠಕ್ ಹೇಳಿದ್ದಾರೆ.

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಜೈಪುರ: ಕೃಷ್ಣ ಪರಮಾತ್ಮ ಹಾಗೂ ರಾಧೆ ವೇಷಧಾರಿಗಳು ಹೋಳಿ ಹಬ್ಬದ ಸಂಭ್ರಮದಲ್ಲಿ ನರ್ತಿಸುತ್ತಿರುವುದು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಕೋಲ್ಕತ್ತಾ: ಹೋಳಿ ಹಬ್ಬದ ಅಂಗವಾಗಿ ಬಣ್ಣದೋಕುಳಿ ಆಡಲು ಪಿಚಕಾರಿಗಳಿಗೆ ಭಾರಿ ಬೇಡಿಕೆ, ಪಿಟಿಐ ಚಿತ್ರ : ಅಶೋಕ್

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ವಾರಣಸಿ: ಮಹಾ ನಿರ್ವಾಣಿ ಅಖಾರದಲ್ಲಿ ಸಾಧುಗಳ ಜೊತೆ ಸಾರ್ವಜನಿಕರು ಹೋಳಿ ಸಂಭ್ರಮದಲ್ಲಿ ಮುಳುಗಿದರು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನ ದೇಗುಲದ ಬಳಿ ಲಾಥ್ ಮಾರ್ ಹೋಳಿ ಸಂಭ್ರಮದಲ್ಲಿ ಭಕ್ತ ಸಮೂಹ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಜಮ್ಮುವಿನಲ್ಲಿ ಅಸರಾಮ್ ಬಾಪು ಹೋಳಿ ಆಟವಾಡುತ್ತಿರುವುದು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಲಾಥ್ ಮಾರ್ ಹೋಳಿ ಸಂಭ್ರಮ ಆಚರಣೆಯಲ್ಲಿ ಪೊಲೀಸ್ ಪೇದೆಗೆ ಮಹಿಳೆಯಿಂದ ಪ್ರೀತಿಯ ಥಳಿತ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮಥುರೆ: ಇಲ್ಲಿನ ನಂದಗ್ರಾಮದಲ್ಲಿ ಭಕ್ತ ಸಮೂಹದಿಂದ ರಂಗು ರಂಗಿನ ಭಕ್ತಿ ಗೀತೆ ಗಾನ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮಥುರೆಯಲ್ಲಿ ಮಹಿಳೆಯರಿಂದ ಲಾಥ್ ಮಾರ್ ಹೋಳಿ ಸಾಂಪ್ರದಾಯಿಕ ಆಚರಣೆ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಕೋಲ್ಕತ್ತಾ: ವಸಂತ ಉತ್ಸವ 2013 ಅಂಗವಾಗಿ ವಿದೇಶಿ ಪ್ರವಾಸಿಗರ ಸಂಭ್ರಮ ಪಿಟಿಐ ಚಿತ್ರ: ಸ್ವಪನ್

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಫರಿದಾಬಾದ್: ಬಲ್ಲಾದ್ ಘರ್ ಬಳಿ ವಿದೇಶಿಯರಿಂದ ಹೋಳಿ ಆಟ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಕೋಲ್ಕತ್ತಾ: ಹೋಳಿ ಸಂಭ್ರಮದಲ್ಲಿ ಜಪಾನಿ ಪ್ರವಾಸಿ ಮಹಿಳೆಯರು ಚಿತ್ರ:ಅಶೋಕ್ ಭೌಮಿಕ್

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ರಾಂಚಿ: ಕಾಲೇಜು ವಿದ್ಯಾರ್ಥಿನಿಯರಿಂದ ಉಲ್ಲಾಸದ ಹೋಳಿ ಆಚರಣೆ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಕೋಳಿಕ್ಕೋಡ್: ಕೇರಳ ಶಿಸ್ತುಬದ್ಧ ಕಾನ್ವೆಂಟ್ ಗಳಲ್ಲೂ ನುಗ್ಗಿದ್ದ ಬಣ್ಣದ ಹಬ್ಬ, 10ನೇ ತರಗತಿ ಪರೀಕ್ಷೆ ನಡುವೆ ಹೋಳಿ ಆಟ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಜೈಪುರ: ಗೋವಿಂದ್ ದೇವ್ ಜೀ ದೇಗುಲ ಬಳಿ ಲಾಥ್ ಮಾರ್ ಹೋಳಿ ಹಬ್ಬ ಆಚರಣೆ ಫಾಗ್ ಮಹೋತ್ಸವ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮುಂಬೈ: ಬಾಲಿವುಡ್ ನಟಿಯರು ನೀರು ಉಳಿಸಿ, ಸುರಕ್ಷೆಯಿಂದ ಬಣ್ಣದಾಟ ಆಡಿ ಎನ್ನುತ್ತಾ ಸಂಭ್ರಮಿಸಿದ್ದು ಹೀಗೆ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮೀರತ್ : ಸೋಮಾಲಿ ಕಡಲ್ಗಳ್ಳರ ಕೈಲಿ ಸಿಲುಕಿ ನಲುಗಿದ್ದ ನಾವಿಕ ಸೌರಭ್ ಕುಮಾರ್ ಗೆ ಮರುಜನ್ಮದ ಹೋಳಿ ಹಬ್ಬ ಸಂಭ್ರಮ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮುಂಬೈ: ವಿವಾದಿತ ಗುರೂಜಿ ಅಸರಾಮ್ ಬಾಪು ಅನುಯಾಯಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಜಟಾಪಟಿ ಪೊಲೀಸರ ಆಗಮನ

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಮುಂಬೈ: ಐರೋಲಿಯಲ್ಲಿ ದೇವ ಮಾನವ ಅಸರಾಮ್ ಬಾಪು ಹೋಳಿ ಆಚರಣೆ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+