ಅಮೃತಸರದಲ್ಲಿ ಕಾರಿನಲ್ಲಿ ಯುವತಿಯ ಅತ್ಯಾಚಾರ

ಸುಪರಿಂಟೆಂಡ್ ಆಫ್ ಪೊಲೀಸ್ ಹರಜಿತ್ ಸಿಂಗ್ ಬ್ರಾರ್ ಅವರ ಪ್ರಕಾರ, ಯುವತಿ ಸೋಮವಾರ ಸಂಜೆ 7.30ರ ಸುಮಾರಿ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದಾಗ, ಬೂದುಬಣ್ಣದ ಕಾರಿನಲ್ಲಿ ಆಕೆಯನ್ನು ಸೆಳೆದುಕೊಂಡು ನಂತರ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.
ಆ ಸಂದರ್ಭದಲ್ಲಿ ಕಾರಿನಲ್ಲಿ ಕೇವಲ ಇಬ್ಬರೇ ಇದ್ದರು. ಒಬ್ಬ ಕಾರು ಚಲಾಯಿಸುತ್ತಿದ್ದರೆ ಮತ್ತೊಬ್ಬ ಯುವತಿಯನ್ನು ಕಾರಿನಲ್ಲಿ ಸೆಳೆದಿದ್ದಾನೆ. ಸ್ವಲ್ಪ ದೂರದ ವೃತ್ತದಲ್ಲಿ ಮತ್ತೊಬ್ಬ ಹತ್ತಿಕೊಂಡರೆ, ವೆರ್ಕಾ ಎಂಬ ಪ್ರದೇಶಕ್ಕೆ ಕಾರು ಸಾಗಿದೆ. ಅಲ್ಲಿ, ಇನ್ನೊಬ್ಬ ಅತ್ಯಾಚಾರಿ ಹತ್ತಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಲಿಸುತ್ತಿದ್ದ ಕಾರಿನಲ್ಲಿ ಎಲ್ಲ ನಾಲ್ವರು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆಯನ್ನು ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿ ಇಳಿಸಲಾಗಿದೆ. ಆ ನಾಲ್ವರಲ್ಲಿ ಇಬ್ಬರ ಗುರುತು ಸಿಕ್ಕಿದ್ದು, ತಲೆಮರೆಸಿಕೊಂಡಿರುವ ಎಲ್ಲ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಯುವತಿಯ ವೈದ್ಯಕೀಯ ಪರೀಕ್ಷೆ ನಡೆದು ಆಕೆಯನ್ನು ಯುವಕರು ಸಂಭೋಗಿಸಿರುವುದು ನಿಜ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಆಕೆಯ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವೈದ್ಯರು ಸರ್ಟಿಫಿಕೇಟ್ ಕೊಟ್ಟಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.
ಯುವತಿಯ ಮೊಬೈಲ್ ಸಂಖ್ಯೆಗೆ ಬಂದ ಕರೆಗಳನ್ನು ಗಮನಿಸಿದಾಗ, ಆಕೆಯ ಅಪಹರಣವಾಗುವ ಮೊದಲು ಅನೇಕ ಕರೆಗಳು ಬಂದಿರುವುದು ದೃಢಪಟ್ಟಿದೆ. ಅತ್ಯಾಚಾರ ಮಾಡಿದ ಯುವಕರು ಯುವತಿಗೆ ಮೊದಲೇ ಗೊತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯುವತಿಯನ್ನೂ ಪೊಲೀಸರು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ.












Click it and Unblock the Notifications