ಭ್ರಷ್ಟ ಬಿಜೆಪಿಯೊಡನೆ ಜೆಡಿಎಸ್ ಎಂದಿಗೂ ಕೈ ಜೋಡಿಸಲ್ಲ

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೊರ ಹಾಕಿದ ನಂತರ ಮಾ.18ರಂದು ಇನ್ನೂ 26 ಕ್ಷೇತ್ರಗಳ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಮಾ.23ರಂದು 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೊರ ಬೀಳಬೇಕಿತ್ತು. ಆದರೆ, ಪಟ್ಟಿಯನ್ನು ಫಿಲ್ಟರ್ ಮಾಡುವ ಕಾರ್ಯದಲ್ಲಿ ವರಿಷ್ಠರಾದ ದೇವೇಗೌಡ ಅವರು ನಿರತರಾಗಿದ್ದು, ತಿಂಗಳ ಅಂತ್ಯಕ್ಕೆ ಪೂರ್ಣ ಪಟ್ಟಿ ನಿರೀಕ್ಷಿಸಬಹುದು.
ಲಭ್ಯ ಮಾಹಿತಿ ಪ್ರಕಾರ 28+26 ಕ್ಷೇತ್ರಗಳ ನಂತರ 169 ಕ್ಷೇತಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮಾ.30 ರೊಳಗೆ 224 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಹೊರಹಾಕಲಾಗುತ್ತೆ ಎಂದು ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಹೇಳಿದ್ದಾರೆ.
ಭ್ರಷ್ಟರೊಡನೆ ಕೈ ಜೋಡಿಸಲ್ಲ: ರಾಜ್ಯದಲ್ಲಿನ ಅಲ್ಪಸಂಖ್ಯಾತರಲ್ಲಿ ಗೊಂದಲ ಉಂಟು ಮಾಡುವ ಉದ್ದೇಶದಿಂದ ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೆಸ್ಸೆಸ್ ಕಾರ್ಯಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿರುವ ಭ್ರಷ್ಟ ಆಡಳಿತವನ್ನು ರಾಜ್ಯದ ಜನತೆ ಕಂಡಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತ ಮತದಾರರಲ್ಲಿ ಬೇಸರ ಮೂಡಿಸಿದೆ. ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷ ಈ ಬಗ್ಗೆ ಚಕಾರವೆತ್ತಿಲ್ಲ ಎಂಬುದು ಜನತೆಗೆ ತಿಳಿದಿದೆ. ಹಾಗಾಗಿ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆಭ್ರಷ್ಟರೊಡನೆ ಜೆಡಿಎಸ್ ಕೈಜೋಡಿಸಲ್ಲ ಎಂದು ನಾಣಯ್ಯ ಹೇಳಿದರು.
ಜೆಡಿಎಸ್ ಪಕ್ಷಕ್ಕೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಇದನ್ನು ಸಹಿಸದ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯ ಮೊದಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೆಲವು ಸಚಿವರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅಲ್ಲದೆ, ಹಲವು ಶಾಸಕರ ಹಾಗೂ ಸಚಿವರ ಮೇಲೆ ಲೋಕಾಯುಕ್ತ ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಜೆಡಿಎಸ್ ಬಿಟ್ಟರೆ ಯಾವುದೇ ಪಕ್ಷ ಪ್ರಶ್ನೆ ಮಾಡುವುದಕ್ಕೆ ಮುಂದಾಗಿಲ್ಲ ಎಂದು ನಾಣಯ್ಯ ಹೇಳಿದರು.
ಪಕ್ಷೇತರರು ಸೇರಿದಂತೆ 16 ಜನ ಶಾಸಕರನ್ನು ವಿಧಾನ ಸಭಾಧ್ಯಕ್ಷ ಕೆ.ಜಿ. ಭೋಪಯ್ಯ ಪಕ್ಷಪಾತಿಯಾಗಿ ವರ್ತಿಸಿ ಅನರ್ಹಗೊಳಿಸಿದ್ದರು. ಈ ಸಂದರ್ಭ ದಲ್ಲಿ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಕ್ಕೆ ಜೆಡಿಎಸ್ ಮುಂದಾಗಿತ್ತು. ಶಾಸಕರ ಕೊರತೆ ಯಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಈ ನಿರ್ಧಾರಕ್ಕೆ ಮುಂದಾಗಲಿಲ್ಲ. ಈ ಎಲ್ಲ ಅಂಶಗಳು ಜನತೆಯ ಮುಂದಿದ್ದು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಅವರು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
ವಿಧಾನಸಭೆ ಚುನಾವಣೆ ವಿಶೇಷ ಪುಟ
ಎಲೆಕ್ಷನ್ ಚಿತ್ರಾವಳಿ












Click it and Unblock the Notifications