ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿನಿ ಸಮರ : ಮೀಸಲಾತಿ ಪಟ್ಟಿಗೆ ನೀತಿ ಸಂಹಿತೆ ಅಡ್ಡಿ

|
Google Oneindia Kannada News

Karnataka
ಬೆಂಗಳೂರು, ಮಾ.22 : ವಿಧಾನಸಭೆ ಚುನಾವಣೆ ಪ್ರಕಟಗೊಂಡ ತಕ್ಷಣ ರಾಜಕೀಯ ಪಕ್ಷಗಳು ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕಷ್ಟಪಟ್ಟು ಗೆದ್ದು ಬಂದ ಅಭ್ಯರ್ಥಿಗಳಿಗೆ ಇದರಿಂದ ಹಿನ್ನಡೆಯಾಗಿದೆ. ನೀತಿ ಸಂಹಿತೆ ಜಾರಿಯಾಗಿರುವುರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಬುಹುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಮಾ.7ರಂದು ನಡೆದ ರಾಜ್ಯದ 208 ಸ್ಥಳೀಯ ಸಂಸ್ಥೆಗಳು ಮತ್ತು ಏಳು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಾ.11ರಂದು ಪ್ರಕಟಗೊಂಡಿದೆ. ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿತ್ತು.

ಸರ್ಕಾರದ ವಿಳಂಬದ ನಡುವೆಯೇ ವಿಧಾನಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿತು. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಪಟ್ಟಿ ಪಕ್ರಟಿಸಬಹುದೇ? ಎಂಬ ಗೊಂದಲದಲ್ಲಿ ಸರ್ಕಾರ ಸಿಲುಕಿದೆ.

ಮೀಸಲಾತಿ ಪಟ್ಟಿ ಪ್ರಕಟಣೆ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಾಹಿತಿ ಪಡೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮೀಸಲಾತಿ ಪಟ್ಟಿ ಸಿದ್ಧಗೊಳಿಸಿಕೊಂಡು ಸರ್ಕಾರದ ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

ಪಟ್ಟಿಗೆ ಅಂತಿಮ ಮುದ್ರೆ ನೀಡಬೇಕಾದ ಮುಖ್ಯಮಂತ್ರಿಗಳು ಚುನಾವಣಾ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಮೀಸಲಾತಿ ಪಟ್ಟಿಗೆ ಅನುಮೋದನೆ ನೀಡಬಹುದೇ ಎಂಬ ಬಗ್ಗೆಯೂ ಸರ್ಕಾರದ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಆದ್ದರಿಂದ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

ಎಂಟು ದಿನದಲ್ಲಿ ಮೂರು ಬಾರಿ ಸಂಪುಟ ಸಭೆ ನಡೆಸಿ ಮುಖ್ಯಮಂತ್ರಿಗಳು ಮಠ ಮಾನ್ಯಗಳಿಗೆ ಹಣ ನೀಡುವುದರಲ್ಲೇ ಕಾಲ ಕಳೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಬಗ್ಗೆ ಆಲೋಚಿಸಲಿಲ್ಲ. ಸದ್ಯ ಪಟ್ಟಿ ಪ್ರಕಟಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ. ಚುನಾವಣಾ ಆಯೋಗದಿಂದ ಬರುವ ಉತ್ತರದ ಮೇಲೆ ಸ್ಥಳೀಯ ಸಂಸ್ಥೆಗಳಿಗೆ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರೋ ? ಇಲ್ಲವೋ ತಿಳಿಯಲಿದೆ.

ತ್ವರಿತ ಆಯ್ಕೆ ಉತ್ತಮ : ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಇದೆ. ರಾಜಕೀಯ ನಾಯಕರು ಚುನಾವಣಾ ಸಿದ್ದತೆಯಲ್ಲಿದ್ದಾರೆ. ಆದ್ದರಿಂದ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುಲು ನೂತನ ಅಧ್ಯಕ್ಷ, ಉಪಾಧ್ಯಕ್ಷರು ತ್ವರಿತವಾಗಿ ಆಯ್ಕೆಯಾಗುವುದು ಉತ್ತಮವಾಗಿದೆ.

ಏಳು ಮಹಾನಗರ ಪಾಲಿಕೆಗಳಿಗೆ ನೂತನ ಮೇಯರ್ ಆಯ್ಕೆಯಾಗುವವರೆಗೆ ಜಿಲ್ಲಾಧಿಕಾರಿಗಳು ಪ್ರಭಾರಿ ಆಡಳಿತಾಧಿಕಾರಿ ಆಗಿ ಕೆಲಸ ನಿರ್ವಹಸಬೇಕಾಗುತ್ತದೆ. ವಿಧಾನಸಭೆ ಚುನಾವಣೆಯ ಪರಿಶೀಲನೆ, ಮಹಾಣಗರ ಪಾಲಿಕೆ ಕೆಲಸ ಮುಂತಾದವುಗಳಿಂದ ಜಿಲ್ಲಾಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ ಆದ್ದರಿಂದ ಮೀಸಲಾತಿ ಪಟ್ಟಿ ಪ್ರಕಟಗೊಂಡು ಹೊಸ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆ ತ್ವರಿತವಾಗಿ ಆಗಬೇಕಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka is under assembly election code of conduct. By the this Urban Local Bodies election president and vice president reservation list not announced. Govt request for State Election Commission to clear that if announcing reservation list will come under the election code of conduct or not. May be election commission give its suggestion within Two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X