'ಬಿಜೆಪಿಗೆ ಇಷ್ಟು ಬೇಗ ಇಂತಹ ದಯನೀಯ ಸ್ಥಿತಿಯೇ!?'

ಕೈಕೊಟ್ಟಿದ್ದು ಚಿಹ್ನೆ; ಆದರೂ ತೃಪ್ತಿ ತಂದಿದೆ: ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ವಾರ್ಡ್ ಬೈ ವಾರ್ಡ್ ಫಲಿತಾಂಶವನ್ನು ವಿಶ್ಲೇಷಣೆ ಮಾಡುತ್ತಾ ವಿರೋಧಿ ಪಕ್ಷಗಳನ್ನು ಓರೆಗೆ ಹಚ್ಚಿದ ಯಡಿಯೂರಪ್ಪ ಆ ಪಕ್ಷಗಳ ಸಾಧನೆ ಕಳಪೆಯಾಗಿದೆ ಎಂದು ಜರಿದಿದ್ದಾರೆ.
2-3 ತಿಂಗಳ ಕೂಸು ಕೆಜೆಪಿ. ಇಷ್ಟು ಅಲ್ಪಾವಧಿಯಲ್ಲೇ 274 ವಾರ್ಡುಗಳನ್ನು ಗೆದ್ದುಕೊಂಡಿರುವುದು ಉತ್ತಮ ಸಾಧನೆಯೇ. ಇದು ತಮಗೆ ತೃಪ್ತಿ ತಂದಿದೆ ಎಂದು ಕೆಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಇಲ್ಲದ ಬಿಜೆಪಿಗೆ ಯಾವ ಗತಿ ಬರುತ್ತದೆ ಎಂಬುದು ನಿನ್ನೆಯ ಫಲಿತಾಂಶದಿಂದ (ಬಿಜೆಪಿ ಹಿಂದಿನ ಚುನಾವಣೆಗಿಂತ 274 ವಾರ್ಡುಗಳನ್ನು ಕಳೆದುಕೊಂಡಿದೆ) ಸಾಬೀತಾಗಿದೆ. ಬಿಜೆಪಿಗೆ ಇಷ್ಟು ಬೇಗ ಇಂತಹ ದಯನೀಯ ಪರಿಸ್ಥಿತಿ ಬರುತ್ತದೆ ಎಂದು ಎಣಿಸಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಪಕ್ಷಕ್ಕೆ ದೊರೆತ ತೆಂಗಿನಕಾಯಿ ಹೋಳು ಚಿಹ್ನೆ ಮತದಾರರಲ್ಲಿ ಸಾಕಷ್ಟು ಗೊಂದಲವನ್ನುಂಟುಮಾಡಿದೆ. ಇದರಿಂದಾಗಿ ಪಕ್ಷಕ್ಕೆ ನಿರೀಕ್ಷಿತ ಸಾಧನೆ ಮಾಡಲಾಗಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಗಾಗಿ ಸೈಕಲ್ ಚಿಹ್ನೆಯನ್ನೇ ನೀಡುವಂತೆ ಕೋರಲಾಗಿದೆ. ಮತದಾರರು ಮುಂದಿನ ಚುನಾವಣೆಯಲ್ಲಿ ಯಾವುದೇ ಗೊಂದಲವಿಲ್ಲದೆ ಸೈಕಲ್ ಗುರುತಿನ ಕೆಜೆಪಿ ಪಕ್ಷಕ್ಕೇ ಮತ ನೀಡಬೇಕು ಎಂದು ಅವರು ಆಶಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications