ಕಳೆದ ಚುನಾವಣೆಯ ಫೋಟೋ ಫಿನಿಷ್ ಫಲಿತಾಂಶಗಳು
ಬೆಂಗಳೂರು, ಮಾ 22: ಕೇಂದ್ರ ಚುನಾವಣಾ ಆಯೋಗ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಮಾಡಿದ ನಂತರ ಐದು ಪ್ರಮುಖ ಪಕ್ಷಗಳು ಮೈಖೊಡವಿ ಸಜ್ಜಾಗಿದೆ.
ದಕ್ಷಿಣಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕುಂಟುತ್ತಾ, ಎಡವುತ್ತಾ ಹುಷಪ್ಪಾ.. ಎನ್ನುತ್ತಾ ಐದು ವರ್ಷದ ಅವಧಿಯನ್ನು ಅಂತೂ ಇಂತೂ ಮುಗಿಸಿದ ಸಾಧನೆ ಮಾಡಿದೆ.
2008ರ ಚುನಾವಣೆಯಲ್ಲಿ ಅವಿಭಜಿತ ಬಿಜೆಪಿ ಪಕ್ಷ ಯಡಿಯೂರಪ್ಪ ನಾಯಕತ್ವದಲ್ಲಿ ಯಶಸ್ವಿಯಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂತು. ಬಹುಮತಕ್ಕೆ ಬೇಕಾಗಿದ್ದ ಶಾಸಕರನ್ನು ಆಪರೇಷನ್ ಕಮಲ, ರಿಸಾರ್ಟ್ ರಾಜಕಾರಣದಂತ ಮಡಿವಂತಿಕೆಯಿಂದ ದೂರವಾದ ಕೆಲಸವನ್ನು ಮಾಡಿ ಸರಕಾರವನ್ನು ಸುಭದ್ರಗೊಳಿಸಿತು.
ಪ್ರಸಕ್ತ ಚುನಾವಣೆಗೆ ಮುನ್ನ 2008ರ ಚುನಾವಣೆಯ ಫಲಿತಾಂಶದ ಕಡೆ ಒಂದು ಸಣ್ಣ ಹಿನ್ನೋಟ. ಜಿದ್ದಾಜಿದ್ದಿನ ಹೋರಾಟದಲ್ಲಿ ಒಂದು ಸಾವಿರ ಮತದ ಆಸುಪಾಸಿನಲ್ಲಿ ಗೆದ್ದವರ ಮತ್ತು ಬಿದ್ದವರ ಪಟ್ಟಿ ಇಂತಿದೆ.
2008ರ ಚುನಾವಣೆಯಲ್ಲಿ ಭಾರೀ ಮತದ ಅಂತರದಿಂದ ಗೆದ್ದವರ ಪಟ್ಟಿ ನಿರೀಕ್ಷಿಸಿ..

ಗೆದ್ದ ಮತ್ತು ಸೋತವರ ಪಟ್ಟಿ
ಕ್ಷೇತ್ರ: ಕುಡುಚಿ
ಗೆದ್ದ ಅಭ್ಯರ್ಥಿ : ಗಾಟ್ಗೆ ಶ್ಯಾಮ ಭೀಮ (ಕಾಂಗ್ರೆಸ್,29481)
ಸೋತ ಅಭ್ಯರ್ಥಿ : ಮಹೇಂದ್ರ ಕೆ ತಮ್ಮಣ್ಣವರ್ (ಬಿಜೆಪಿ,28715)
ಗೆದ್ದ ಅಂತರ: 766 ಮತ
ಇಂಡಿ
ಗೆದ್ದ ಅಭ್ಯರ್ಥಿ : ಸಾರ್ವಭೌಮ ಬಗಲಿ ( ಬಿಜೆಪಿ, 29456)
ಸೋತ ಅಭ್ಯರ್ಥಿ : ವೈ ವಿ ಪಾಟೀಲ್ ( ಕಾಂಗ್ರೆಸ್, 28885)
ಗೆದ್ದ ಅಂತರ: 571 ಮತ

ಗೆದ್ದ ಮತ್ತು ಸೋತವರ ಪಟ್ಟಿ
ರಾಮದುರ್ಗ
ಗೆದ್ದ ಅಭ್ಯರ್ಥಿ : ಅಶೋಕ್ ಮಹಾದೇವಪ್ಪ ( ಕಾಂಗ್ರೆಸ್, 49246)
ಸೋತ ಅಭ್ಯರ್ಥಿ : ಮಹಾದೇವಪ್ಪ ಯಡ್ವಾಡ್ ( ಬಿಜೆಪಿ, 48862)
ಗೆದ್ದ ಅಂತರ: 384 ಮತ
ಜೇವರ್ಗಿ
ಗೆದ್ದ ಅಭ್ಯರ್ಥಿ : ಡಿ ಶಿವಲಿಂಗಪ್ಪ ಗೌಡ ( ಬಿಜೆಪಿ, 46531)
ಸೋತ ಅಭ್ಯರ್ಥಿ : ಎನ್ ಧರಮ್ ಸಿಂಗ್ ( ಕಾಂಗ್ರೆಸ್, 46461)
ಗೆದ್ದ ಅಂತರ: 70 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಬೀದರ್ ದಕ್ಷಿಣ
ಗೆದ್ದ ಅಭ್ಯರ್ಥಿ : ಬಂಡೆಪ್ಪ ಕಾಶಪ್ಪನವರ್ ( ಜೆಡಿಎಸ್ , 32054 )
ಸೋತ ಅಭ್ಯರ್ಥಿ : ಸಂಜಯ್ ಖೇಣಿ ( ಬಿಜೆಪಿ , 30783)
ಗೆದ್ದ ಅಂತರ: 1271 ಮತ
ಧಾರವಾಡ
ಗೆದ್ದ ಅಭ್ಯರ್ಥಿ : ಸೀಮಾ ಮಸೂತಿ ( ಬಿಜೆಪಿ , 35417 )
ಸೋತ ಅಭ್ಯರ್ಥಿ : ವಿನಯ್ ಕುಲ್ಕರ್ಣಿ ( ಕಾಂಗ್ರೆಸ್ , 34694)
ಗೆದ್ದ ಅಂತರ: 723 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಕುಮಟಾ
ಗೆದ್ದ ಅಭ್ಯರ್ಥಿ : ದಿನಕರ್ ಕೇಶವ್ ಶೆಟ್ಟಿ ( ಜೆಡಿಎಸ್ , 30792)
ಸೋತ ಅಭ್ಯರ್ಥಿ : ಮೋಹನ್ ಕ್ರಿಶ್ನ ಶೆಟ್ಟಿ ( ಕಾಂಗ್ರೆಸ್ , 30772)
ಗೆದ್ದ ಅಂತರ: 20 ಮತ
ಬಳ್ಳಾರಿ ನಗರ
ಗೆದ್ದ ಅಭ್ಯರ್ಥಿ : ಸೋಮಶೇಖರ ರೆಡ್ಡಿ ( ಬಿಜೆಪಿ , 54831)
ಸೋತ ಅಭ್ಯರ್ಥಿ : ಅನಿಲ್ ಲಾಡ್ ( ಕಾಂಗ್ರೆಸ್ , 53809)
ಗೆದ್ದ ಅಂತರ: 1022 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಚಳ್ಳಕೆರೆ
ಗೆದ್ದ ಅಭ್ಯರ್ಥಿ : ತಿಪ್ಪೇಸ್ವಾಮಿ ( ಬಿಜೆಪಿ , 42591)
ಸೋತ ಅಭ್ಯರ್ಥಿ : ಶಶಿಕುಮಾರ್ ( ಕಾಂಗ್ರೆಸ್ , 42302)
ಗೆದ್ದ ಅಂತರ: 289 ಮತ
ಹೊಸದುರ್ಗ
ಗೆದ್ದ ಅಭ್ಯರ್ಥಿ : ಗೂಳಿಹಟ್ಟಿ ಶೇಖರ್ ( ಪಕ್ಷೇತರ, 41798 )
ಸೋತ ಅಭ್ಯರ್ಥಿ : ಬಿ ಜಿ ಗೋವಿಂದಪ್ಪ ( ಕಾಂಗ್ರೆಸ್ , 40630)
ಗೆದ್ದ ಅಂತರ: 1168 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಚನ್ನಗಿರಿ
ಗೆದ್ದ ಅಭ್ಯರ್ಥಿ : ಮುಡಾಳ್ ವಿರೂಪಾಕ್ಷಪ್ಪ ( ಬಿಜೆಪಿ, 39526 )
ಸೋತ ಅಭ್ಯರ್ಥಿ : ವಡ್ನಾಳ್ ರಾಜಣ್ಣ ( ಕಾಂಗ್ರೆಸ್ , 38533)
ಗೆದ್ದ ಅಂತರ: 993 ಮತ
ಭದ್ರಾವತಿ
ಗೆದ್ದ ಅಭ್ಯರ್ಥಿ : ಬಿ ಕೆ ಸಂಗಮೇಶ್ವರ ( ಬಿಜೆಪಿ, 53257 )
ಸೋತ ಅಭ್ಯರ್ಥಿ : ಅಪ್ಪಾಜಿ ( ಜೆಡಿಎಸ್ , 52770)
ಗೆದ್ದ ಅಂತರ: 487 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಕಾಪು
ಗೆದ್ದ ಅಭ್ಯರ್ಥಿ : ಲಾಲಜಿ ಮೆಂಡನ್ ( ಬಿಜೆಪಿ, 45961 )
ಸೋತ ಅಭ್ಯರ್ಥಿ : ವಸಂತ್ ಸಾಲ್ಯಾನ್ ( ಕಾಂಗ್ರೆಸ್ , 44994)
ಗೆದ್ದ ಅಂತರ: 967 ಮತ
ಮಧುಗಿರಿ
ಗೆದ್ದ ಅಭ್ಯರ್ಥಿ : ಗೌರಿ ಶಂಕರ್ ( ಜೆಡಿಎಸ್, 51971 )
ಸೋತ ಅಭ್ಯರ್ಥಿ : ಕ್ಯಾತ್ಸಂದ್ರ ರಾಜಣ್ಣ ( ಕಾಂಗ್ರೆಸ್ , 51408)
ಗೆದ್ದ ಅಂತರ: 563 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಬಾಗೇಪಲ್ಲಿ
ಗೆದ್ದ ಅಭ್ಯರ್ಥಿ : ಎನ್ ಸಂಪಂಗಿ ( ಕಾಂಗ್ರೆಸ್, 32244 )
ಸೋತ ಅಭ್ಯರ್ಥಿ : ಶ್ರೀರಾಮ ರೆಡ್ಡಿ ( ಸಿಪಿಎಂ , 31306)
ಗೆದ್ದ ಅಂತರ: 938 ಮತ
ಚಿಂತಾಮಣಿ
ಗೆದ್ದ ಅಭ್ಯರ್ಥಿ : ಎಂ ಸಿ ಸುಧಾಕರ್ ( ಕಾಂಗ್ರೆಸ್, 58103)
ಸೋತ ಅಭ್ಯರ್ಥಿ : ಕೆ ಎಂ ಕೃಷ್ಣ ರೆಡ್ಡಿ ( ಜೆಡಿಎಸ್ , 56857 )
ಗೆದ್ದ ಅಂತರ: 1246 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಯಶವಂತಪುರ
ಗೆದ್ದ ಅಭ್ಯರ್ಥಿ : ಶೋಭಾ ಕರಂದ್ಲಾಜೆ ( ಬಿಜೆಪಿ, 57643 )
ಸೋತ ಅಭ್ಯರ್ಥಿ : ಎಸ್ ಟಿ ಸೋಮಶೇಖರ್ ( ಕಾಂಗ್ರೆಸ್ , 56561 )
ಗೆದ್ದ ಅಂತರ: 1082 ಮತ
ಬಂಟ್ವಾಳ
ಗೆದ್ದ ಅಭ್ಯರ್ಥಿ : ಬಿ ರಮಾನಾಥ್ ರೈ ( ಕಾಂಗ್ರೆಸ್, 61560 )
ಸೋತ ಅಭ್ಯರ್ಥಿ : ನಾಗರಾಜ ಶೆಟ್ಟಿ ( ಬಿಜೆಪಿ , 60309 )
ಗೆದ್ದ ಅಂತರ: 1251 ಮತ

ಗೆದ್ದ ಮತ್ತು ಸೋತವರ ಪಟ್ಟಿ
ಪುತ್ತೂರು
ಗೆದ್ದ ಅಭ್ಯರ್ಥಿ : ಮಲ್ಲಿಕಾ ಪ್ರಸಾದ್ ( ಬಿಜೆಪಿ, 46605 )
ಸೋತ ಅಭ್ಯರ್ಥಿ : ಜಗನ್ನಾಥ್ ಶೆಟ್ಟಿ ( ಕಾಂಗ್ರೆಸ್ , 45180)
ಗೆದ್ದ ಅಂತರ: 1425 ಮತ
ಪಿರಿಯಾಪಟ್ಣ
ಗೆದ್ದ ಅಭ್ಯರ್ಥಿ : ಕೆ ವೆಂಕಟೇಶ್ ( ಕಾಂಗ್ರೆಸ್, 38453)
ಸೋತ ಅಭ್ಯರ್ಥಿ : ಕೆ ಮಹಾದೇವ ( ಜೆಡಿಎಸ್ , 37574)
ಗೆದ್ದ ಅಂತರ: 879 ಮತ

ಗೆದ್ದ ಮತ್ತು ಸೋತವರ ಪಟ್ಟಿ
ನಂಜನಗೂಡು
ಗೆದ್ದ ಅಭ್ಯರ್ಥಿ : ವಿ ಶ್ರೀನಿವಾಸ ಪ್ರಸಾದ್ ( ಕಾಂಗ್ರೆಸ್, 42867)
ಸೋತ ಅಭ್ಯರ್ಥಿ : ಎಸ್ ಮಹಾದೇವಯ್ಯ ( ಬಿಜೆಪಿ , 42159)
ಗೆದ್ದ ಅಂತರ: 708 ಮತ












Click it and Unblock the Notifications