ತೂಕದಲ್ಲಿ ಮೋಸ: ಚಿನ್ನದಂಗಡಿಗಳ ಮೇಲೆ ದಾಳಿ

gold-ornaments-faulty-weighing-gold-shops-raided
ಹೈದರಾಬಾದ್, ಮಾರ್ಚ್ 20: ಹೆಂಗೆಳೆಯರೇ ಹುಷಾರು, ನಿಮಗೂ ಇಂತಹ ಅನುಭವವಾಗಬಹುದು. ಏನಪಾ ಅಂದರೆ ಚಿನ್ನದ ಮೋಹಕ್ಕೆ ಬಿದ್ದು ಖರೀದಿಸಲು ಹೋದಾಗ ಅಂಗಡಿಯವರು ಯಾಮಾರಿಸುವ ಸಾಧ್ಯತೆಯಿರುತ್ತದೆ.

'ಮುತ್ತಿನ ನಗರಿ' ಹೈದರಾಬಾದಿನಲ್ಲಿ ಹೀಗೇ ಆಗಿದೆ... ಅಂಗಡಿಗಳವರು ನಮಗೆ ಚಿನ್ನದ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಅನೇಕ ಗ್ರಾಹಕರು ಮಾಪನ ಇಲಾಖೆಗೆ ದೂರು ನೀಡಿದ್ದಾರೆ. ತಕ್ಷಣ ಇಲಾಖೆಯವರು ಎಚ್ಚೆತ್ತು ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

'ಚಿನ್ನಾಭರಣದಲ್ಲಿ ಇರುವ ಕಲ್ಲುಗಳನ್ನೂ ತೂಕ ಮಾಡಿ ಅದಕ್ಕೂ ಚಿನ್ನದ ಲೆಕ್ಕದಲ್ಲಿ ದರ ಪೀಕುತ್ತಿದ್ದಾರೆ. ಆದರೆ ಕಲ್ಲಿನ ತೂಕವನ್ನು ಪ್ರತ್ಯೇಕವಾಗಿಸಿ ಕಲ್ಲಿನ ದರ ಪಡೆಯಬೇಕು. ಹಾಗಾಗಿ ಅಂಗಡಿಯವರು ಮೋಸ ಮಾಡುತ್ತಿದ್ದಾರೆ' ಎಂದು ಮಹಿಳಾ ಗ್ರಾಹಕರು ಅಲವತ್ತುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ, Legal Metrology ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅನೇಕ ಅಂಗಡಿಗಳ ಮೇಲೆ ದಾಳಿ ನಡೆಸಿ, ಅಂಗಡಿಗಳ ಮಾಲೀಕರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಹೀಗೆ ಚಿನ್ನಾಭರಣ ಖರೀದಿ ವೇಳೆ ತೂಕದಲ್ಲಿ ಮೋಸ ಮಾಡುವ ಅಂಗಡಿಗಳ ವಿರುದ್ಧ ಮಾಹಿತಿ ನೀಡಿದರೆ ಅದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನಾಭರಣದ ತೂಕ, ಚಿನ್ನದ ಪರಿಶುದ್ಧತೆ, ಅಸಲಿ ಬಿಲ್ ನೀಡದಿರುವುದು ಇವೇ ಮುಂತಾದ ಮೋಸ ಕ್ರಮಗಳು ಗ್ರಾಹಕರ ಕಣ್ಣೀಗೆ ಬಿದ್ದರೆ ತಕ್ಷಣ ಮಾಪನ ಇಲಾಖೆಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳು ಕೋರಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+